India vs Australia: ಟಿ-20ಯಲ್ಲಿ ಶುಭಾರಂಭ ಮಾಡಿದ ಖುಷಿಯಲ್ಲಿದ್ದ ಭಾರತಕ್ಕೆ ಬರ ಸಿಡಿಲಿನಂತೆ ಬಂತು ಆಘಾತ

ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಜಡೇಜಾ, ಕೇವಲ 23 ಎಸೆತಗಳಿಗೆ 44 ರನ್ ಚಚ್ಚಿ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದರು.

Team India

Team India

 • Share this:
  ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಆಘಾತದಲ್ಲಿದ್ದ ಟೀಂ ಇಂಡಿಯಾಕ್ಕೆ ಮೊದಲ ಟಿ-20 ಪಂದ್ಯದ ಗೆಲುವು ಮರುಜೀವ ನೀಡಿದೆ. ಆದರೆ, ಶುಭಾರಂಭ ಮಾಡಿದ ಖುಷಿಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ಶುಕ್ರವಾರದ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಲು ಪ್ರಮುಖ ಕಾರಣರಾದ ರವೀಂದ್ರ ಜಡೇಜಾ ಟಿ-20 ಸರಣಿಯಿಂದಲೇ ಹೊರಬಿದ್ದಿದ್ದಾರೆ. ಬ್ಯಾಟಿಂಗ್​ನಲ್ಲಿ ಸ್ಫೋಟಕ ಪ್ರದರ್ಶನ ತೋರಿದ ಜಡೇಜಾ ಇಂಜುರಿಗೆ ತುತ್ತಾದ ಪರಿಣಾಮ ಇವರ ಬದಲು ಶಾರ್ದೂಲ್ ಠಾಕೂರ್​ಗೆ ಸ್ಥಾನ ನೀಡಲಾಗಿದೆ.

  IND vs AUS 2020: ಭಾರತದ ಪಾಲಿಗೆ ವರವಾದ ಐಸಿಸಿಯ ಹೊಸ ನಿಯಮ..!

  ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಜಡೇಜಾ, ಕೇವಲ 23 ಎಸೆತಗಳಿಗೆ 44 ರನ್ ಚಚ್ಚಿ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದರು. ಆದರೆ, ಪಂದ್ಯದ ಅಂತಿಮ ಓವರ್​ನಲ್ಲಿ ಜಡೇಜಾ ತಲೆಗೆ ಬಲವಾಗಿ ಚೆಂಡು ಬಡಿದು ಗಾಯವಾಗಿತ್ತು.

  ಟೀಂ ಇಂಡಿಯಾ ಬ್ಯಾಟಿಂಗ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆದ ಎಸೆತ ಜಡೇಜಾ ಬ್ಯಾಟಿನಂಚಿಗೆ ತಾಗಿ ನಂತರ ಬಲವಾಗಿ ಹೆಲ್ಮೆಟ್‌ಗೆ ಬಡಿದಿತ್ತು. ಬಳಿಕ ಇನಿಂಗ್ಸ್‌ ಬ್ರೇಕ್‌ನಲ್ಲಿ ಭಾರತದ ವೈದ್ಯಾಧಿಕಾರಿಗಳ ಎದುರು ಜಡೇಜಾ ಕೊಂಚ ತಲೆ ತಿರುಗುತ್ತಿರುವ ಅನುಭವ ಆಗುತ್ತಿರುವುದಾಗಿ ಹೇಳಿಕೊಂಡ ಕಾರಣ ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ಮೂಲಕ ಜಡೇಜಾ ಬದಲಿಗೆ ಯಜುವೇಮದ್ರ ಚಹಾಲ್‌ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಸಲಾಯಿತು.

  ಸದ್ಯ ಜಡೇಜಾ ಅವಲೋಕನೆಯಲ್ಲಿದ್ದು, ಅಗತ್ಯವಿದ್ದರೆ ಶನಿವಾರ ಹೆಚ್ಚಿನ ಸ್ಕ್ಯಾನ್‌ ನಡೆಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಹೀಗಾಗಿ ಜಡೇಜಾ ಅವರ ಬದಲು ಶಾರ್ದೂಲ್ ಠಾಕೂರ್ ಟಿ-20 ತಂಡ ಸೇರಿಕೊಂಡಿದ್ದಾರೆ.

  IPL 2021: ಈತನನ್ನು ಖರೀದಿಸಲು ಐಪಿಎಲ್​ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ..!

  ಇದು ಭಾರತಕ್ಕೆ ದೊಡ್ಡ ಹೊಡೆತವಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲೂ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಮೊದಲ ಟಿ-20 ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಜಡೇಜಾ ತಂಡವನ್ನು ಸೋಲಿನ ಅಂಚಿನಿಂದ ಪಾರು ಮಾಡಿದ್ದರು.

  ಜಡ್ಡು ಕೇವಲ 23 ಎಸೆತಗಳಲ್ಲಿ 191.30ರ ಸ್ಟ್ರೈಕ್‌ರೇಟ್‌ನೊಂದಿಗೆ 5 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ ಅಜೇಯ 44 ರನ್‌ಗಳನ್ನು ಸಿಡಿಸಿ ತಂಡದ ಮೊತ್ತವನ್ನು 161/7 ರನ್‌ಗಳನ್ನು ತಲುಪುವ ಹಾಗೆ ಮಾಡಿದರು. ಅದರಲ್ಲೂ ಕೊನೆಯ 2 ಓವರ್‌ಗಳಲ್ಲಿ ಜಡೇಜಾ ಒಬ್ಬರೇ 33 ರನ್‌ ಬಾರಿಸಿದ್ದು ವಿಶೇಷವಾಗಿತ್ತು.
  Published by:Vinay Bhat
  First published: