• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • India vs Australia: ಶುಭ್ಮನ್ ಗಿಲ್​ರನ್ನು ತಡೆದು ರವೀಂದ್ರ ಜಡೇಜಾ ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ

India vs Australia: ಶುಭ್ಮನ್ ಗಿಲ್​ರನ್ನು ತಡೆದು ರವೀಂದ್ರ ಜಡೇಜಾ ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ

India vs Australia

India vs Australia

ಫೀಲ್ಡಿಂಗ್​ನಲ್ಲಿ ಜಡೇಜಾ ಹಾಗೂ ಗಿಲ್ ಇಬ್ಬರೂ ಕ್ಯಾಚ್​ಗೆಂದು ಓಡಿ ಬಂದರು. ಗಿಲ್ ಹತ್ತಿರಬರುತ್ತಿರುವುದನ್ನು ಕಂಡು ಜಡೇಜಾ ಕೈ ಸನ್ನೆಯಲ್ಲಿ ನಾನೇ ಹಿಡಿಯುತ್ತೇನೆ ಎಂದರೂ ಗಿಲ್ ಕ್ಯಾಚ್​ಗೆ ಪ್ರಯತ್ನಿಸಿದರು.

 • Share this:

  ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್​ ಪಂದ್ಯ ಕುತೂಹಲದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 195 ರನ್​ಗೆ ಆಲೌಟ್ ಮಾಡಿ ಬ್ಯಾಟ್ ಮಾಡಿದ ಭಾರತ ನಾಯಕ ಅಜಿಂಕ್ಯಾ ರಹಾನೆ ಅವರ ಅಮೋಘ ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ 326 ರನ್ ಬಾರಿಸಿ 131 ರನ್​ಗಳ ಮುನ್ನಡೆ ಪಡೆದುಕೊಂಡಿತು. ಇತ್ತ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಕಾಂಗರೂ ಪಡೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್​ನಲ್ಲಿ ಜಡೇಜಾ ಹಿಡಿದ ರೋಚಕ ಕ್ಯಾಚ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.


  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತಾದರೂ ಮ್ಯಾಥ್ಯೂ ವೇಡ್ ಬಿರುಸಿನ ಆಟ ಪ್ರದರ್ಶಿಸುತ್ತಿದ್ದರು. ಇವರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದು ಆರ್. ಅಶ್ವಿನ್ ಬೌಲಿಂಗ್ ಹಾಗೂ ಜಡೇಜಾ ಹಿಡಿದ ಕ್ಯಾಚ್.


  IND vs AUS Boxing Day Test Live, Day 3


  13ನೇ ಓವರ್​ನ ಅಶ್ವಿನ್ ಬೌಲಿಂಗ್​ನಲ್ಲಿ ಮ್ಯಾಥ್ಯೂ ವೇಡ್ ಚೆಂಡನ್ನು ಸರಿಯಾಗಿ ಎದುರಿಸಲು ಸಾಧ್ಯವಾಗದ ಪರಿಣಾಮ ಟಾಪ್ ಎಡ್ಜ್ ಆಗಿ ಗಾಳಿಯಲ್ಲಿ ಮಿಡ್ ವಿಕೆಟ್ ಕಡೆ ಸಾಗಿತು. ಈ ಸಂದರ್ಭ ಫೀಲ್ಡಿಂಗ್​ನಲ್ಲಿ ಜಡೇಜಾ ಹಾಗೂ ಗಿಲ್ ಇಬ್ಬರೂ ಕ್ಯಾಚ್​ಗೆಂದು ಓಡಿ ಬಂದರು. ಗಿಲ್ ಹತ್ತಿರಬರುತ್ತಿರುವುದನ್ನು ಕಂಡು ಜಡೇಜಾ ಕೈ ಸನ್ನೆಯಲ್ಲಿ ನಾನೇ ಹಿಡಿಯುತ್ತೇನೆ ಎಂದರೂ ಗಿಲ್ ಕ್ಯಾಚ್​ಗೆ ಪ್ರಯತ್ನಿಸಿದರು. ಅಷ್ಟರಲ್ಲಿ ನಿಯಂತ್ರಣ ತಪ್ಪದ ಜಡೇಜಾ ಅದ್ಭುತ ಕ್ಯಾಚ್ ಹಿಡಿದರು.  ದಿನದಾಟ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಜಡೇಜಾ, "ಶುಭ್ಮನ್ ಗಿಲ್ ಕೂಡ ಕ್ಯಾಚ್​ಗಾಗಿ ಓಡಿ ಬರುತ್ತಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಕ್ಯಾಚ್​ಗೆಂದು ಪ್ರಯತ್ನಿಸಿದಾಗ ಗಿಲ್ ಕೈ ನನ್ನ ಕಣ್ಣಹತ್ತಿರ ಬಂತು. ನೀನ್ಯಾಕೆ ಬಾಲ್ ಹತ್ತಿರ ಓಡಿ ಬಂದೆ? ಎಂದು ಕೇಳಿದೆ. ಅದಕ್ಕೆ ಅವರು ನೀವು ಕೊಟ್ಟ ಕಾಲ್ ನನಗೆ ಕೇಳಿಸಲಿಲ್ಲ ಎಂದರು. ಅಲ್ಲದೆ ಅವರದ್ದು ಇದು ಚೊಚ್ಚಲ ಟೆಸ್ಟ್. ಸಹಜವಾಗಿ ಟೆನ್ಸ್​ನಲ್ಲಿ ಇರುತ್ತಾರೆ" ಎಂದು ಹೇಳಿದರು.


  IPL 2021: ಶ್ರೀಶಾಂತ್​ಗೆ ಒಲಿದ ಅದೃಷ್ಟ: ಖರೀದಿಗೆ ಮುಂದಾಗಿದೆ ದೊಡ್ಡ ಐಪಿಎಲ್ ಫ್ರಾಂಚೈಸಿ
  ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 195 ರನ್​ಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಅಜಿಂಕ್ಯಾ ರಹಾನೆ ಹಾಗೂ ಜಡೇಜಾ ಅವರ ಉತ್ತಮ ಆಟದ ನೆರವಿನಿಂದ 326 ರನ್ ಬಾರಿಸಿತು. ಸದ್ಯ ಎರಡನೇ ಇನ್ನಿಂಗ್ಸ್​ ಮಾಡುತ್ತಿರುವ ಆಸ್ಟ್ರೇಲಿಯಾ ಆಲೌಟ್ ಭೀತಿಯಲ್ಲಿದೆ.

  Published by:Vinay Bhat
  First published: