Rahul Dravid: ಎಲ್ಲಾ ಪ್ರಶಂಸೆ ಹುಡುಗರಿಗೆ ಸಲ್ಲಬೇಕು, ನನಗೆ ಯಾವ ಕ್ರೆಡಿಟ್ ಕೂಡ ಬೇಡ ಎಂದ ರಾಹುಲ್ ದ್ರಾವಿಡ್

ರಾಹುಲ್‌ ದ್ರಾವಿಡ್‌ ಸಂದರ್ಶನ ವೊಂದರಲ್ಲಿ ಈ ಕುರಿತು ತಮ್ಮ ನೇರ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, “ನನಗೆ ಅನಗತ್ಯ ಕ್ರೆಡಿಟ್‌ ನೀಡಲಾಗುತ್ತಿದೆ. ಹುಡುಗರು ಈ ಗೆಲುವಿಗೆ ಅರ್ಹರಾಗಿದ್ದರು. ಎಲ್ಲ ಪ್ರಶಂಸೆ ಅವರಿಗೇ ಸಲ್ಲಬೇಕು" ಎಂದಿದ್ದಾರೆ.

Rahul Dravid

Rahul Dravid

 • Share this:
  ಬೆಂಗಳೂರು (ಜ. 25): ಆಸ್ಟ್ರೇಲಿಯ ಪ್ರವಾಸದಲ್ಲಿ ಯಶಸ್ಸು ಗಳಿಸಿ ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದವರೆಲ್ಲ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆದ ಆಟಗಾರರೆಂಬುದು ಗಮನಾರ್ಹ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಇಲ್ಲದಿದ್ದರೂ ಅನುಭವಿ ಆಟಗಾರರಂತೆ ಕಾಂಗರೂಗಳ ನಾಡಿನಲ್ಲಿ ಮಿಂಚು ಹರಿಸಿದರು. ಈ ಕ್ರಿಕೆಟಿಗರ ಯಶಸ್ಸಿಗೆ ಅಂಡರ್‌-19, ಭಾರತ ಎ ತಂಡಗಳೇ ಮೂಲವಾಗಿದ್ದವು. ದ್ರಾವಿಡ್‌ ಈ ಎರಡೂ ತಂಡಗಳ ಕೋಚ್‌ ಆಗಿರುವ ಕಾರಣ ಈ ಜಯದಲ್ಲಿ ಅವರಿಗೂ ದೊಡ್ಡ ಪಾಲಿದೆ ಎಂದು ಕ್ರಿಕೆಟ್‌ ಅಭಿಮಾನಿಗಳು, ಮಾಧ್ಯಮಗಳು, ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು.

  ಆದರೆ, ಭಾರತೀಯ ಕ್ರಿಕೆಟಿಗರ ಯಶಸ್ಸಿನ ಕ್ರೆಡಿಟ್‌ ನನಗೆ ಬೇಡ. ಯುವ ಪಡೆ ಇಂಥದೊಂದು ಸಾಧನೆಗೆ, ಗೆಲುವಿಗೆ ಅರ್ಹವಾಗಿತ್ತು. ಯಶಸ್ಸಿನ ಎಲ್ಲ ಪಾಲೂ ಅವರಿಗೇ ಸಲ್ಲುತ್ತದೆ ಎನ್ನುವ ಮೂಲಕ ಮಾಜಿ ಕ್ರಿಕೆಟಿಗೆ ರಾಹುಲ್‌ ದ್ರಾವಿಡ್‌ ನೈಜ ಕ್ರೀಡಾಸ್ಫೂರ್ತಿ ತೋರಿದ್ದಾರೆ.

  BBL: ಒಂದೇ ಎಸೆತದಲ್ಲಿ ಒಬ್ಬ ಬ್ಯಾಟ್ಸ್​ಮನ್​ ಎರಡೂ ಕಡೆ ರನೌಟ್: ಹೇಗೆ?, ಈ ವಿಡಿಯೋ ನೋಡಿ

  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯಲ್ಲಿ ತವರಿಗೆ ವಾಪಾಸಾಗಿದ್ದರು. ನಂತರದಲ್ಲಿ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್​ಪ್ರೀತ್ ಬೂಮ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜಾ ಸಹಿತ ಹಲವು ಆಟಗಾರರು ಗಾಯಗೊಂಡಿದ್ದರು.

  ಈ ಸಂದರ್ಭದಲ್ಲಿ ಮೊಹಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶುಭ್ಮನ್ ಗಿಲ್ ಮತ್ತು ರಿಷಬ್ ಪಂತ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ಶ್ರೇಷ್ಠ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾದರು. ಈ ಎಲ್ಲಾ ಆಟಗಾರರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಂಡರ್ 19 ಹಾಗೂ ಭಾರತ ಎ ತಂಡವನ್ನು ಪ್ರತಿನಿಧಿಸಿವರು.

  ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಮತ್ತು ಜಾಶ್ ಹೇಝಲ್‌ವುಡ್‌ ಅವರನ್ನು ಒಳಗೊಂಡಿದ್ದ ಆಸೀಸ್‌ನ ಅನುಭವಿ ಬೌಲಿಂಗ್‌ ವಿಭಾಗವೂ ನಾಚುವಂತಹ ಪ್ರದರ್ಶನ ನೀಡಿ ಎದುರಾಳಿಯ 20 ವಿಕೆಟ್‌ಗಳನ್ನು ಉರುಳಿಸಿತ್ತು. ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್‌ 19 ವರ್ಷದೊಳಗಿನವರ ಭಾರತ ಕಿರಿಯರ ತಂಡ ಮತ್ತು ಭಾರತ 'ಎ' ತಂಡಗಳಿಗೆ ಕೋಚ್‌ ಮಾಡಿ ಟೀಂ ಇಂಡಿಯಾದ ಬೆಂಚ್‌ ಸಾಮರ್ಥ್ಯ ಬಲಪಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಹೀಗಾಗಿ ಭಾರತ ತಂಡ ಆಸೀಸ್‌ ನೆಲದಲ್ಲಿ ವಿಕ್ರಮ ಸಾಧಿಸಿದ ಶ್ರೇಯಸ್ಸು ದ್ರಾವಿಡ್‌ಗೂ ಸಲ್ಲಬೇಕು ಎಂದು ಅಭಿಮಾನಿಗಳು ಕೂಗಿ ಹೇಳಿದ್ದರು.

  ವಿಮಾನ ದುರಂತ: ಫುಟ್​​ಬಾಲ್ ಆಟಗಾರರ ದುರಂತ ಸಾವು

  ಇದೀಗ ರಾಹುಲ್‌ ದ್ರಾವಿಡ್‌ ಸಂದರ್ಶನ ವೊಂದರಲ್ಲಿ ಈ ಕುರಿತು ತಮ್ಮ ನೇರ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, “ನನಗೆ ಅನಗತ್ಯ ಕ್ರೆಡಿಟ್‌ ನೀಡಲಾಗುತ್ತಿದೆ. ಹುಡುಗರು ಈ ಗೆಲುವಿಗೆ ಅರ್ಹರಾಗಿದ್ದರು. ಎಲ್ಲ ಪ್ರಶಂಸೆ ಅವರಿಗೇ ಸಲ್ಲಬೇಕು’ ಎಂದಿದ್ದಾರೆ.

  ಸದ್ಯ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿಗೆ ಗೆದ್ದು ಬೀಗಿ ತವರಿಗೆ ಬಂದಿಳಿದಿರುವ ಟೀಂ ಇಂಡಿಯಾ ಮತ್ತೊಂದು ದೊಡ್ಡ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸುದೀರ್ಘ ಸರಣಿಯಲ್ಲಿ 4 ಟೆಸ್ಟ್ ಪಂದ್ಯ, 5 ಟಿ-20 ಪಂದ್ಯಗಳು ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಫೆಬ್ರವರಿ 5 ರಿಂದ ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗುವ ಮೂಲಕ ಚಾಲನೆ ಸಿಗಲಿದೆ.
  Published by:Vinay Bhat
  First published: