India vs Australia: ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಸ್ಟೇಟಸ್ ಹಾಕಿ ಪೃಥ್ವಿ ಶಾ ಹೇಳಿದ್ದೇನು ನೋಡಿ

ಟ್ರೋಲ್​ಗಳಿಗೆ, ಅವಮಾನಗಳಿಗೆ ಕುಗ್ಗದ ಪೃಥ್ವಿ ಶಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೇಟಸ್ ಒಂದನ್ನು ಹಾಕುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.

Prithvi Shaw

Prithvi Shaw

 • Share this:
  ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ 36 ರನ್​ಗೆ ಆಲೌಟ್ ಆಗುವ ಮೂಲಕ ಹಿಂದೆಂದೂ ನೀಡದ ಕಳಪೆ ಪ್ರದರ್ಶನ ತೋರಿದೆ. ಪ್ರಮುಖವಾಗಿ ಟೀಂ ಇಂಡಿಯಾ ಆರಂಭಿಕ ಆಟಗಾರ ಪೃಥ್ವಿ ಶಾ ನಿರಸ ಆಟ ಪ್ರದರ್ಶಿಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಆದರೆ, ಸದ್ಯ ಶಾ ಇದನ್ನೆಲ್ಲ ಮೆಟ್ಟಿನಿಂತು ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

  ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸ ಪೃಥ್ವಿ ಶಾಗೆ ಉತ್ತಮವಾಗಿರುವಂತೆ ಕಾಣುತ್ತಿಲ್ಲ. ಅಭ್ಯಾಸ ಪಂದ್ಯದಲ್ಲೇ ವೈಫಲ್ಯ ಅನುಭವಿಸಿದರು ಮೊದಲ ಟೆಸ್ಟ್​ನಲ್ಲಿ ಅವಕಾಶ ನೀಡಲಾಯಿತು. ಆದರೆ, ಮೊದಲನೇ ಇನಿಂಗ್ಸ್ ನಲ್ಲಿ ಶಾ ಶೂನ್ಯ ಸುತ್ತಿದರೆ, ಎರಡನೇ ಇನಿಂಗ್ಸ್ ನಲ್ಲಿ ಕೇವಲ 4 ರನ್ ಗಳಿಗೆ ವಿಕೆಟ್ ಗಳನ್ನು ಒಪ್ಪಿಸಿದರು. ಎರಡೂ ಬಾರಿ ಕ್ಲೀನ್ ಬೌಲ್ಡ್ ಆಗಿರುವ ಪೃಥ್ವಿ, ಸತತ ವೈಫಲ್ಯಕ್ಕೊಳಗಾದರು.

  ICC Test Rankings: ಭಾರತ ಸೋತರೂ ರ‍್ಯಾಂಕಿಂಗ್ ಏರಿಕೆ ಕಂಡ ವಿರಾಟ್ ಕೊಹ್ಲಿ, ಸ್ಮಿತ್ ಸ್ಥಾನಕ್ಕೆ ಕುತ್ತು

  ವೃತ್ತಿ ಜೀವನದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿರುವ ಪೃಥ್ವಿ ಶಾ, ಬಳಿಕ ಗಾಯದಿಂದಾಗಿ ತಂಡದಿಂದ ಹೊರಗುಳಿಯುವಂತಾಯಿತು. ಈಗ ತಂಡವನ್ನು ಸೇರಿದರೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಇದರಿಂದ ಕೇವಲ ಅವರಿಗೆ ಮಾತ್ರವಲ್ಲ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುತ್ತಿಲ್ಲ.

  ಫೀಲ್ಡಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿರುವ ಪೃಥ್ವಿ ಶಾ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಸಾಕಷ್ಟು ಟೀಕೆಗೊಳಗಾದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಅಭಿಷೇಕವಾಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ನೈಟ್, ಪೃಥ್ವಿ ಶಾ ಭಾರತ ತಂಡದಿಂದ ಹೊರಗುಳಿದರೆ ಉತ್ತಮ ಎನ್ನುವ ಅಭಿಪ್ರಾಯ ಹೊರಹಾಕಿದರು.

  ಆದರೆ, ಇದರಿಂದ ಕುಗ್ಗದ ಶಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೇಟಸ್ ಒಂದನ್ನು ಹಾಕುವ ಮೂಲಕ ಟ್ರೋಲ್ ಮಾಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. "ಕೆಲವು ಸಂದರ್ಭಗಳಲ್ಲಿ ಜನರು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಪ್ರಯತ್ನಿಸಬಹುದು.ಅದರ ಅರ್ಥ ಆ ಕೆಲಸ ನಿಮ್ಮಿಂದ ಸಾಧ್ಯವೇ ಹೊರತು ಅವರಿಂದ ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.

  IND vs AUS; ರಾಹುಲ್​ ದ್ರಾವಿಡ್​ರನ್ನು ಆಸ್ಟ್ರೇಲಿಯಾಗೆ ಕಳಿಸಿ; ಮಾಜಿ ಆಟಗಾರ ವೆಂಗ್​ ಸರ್ಕಾರ್​ ಒತ್ತಾಯ

  India vs Australia: Prithvi Shaw Instagram posts cryptic message for poor show in 1st Test
  ಪೃಥ್ವಿ ಶಾ ಸ್ಟೇಟಸ್.


  ಭಾರತ – ಆಸ್ಟ್ರೇಲಿಯಾ ನಡುವಣ ಎರಡನೇ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯ ಡಿ. 26 ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ. ಓಪನರ್ ಆಗಿ ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಆಡುವ ಅಂದಾಜಿದೆ. ಜೊತೆಗೆ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಜಾಗದಲ್ಲಿ ರಿಷಭ್ ಪಂತ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ.
  Published by:Vinay Bhat
  First published: