4ನೇ ಕ್ರಮಾಂಕ ಸಮಸ್ಯೆ ಮುಗಿದ ಬೆನ್ನಲ್ಲೆ ಟೀಂ ಇಂಡಿಯಾಕ್ಕೆ ಎದುರಾಗಿದೆ ಮತ್ತೊಂದು ಕಂಟಕ!

ಉದಾಹರಣೆಗೆ ಭಾರತ 32 ಓವರ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದ್ದರೆ, ನಂತರ ಬರುವ ಬ್ಯಾಟ್ಸ್​ಮನ್​​ಗಳು ತಂಡದ ಮೊತ್ತವನ್ನು 300ರ ಗಡಿ ದಾಟಿಸಿಲು ಪರದಾಡುವಂತಹ ಪರಿಸ್ಥಿತಿ ಭಾರತದಲ್ಲಿದೆ.

Vinay Bhat | news18-kannada
Updated:January 13, 2020, 11:08 AM IST
4ನೇ ಕ್ರಮಾಂಕ ಸಮಸ್ಯೆ ಮುಗಿದ ಬೆನ್ನಲ್ಲೆ ಟೀಂ ಇಂಡಿಯಾಕ್ಕೆ ಎದುರಾಗಿದೆ ಮತ್ತೊಂದು ಕಂಟಕ!
ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು, ಕೇದರ್ ಜಾಧವ್ ಹೊರಗುಳಿದಿದ್ದಾರೆ.
  • Share this:
ಬೆಂಗಳೂರು (ಜ. 13): ಟೀಂ ಇಂಡಿಯಾಕ್ಕೆ ಬಹುಕಾಲದಿಂದ ಕಾಡುತ್ತಿದ್ದ ನಂಬರ್ 4 ಕ್ರಮಾಂಕದ ಸಮಸ್ಯೆಯನ್ನು ಶ್ರೇಯಸ್ ಐಯರ್ ಬಗೆಹರಿಸಿದ್ದಾರೆ. ಸದ್ಯ ನಾಲ್ಕನೇ ಸ್ಥಾನಕ್ಕೆ ಖಾಯಂ ಸದಸ್ಯನಾಗಿರುವ ಐಯರ್ ಉತ್ತಮ ಫಾರ್ಮ್​ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ.

ಹೀಗೆ ನಾಲ್ಕನೇ ಕ್ರಮಾಂಕದ ಸಮಸ್ಯೆ ಪರಿಹಾರವಾದ ಬೆನ್ನಲ್ಲೆ ಟೀಂ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಕಂಟಕ ಎದುರಾಗಿದೆ. ಈ ಸಮಸ್ಯೆ ಮುಂಬರುವ ಆಸ್ಟ್ರೇಲಿಯಾ- ನ್ಯೂಜಿಲೆಂಡ್ ಸರಣಿಯಲ್ಲಿ ಭಾರತಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

India vs Australia: Number 4 issue resolved, stats reveal newer, bigger problem for Team India in ODIs
ಹಾರ್ದಿಕ್ ಪಾಂಡ್ಯ ಹಾಗೂ ಮಹೇಂದ್ರ ಸಿಂಗ್ ಧೋನಿ.


MS Dhoni: ಅಂದು ನಾನೇಕೆ ಡೈವ್ ಮಾಡಲಿಲ್ಲ ಎಂದು ಈಗಲೂ ಕಾಡುತ್ತಿದೆ; ಮೌನ ಮುರಿದ ಧೋನಿ!

ಭಾರತ ತಂಡ ಉತ್ತಮ ಓಪನರ್​ಗಳ ಜೊತೆ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಆದರೆ, ಲೋವರ್ ಆರ್ಡನ್ ಸಮಸ್ಯೆ ಈಗ ಎದುರಾಗಿದ್ದು ಬಿಸಿಸಿಐಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಟೀಂ ಇಂಡಿಯಾಕ್ಕೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಿ ಗೋಚರಿಸುತ್ತಿದೆ.

ಈ ಹಿಂದೆ ಭಾರತದ ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿದರೆ ಅಥವಾ ಪಂದ್ಯವನ್ನು ಫಿನಿಶಿಂಗ್ ಮಾಡುವ ಜವಾಬ್ದಾರಿ 6 ಮತ್ತು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಧೋನಿ ಮತ್ತು ಹಾರ್ದಿಕ್ ವಹಿಸಿಕೊಳ್ಳುತ್ತಿದ್ದರು. ಆದರೀಗ ಭಾರತದ ಲೋವರ್ ಆರ್ಡರ್​ನಲ್ಲಿ ಅನುಭವಿ ಆಟಗಾರರು ಇಲ್ಲದಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ.

ಕಿವೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಯಾಕೆ ಗೊತ್ತಾ?ಅಲ್ಲದೆ 2019 ಜನವರಿ ಬಳಿಕ 6ನೇ ಕ್ರಮಾಂಕದಲ್ಲಿ ಹಾಗೂ ನಂತರ ಬಂದ ಬ್ಯಾಟ್ಸ್​ಮನ್​ಗಳ ಆಟವನ್ನು ಗಮನಿಸಿದರೆ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. 2019 ಜನವರಿಯಿಂದ 6ನೇ ಕ್ರಮಾಂಕ ಸೇರಿ 11ನೇ ಕ್ರಮಾಂಕದ ವರೆಗೆ ಆಡಿದವರ​​ ಒಟ್ಟಾರೆ ಸ್ಟ್ರೈಕ್​ರೇಟ್​ನಲ್ಲಿ ಭಾರತ 91.47 ಸ್ಟ್ರೈಕ್​ರೇಟ್ ಹೊಂದಿದೆ.

ಈ ಪೈಕಿ ಪಾಕಿಸ್ತಾನದ ಲೋವರ್ ಆರ್ಡರ್ ತುಂಬಾನೇ ಬಲಿಷ್ಠವಾಗಿದೆ. ಇವರ ಲೋವರ್ ಆರ್ಡರ್ ಸ್ಟ್ರೈಕ್​​ರೇಟ್ 104.95 ಇದ್ದರೆ, ಆಸ್ಟ್ರೇಲಿಯಾ 104.64 ಸ್ಟ್ರೈಕ್​ರೇಟ್ ಹೊಂದಿದೆ.

ಉದಾಹರಣೆಗೆ ಭಾರತ 32 ಓವರ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದ್ದರೆ, ನಂತರ ಬರುವ ಬ್ಯಾಟ್ಸ್​ಮನ್​​ಗಳು ತಂಡದ ಮೊತ್ತವನ್ನು 300ರ ಗಡಿ ದಾಟಿಸಿಲು ಪರದಾಡುವಂತಹ ಪರಿಸ್ಥಿತಿ ಭಾರತದಲ್ಲಿದೆ.

Ranji Trophy: ಪೂಜಾರ ದ್ವಿಶತಕ; ಜಾಕ್ಸನ್ ಶತಕ; ಸೌರಾಷ್ಟ್ರ 581 ರನ್​ಗೆ ಡಿಕ್ಲೇರ್; ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ!

ಸದ್ಯ ಲೋವರ್ ಆರ್ಡರ್​​ನಲ್ಲಿ ಭಾರತ ಪರ ಕೇದರ್ ಜಾಧವ್ ಹಾಗೂ ರವೀಂದ್ರ ಜಡೇಜಾ ಬ್ಯಾಟ್ ಬೀಸುತ್ತಿದ್ದಾರೆ. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರು ಜಾಧವ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಇತ್ತ ಜಡೇಜಾ ಕೆಲವು ಪಂದ್ಯಗಳಲ್ಲಿ ಮಾತ್ರ ಅಬ್ಬರಿಸುತ್ತಿದ್ದಾರಷ್ಟೆ.

ಹೀಗಾಗಿ ಸದ್ಯ ಟೀಂ ಇಂಡಿಯಾಕ್ಕೆ ಲೋವರ್ ಆರ್ಡರ್​​ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸ್ಥಾನಕ್ಕೆ ಸೂಕ್ತ ಅನುಭವಿ ಆಟಗಾರ ಅವಶ್ಯಕತೆ ಭಾರತಕ್ಕಿದೆ. ಒಟ್ಟಾರೆ ನಂಬರ್ 4 ಕ್ರಮಾಂಕದ ಸಮಸ್ಯೆ ಪರಿಹಾರ ಆಯ್ತು ಎಂಬುವ ಹೊತ್ತಿಗೆ ಮತ್ತೊಂದು ಕಂಟಕ ಎದುರಾಗಿರುವುದು ಮುಂದಿನ ದಿನಗಳಲ್ಲಿ ಭಾರತಕ್ಕೆ ಮತ್ತಷ್ಟು ತಲೆನೋವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading