ಬೆಂಗಳೂರು (ಜ. 21): ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಕ್ತಯಾಗೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡೂ ಆಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ನಿರ್ಣಾಯಕ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಜಯ ಸಾಧಿಸಿ ಸರಣಿ ತನ್ನದಾಗಿಸಿತು.
ಈ ಪಂದ್ಯದಲ್ಲಿ
ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಮಿಂಚಿದರು. 132 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಬಾರಿಸಿ 131 ರನ್ ಚಚ್ಚಿದರು. ಇದು ಸ್ಮಿತ್ ಅವರು ಮೂರು ವರ್ಷಗಳ ಬಳಿಕ ಬಾರಿಸಿದ ಸೆಂಚುರಿ ಆಯಿತು. 2017ರ ಜನವರಿ 19ರಂದು ಪಾಕ್ ವಿರುದ್ಧ ಪರ್ತ್ನಲ್ಲಿ ಸ್ಮಿತ್ ಕೊನೆಯ ಏಕದಿನ ಕ್ರಿಕೆಟ್ ಶತಕ ಬಾರಿಸಿದ್ದರು.
ಇವರ ಶತಕದ ನೆರವಿನಿಂದಲೇ ಆಸ್ಟ್ರೇಲಿಯಾ ಸವಾಲಿನ ಮೊತ್ತ ಕಲೆಹಾಕಲು ಕಾರಣವಾಯಿತು. ಈ ಪಂದ್ಯದಲ್ಲಿ ಸ್ಮಿತ್ ಅವರು ಹೊಡೆದ ಒಂದು ಶಾಟ್ ಈಗ ಭಾರೀ ವೈರಲ್ ಆಗುತ್ತಿದೆ. ಅದು ಎಂ ಎಸ್ ಧೋನಿ ಅವರ ಹೆಲಿಕಾಫ್ಟರ್ ಶಾಟ್.
8 ಸಾವಿರ ರನ್, 490ಕ್ಕೂ ಹೆಚ್ಚು ವಿಕೆಟ್: 15 ವರ್ಷಗಳಿಂದ ಚಾನ್ಸ್ಗಾಗಿ ಕಾಯುತ್ತಿರುವ ಯುವ ಆಟಗಾರ
ಸ್ಮಿತ್ ಥೇಟ್ ಧೋನಿಯಂತೆ ಹೆಲಿಕಾಫ್ಟರ್ ಶಾಟ್ ಹೊಡೆದು ಚೆಂಡನ್ನು ಸಿಕ್ಸ್ಗೆ ಅಟ್ಟಿದ ವಿಡಿಯೋ ಈಗ ಎಲ್ಲಡೆ ಹರಿದಾಡುತ್ತಿದೆ. ಹಾಟ್ಸ್ಟಾರ್ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಂ.ಎಸ್.ಧೋನಿ ಖಂಡಿತವಾಗಿಯೂ ಬಹಳ ಹೆಮ್ಮೆ ಪಡುತ್ತಾರೆ ಎಂದು ಬರೆದುಕೊಂಡಿದೆ.
ಈ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಸ್ಟೀವ್ ಸ್ಮಿತ್ ಅವರ 131 ರನ್ ಹಾಗೂ ಮಾರ್ನಸ್ ಲಾಬುಶೇನ್ ಅವರ 54 ರನ್ಗಳ ನೆರವಿನಿಂದ ಆಸೀಸ್ 50 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸಿತು.
ICC ODI Rankings: ನಂ. 1 ಪಟ್ಟದ ಮೇಲೆ ರೋಹಿಟ್ ಕಣ್ಣು; ಕೊಹ್ಲಿ ಹತ್ತಿರ ಸಮೀಪಿಸಿದ ಹಿಟ್ಮ್ಯಾನ್
ಟಾರ್ಗೆಟ್ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ(119) ಅವರ ಅಮೋಘ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ(89) ಅವರ ಅತ್ಯುತ್ತಮ ಬ್ಯಾಟಿಂಗ್ನಿಂದಾಗಿ 47.3 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ