HOME » NEWS » Sports » CRICKET INDIA VS AUSTRALIA MITCHELL STARC CLEANS UP PRITHVI SHAW ON 2 BALL DUCK RICKY PONTING PREDICTS HAPPEND VB

(VIDEO): ಆತ ನುಡಿದ ಭವಿಷ್ಯ ನಿಜವೇ ಆಯಿತು: ಪಂದ್ಯ ಆರಂಭವಾದ 2ನೇ ಎಸೆತದಲ್ಲೇ ಪೃಥ್ವಿ ಶಾ ಕ್ಲೀನ್ ಬೌಲ್ಡ್​

Prithvi Shaw: ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನ 2ನೇ ಎಸೆತದಲ್ಲಿ ಸ್ವಿಂಗ್ ಚೆಂಡನ್ನು ಎದುರಿಸಲು ಸಂಪೂರ್ಣ ವಿಫಲರಾದ ಪೃಥ್ವಿ ಶಾ ಎಡ್ಜ್ ಆಗಿ ಕ್ಲೀನ್ ಬೌಲ್ಡ್​ ಆದರು. ಲೆಂತ್ ಮತ್ತು ಲೈನ್​ ಅನ್ನು ಅರಿಯುವಲ್ಲಿ ಎಡವಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.

news18-kannada
Updated:December 17, 2020, 12:13 PM IST
(VIDEO): ಆತ ನುಡಿದ ಭವಿಷ್ಯ ನಿಜವೇ ಆಯಿತು: ಪಂದ್ಯ ಆರಂಭವಾದ 2ನೇ ಎಸೆತದಲ್ಲೇ ಪೃಥ್ವಿ ಶಾ ಕ್ಲೀನ್ ಬೌಲ್ಡ್​
India vs Australia
  • Share this:
ಅಡಿಲೇಡ್​ನ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಡೇ- ನೈಟ್ ಟೆಸ್ಟ್​ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ, ನಾಯಕನ ತೀರ್ಮಾನ ಯಾಕೋ ಉಲ್ಟಾ ಹೊಡೆದಂತಿದೆ. ಹೌದು, ಬ್ಯಾಟಿಂಗ್ ಆರಂಭಿಸಿರುವ ಭಾರತ 50 ರನ್​ಗೂ ಮುನ್ನವೇ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅದರಲ್ಲೂ ಭರವಸೆ ಇಟ್ಟು ಅವಕಾಶ ನೀಡಿದ ಪೃಥ್ವಿ ಶಾ ಪಂದ್ಯ ಆರಂಭವಾದ ಎರಡನೇ ಎಸೆತದಲ್ಲೇ ಕ್ಲೀನ್ ಬೌಲ್ಡ್​ ಆಗುವ ಮೂಲಕ ಪೆವಿಲಿಯನ್ ಸೇರಿಕಂಡರು.

ಅಭ್ಯಾಸ ಪಂದ್ಯದಲ್ಲಿ ವಿಫಲವಾದರೂ ಮೊದಲ ಟೆಸ್ಟ್​ಗೆ ಶುಭ್ಮನ್ ಗಿಲ್ ಹಾಗೂ ಕೆ. ಎಲ್ ರಾಹುಲ್​ಗೆ ಅವಕಾಶ ನೀಡದೆ, ಪೃಥ್ವಿ ಶಾ ಅವರನ್ನು ಕಣಕ್ಕಿಳಿಸಲಾಯಿತು. ಆದರೆ, ತಂಡದ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ಶಾ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು.




ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನ 2ನೇ ಎಸೆತದಲ್ಲಿ ಸ್ವಿಂಗ್ ಚೆಂಡನ್ನು ಎದುರಿಸಲು ಸಂಪೂರ್ಣ ವಿಫಲರಾದ ಶಾ ಎಡ್ಜ್ ಆಗಿ ಕ್ಲೀನ್ ಬೌಲ್ಡ್​ ಆದರು. ಲೆಂತ್ ಮತ್ತು ಲೈನ್​ ಅನ್ನು ಅರಿಯುವಲ್ಲಿ ಎಡವಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಐಪಿಎಲ್​ನಿಂದಲೂ ಶಾ ಕಳಪೆ ಫಾರ್ಮ್​ನಲ್ಲಿದ್ದಾರೆ. 13 ಪಂದ್ಯಗಳಲ್ಲಿ 228 ರನ್ ಗಳಿಸಿದ್ದರಷ್ಟೆ.ಇನ್ನೂ ಪೃಥ್ವಿ ಶಾ ಮೊದಲ ಟೆಸ್ಟ್​ನಲ್ಲಿ ಸೊನ್ನೆ ಸುತ್ತಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೇಕೆಗಳು ಕೇಳಿಬರುತ್ತಿವೆ. ಅಲ್ಲದೆ ಶಾ ಇದೇ ಮಾದರಿಯಲ್ಲಿ ಔಟ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಆಸೀಸ್ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿಕೆ ಕೂಡ ವೈರಲ್ ಆಗುತ್ತಿದೆ.

ಈ ಹಿಂದೆ ಶಾ ಬಗ್ಗೆ ಮಾತನಾಡುತ್ತ ಪಾಂಟಿಂಗ್ ಅವರು, ಪ್ರತೀಬಾರಿ ಪೃಥ್ವಿ ಶಾ ಬ್ಯಾಟ್ ಹಾಗೂ ಪ್ಯಾಡ್ ನಡುವೆ ದೊಡ್ಡ ಅಂತರವಿರುತ್ತದೆ. ಆಸ್ಟ್ರೇಲಿಯಾ ಬೌಲರ್​ಗಳು ಇದನ್ನೇ ಗುರಿಯಾಗಿಸಿ ಬೌಲಿಂಗ್ ಮಾಡುತ್ತಾರೆ. ಆಗ ಅವರು ಬೌಲ್ಡ್ ಆಗುತ್ತಾರೆ ಎಂದು ಹೇಳಿದ್ದರು. ಇಂದು ಪೃಥ್ವಿ ಥೇಟ್ ಅದೇ ಮಾದರಿಯಲ್ಲಿ ಔಟ್ ಆಗಿದ್ದಾರೆ.





ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ಮೊದಲ ಓವರ್​ನಲ್ಲೇ ವಿಕೆಟ್ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಪೃಥ್ವಿ ಶಾ(0) ಕ್ಲೀನ್ ಬೌಲ್ಡ್​ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಬಳಿಕ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಇನ್ನಿಂಗ್ಸ್​ ಕಟ್ಟಲು ಹೊರಟರೂ ಸಾಧ್ಯವಾಗಲಿಲ್ಲ.

ಮಯಾಂಕ್ 40 ಎಸೆತಗಳಲ್ಲಿ 17 ರನ್ ಗಳಿಸಿ ಪ್ಯಾಟ್ ಕಮಿನ್ಸ್​ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಸದ್ಯ ಕ್ರೀಸ್​ನಲ್ಲಿ ಪೂಜಾರ ಜೊತೆ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.
Published by: Vinay Bhat
First published: December 17, 2020, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories