India vs Australia: ಮ್ಯಾಕ್ಸ್​ವೆಲ್ ಶತಕಕ್ಕೆ ಭಾರತ ಕಂಗಾಲು; ಟಿ-20 ಸರಣಿ ಕಾಂಗರೂ ಪಾಲು

40 ರನ್​ ಗಳಿಸಿ ಡಾರ್ಸಿ ಶಾರ್ಟ್​ ಔಟ್ ಆದರಾದರು ನಿಲ್ಲದ ಮ್ಯಾಕ್ಸ್​ವೆಲ್ ಆರ್ಭಟ ತಂಡವನ್ನು ಹೇಗಾದರು ಗೆಲ್ಲಿಸಬೇಕೆಂದೆ ಪಣತೊಟ್ಟಿ ನಿಂತರು. ಜೊತೆಗೆ ಶತಕ ಗಳಿಸಿ ಮಿಂಚಿದರು. ಅಂತೆಯೆ ತಂಡಕ್ಕೆ ಗೆಲುವು ಕೂಡ ತಂದಿಟ್ಟರು.

ಗ್ಲೆನ್ ಮ್ಯಾಕ್ಸ್​ವೆಲ್​​

ಗ್ಲೆನ್ ಮ್ಯಾಕ್ಸ್​ವೆಲ್​​

  • News18
  • Last Updated :
  • Share this:
ಬೆಂಗಳೂರು: ಗೆಲ್ಲಲೇ ಬೇಕಾಗಿದ್ದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾಕ್ಸ್​ವೆಲ್​​ ಸ್ಪೋಟಕ ಆಟಕ್ಕೆ ಬೆಚ್ಚಿಬಿದ್ದು ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದೆ. 7 ವಿಕೆಟ್​ಗಳಿಂದ ಗೆದ್ದು ಬೀಗಿರುವ ಫಿಂಚ್ ಪಡೆ ಭಾರತ ವಿರುದ್ಧದ ಟಿ-20 ಸರಣಿ ವಶ ಪಡಿಸಿಕೊಂಡು ಕೊನೆಗೂ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕೆ ಎಲ್ ರಾಹುಲ್ ಭರ್ಜರಿ ಆರಂಭ ಒದಗಿಸಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ ರಾಹುಲ್ 47 ರನ್ ಬಾರಿಸಿದರು. ಈ ಮೂಲಕ ಮೊದಲ ವಿಕೆಟ್​ಗೆ ಆರಂಭಿಕರಿಂದ 61 ರನ್​ಗಳ ಕಾಣಿಕೆ ಬಂತು. ರಾಹುಲ್ ಔಟ್ ಆದ ಬೆನ್ನಲ್ಲೆ ಧವನ್(14) ಹಾಗೂ ರಿಷಭ್ ಪಂತ್(1) ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು.

ಆದರೆ, ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಉತ್ತಮ ಜೊತೆಯಾಟವಾಡಿದ ಈ ಜೋಡಿ ತಂಡದ ರನ್ ಗತಿಯನ್ನು ಏರಿಸಿದರು. ಅದರಲ್ಲು ಆರ್ಭಟಿಸಿದ ವಿರಾಟ್, ಧೋನಿ ಜೊತೆಗೂಡಿ ಬೌಂಡರಿ-ಸಿಕ್ಸ್​ರ್​ ಸಿಡಿಸಿದರು. ಪರಿಣಾಮ ನಿಗದಿತ 20 ಓವರ್​ಗೆ ಭಾರತದ ಮೊತ್ತ 4 ವಿಕೆಟ್ ನಷ್ಟಕ್ಕೆ 190ಕ್ಕೆ ಬಂದುನಿಂತಿತು. ಕೊಹ್ಲಿ 38 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸ್​​ ಜೊತೆ ಅಜೇಯ 72 ರನ್ ಸಿಡಿಸಿದರೆ, ಧೋನಿ 23 ಎಸೆತಗಳಲ್ಲಿ 40 ರನ್ ಗಳಿಸಿ ಅಂತಿಮ ಹಂತದಲ್ಲಿ ನಿರ್ಗಮಿಸಿದರು.

India vs Australia, Live Cricket Score: ಮ್ಯಾಕ್ಸ್​ವೆಲ್​​ ಶತಕದ ಅಬ್ಬರ; ಸರಣಿ ಕೈವಶ ಮಾಡಿಕೊಂಡ ಆಸ್ಟ್ರೇಲಿಯಾ

ಇತ್ತ 191 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ 22 ರನ್ ಆಗುವ ಹೊತ್ತಿಗೆ ಮಾರ್ಕಸ್ ಸ್ಟಾಯಿನಿಸ್(7) ಹಾಗೂ ನಾಯಕ ಆ್ಯರೋನ್ ಫಿಂಚ್(8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಈ ಹಂತದಲ್ಲಿ ಕ್ರೀಸ್​ಗೆ ಬಂದ ಗ್ಲೆನ್ ಮ್ಯಾಕ್ಸ್​ವೆಲ್​​ ಅವರು ಡಾರ್ಸಿ ಶಾರ್ಟ್​ ಜೊತೆಗೂಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಟೀಂ ಇಂಡಿಯಾ ಬೌಲರ್​ಗಳನ್ನು ಕಾಡುತ್ತಾ ಬಂದ ಈ ಜೋಡಿ ಭರ್ಜರಿ ಆಟ ಪ್ರದರ್ಶಿಸಿತು. ಅದರಲ್ಲು ಬಿರುಸಿನ ಆಟವಾಡಿದ ಮ್ಯಾಕ್ಸ್​ವೆಲ್​​ ಬೌಂಡರಿ-ಸಿಕ್ಸ್​ರ್​​ಳಖ ಸುರಿಮಳೆ ಗೈದರು.

40 ರನ್​ ಗಳಿಸಿ ಡಾರ್ಸಿ ಶಾರ್ಟ್​ ಔಟ್ ಆದರಾದರು ನಿಲ್ಲದ ಮ್ಯಾಕ್ಸ್​ವೆಲ್ ಆರ್ಭಟ ತಂಡವನ್ನು ಹೇಗಾದರು ಗೆಲ್ಲಿಸಬೇಕೆಂದೆ ಪಣತೊಟ್ಟಿ ನಿಂತರು. ಜೊತೆಗೆ ಶತಕ ಗಳಿಸಿ ಮಿಂಚಿದರು. ಅಂತೆಯೆ ತಂಡಕ್ಕೆ ಗೆಲುವು ಕೂಡ ತಂದಿಟ್ಟರು. ಕೇವಲ 55 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸ್​​ನೊಂದಿಗೆ ಅಜೇಯ 113 ರನ್ ಸಿಡಿಸಿ ಮ್ಯಾಕ್ಸ್​ವೆಲ್​​ ಗೆಲುವಿನ ರುವಾರಿಯಾದರು. ಇವರ ಜೊತೆಯಾದ ಹ್ಯಾಂಡ್ಸ್​ಕಾಂಬ್​​ ಅಜೇಯ 20 ರನ್ ಗಳಿಸಿದರು. ಭಾರತ ಪರ ವಿಜಯ್ ಶಂಕರ್ 2 ಹಾಗೂ ಸಿದ್ಧಾರ್ಥ್​​ ಕೌಲ್ 1 ವಿಕೆಟ್ ಪಡೆದರು.

ಈ ಮೂಲಕ ಆಸ್ಟ್ರೇಲಿಯಾ  19.4 ಓವರ್​​​ನಲ್ಲೇ ಗೆಲುವಿನ ದಡ ಸೇರಿ 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಎರಡೂ ಟಿ-20 ಪಂದ್ಯಗಳಲ್ಲಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿ ವಶ ಪಡಿಸಿಕೊಂಡಿದೆ. ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಎರಡನ್ನೂ ಮ್ಯಾಕ್ಸ್​ವೆಲ್​ ಬಾಜಿಕೊಂಡರು.

ಭಾರತಕ್ಕೆ ಇನ್ನೇನಿದ್ದರು ಏಕದಿನ ಸರಣಿ ಗೆದ್ದು ಮಾನ ಉಳಿಸಿಕೊಳ್ಳಲು ಕೊನೆಯ ಅವಕಾಶವಿದೆ. ಮಾರ್ಚ್​​ 2 ರಂದು ಹೈದರಾಬಾದ್​​ನಲ್ಲಿ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ನಡೆಯಲಿದೆ.

First published: