IND vs AUS: ಎರಡನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಿಕ್ತು ಭರ್ಜರಿ ಗುಡ್​ ನ್ಯೂಸ್: ಆಸೀಸ್​ಗೆ ಸಂಕಷ್ಟ

ಸ್ಟಾಯಿನಿಸ್ ಎಷ್ಟೊಂದು ಅಪಾಯಕಾರಿ ಆಟಗಾರ ಎಂಬುದನ್ನು ಈಗಾಗಲೇ ಐಪಿಎಲ್​ನಲ್ಲಿ ಸಾಭೀತು ಮಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲೂ ಕಮಾಲ್ ಮಾಡುತ್ತಿರುವ ಸ್ಟಾಯಿನಿಸ್ ಅನುಪಸ್ಥಿತಿ ಫಿಂಚ್ ಪಡೆಗೆ ದೊಡ್ಡ ಹಿನ್ನಡೆಯಾದರೆ, ಇತ್ತ ಕೊಹ್ಲಿ ಪಡೆಗೆ ಇದು ವರವಾಗಿದೆ.

Team India

Team India

 • Share this:
  ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ ಸದ್ಯ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ. ಸರಣಿ ವಶಪಡಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಮೊದಲ ಏಕದಿನದಲ್ಲಿ ಕಾಂಗರೂ ಪಡೆ 66 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್ ಜೊತೆ ಫೀಲ್ಡಿಂಗ್​ನಲ್ಲೂ ವೈಫಲ್ಯ ಅನುಭವಿಸುತ್ತಿರುವ ಭಾರತ ಮತ್ತಷ್ಟು ಬಲಿಷ್ಠವಾಗಬೇಕಿದೆ.

  ಈ ನಡುವೆ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಮಾರ್ಕಸ್‌ ಸ್ಟಾಯ್‌ನೆಸ್‌ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗಿದೆ.

  India Playing XI: ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಪ್ರಮುಖ ಬದಲಾವಣೆ?

  ಸ್ಟಾಯ್‌ನೆಸ್‌ ಎಷ್ಟೊಂದು ಅಪಾಯಕಾರಿ ಆಟಗಾರ ಎಂಬುದನ್ನು ಈಗಾಗಲೇ ಐಪಿಎಲ್​ನಲ್ಲಿ ಸಾಭೀತು ಮಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲೂ ಕಮಾಲ್ ಮಾಡುತ್ತಿರುವ ಸ್ಟಾಯ್‌ನೆಸ್‌ ಅನುಪಸ್ಥಿತಿ ಫಿಂಚ್ ಪಡೆಗೆ ದೊಡ್ಡ ಹಿನ್ನಡೆಯಾದರೆ, ಇತ್ತ ಕೊಹ್ಲಿ ಪಡೆಗೆ ಇದು ವರವಾಗಿದೆ.

  ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ ವೇಳೆ ಬೌಲಿಂಗ್ ಮಾಡುತ್ತಿದ್ದ ಸ್ಟಾಯ್‌ನೆಸ್‌ ಗಾಯಕ್ಕೆ ತುತ್ತಾದರು. ತನ್ನ ಏಳನೇ ಓವರ್​ ಬೌಲಿಂಗ್ ವೇಳೆ ಎರಡು ಎಸೆತ ಎಸೆದ ಸ್ಟಾಯ್‌ನೆಸ್‌ ಗಾಯದ ಕಾರಣದಿಂದಾಗಿ ಮೈದಾನ ತೊರೆದರು. ಬಳಿಕ ಇವರ ಓವರ್ ಅನ್ನು ಗ್ಲೆನ್ ಮ್ಯಾಕ್ಸ್​ವೆಲ್ ಮುಂದುವರೆಸಿದರು.

  ಇದೀಗ ದ್ವಿತೀಯ ಏಕದಿನ ಪಂದ್ಯದಲ್ಲಿ ಸ್ಟಾಯ್‌ನೆಸ್‌ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ. ಇವರ ಬದಲು ವೆಸ್ಟರ್ನ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಗ್ರೀನ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಭಾರತ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು.

  ಇನ್ನೂ ನಾಳಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ. ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಆಸ್ಟ್ರೇಲಿಯಾ ಗೆದ್ದು ಬೀಗಿದರೆ ಸರಣಿ ವಶಪಡಿಸಿಕೊಳ್ಳಲಿದೆ. ಗೆಲ್ಲಲೇ ಬೇಕಾದ ಪಂದ್ಯ ಆಗಿರುವುದರಿಂದ ಭಾರತ ತಂಡದಲ್ಲಿ ಬದಲಾವಣೆನ್ನ ನಿರೀಕ್ಷಿಸಲಾಗಿದೆ.

  India vs Australia: ನಾಳೆ ಎರಡನೇ ಏಕದಿನ: ಭಾರತ ಗೆಲುವು ಸಾಧಿಸಲು ಹೀಗೆ ಮಾಡಿದ್ರೆ ಸಾಕು

  ಪ್ರಮುಖವಾಗಿ ಶಿಖರ್ ಧವನ್ ಜೊತೆ ಕೆ. ಎಲ್ ರಾಹುಲ್ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ. ಮಯಾಂಕ್ ಅಗರ್ವಾಲ್ ಬದಲು ಮನೀಶ್ ಪಾಂಡೆಗೆ ಅವಕಾಶ ನೀಡಿ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಿಕೊಳ್ಳಬಹುದು. ಜೊತೆಗೆ ಬೌಲಿಂಗ್​ನಲ್ಲೂ ಯಜುವೇಂದ್ರ ಚಹಾಲ್ ಬದಲು ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಅಂದಾಜಿದೆ.
  Published by:Vinay Bhat
  First published: