• Home
 • »
 • News
 • »
 • sports
 • »
 • India vs Australia: ಟೀಮ್ ಇಂಡಿಯಾವನ್ನು ಮುನ್ನಡೆಸಲೆಂದೇ ಆತ ಹುಟ್ಟಿದ್ದಾನೆ: ಇಯಾನ್ ಚಾಪೆಲ್

India vs Australia: ಟೀಮ್ ಇಂಡಿಯಾವನ್ನು ಮುನ್ನಡೆಸಲೆಂದೇ ಆತ ಹುಟ್ಟಿದ್ದಾನೆ: ಇಯಾನ್ ಚಾಪೆಲ್

Ian Chappell

Ian Chappell

2017 ರಲ್ಲಿ ಧರ್ಮಶಾಲಾ ಟೆಸ್ಟ್​ ಪಂದ್ಯದಲ್ಲೇ ಆತನ ನಾಯಕತ್ವ ಗುಣಗಳನ್ನು ಗಮನಿಸಿದ್ದೇನೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಶತಕದ ಜೊತೆಯಾಟವಾಡಿದ್ದರು.

 • Share this:

  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಪುಟಿದೆದ್ದು ಎರಡನೇ ಟೆಸ್ಟ್​ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) , ವೇಗಿ ಮೊಹಮ್ಮದ್ ಶಮಿ, ರೋಹಿತ್ ಶರ್ಮಾ (Rohit Sharma) ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ರಹಾನೆ ಅವರ ನಾಯಕತ್ವದ ಬಗ್ಗೆ ಹಲವು ಮಾಜಿ ಆಟಗಾರರಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್ ಚಾಪೆಲ್ (Ian Chappell) ಹೊಸ ಸೇರ್ಪಡೆ.


  ಹೌದು, ಅಜಿಂಕ್ಯ ರಹಾನೆ ಹುಟ್ಟು ನಾಯಕತ್ವ ಗುಣವನ್ನು ಹೊಂದಿರುವ ವ್ಯಕ್ತಿ. ಆತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ. ಈ ಹಿಂದೆ ಕೊಹ್ಲಿ ಗಾಯಕ್ಕೆ ಒಳಗಾದಾಗ ತಂಡದ ನಾಯಕತ್ವನ್ನು ವಹಿಸಿಕೊಂಡಿದ್ದರು. ಆತನಲ್ಲಿ ನಾಯಕನಿಗೆ ಇರಬೇಕಾದ ಎಲ್ಲಾ ಅರ್ಹತೆಗಳಿವೆ ಎಂದು ಇಯಾನ್ ಚಾಪೆಲ್ ಹೊಗಳಿದ್ದಾರೆ.


  2017 ರಲ್ಲಿ ಧರ್ಮಶಾಲಾ ಟೆಸ್ಟ್​ ಪಂದ್ಯದಲ್ಲೇ ಆತನ ನಾಯಕತ್ವ ಗುಣಗಳನ್ನು ಗಮನಿಸಿದ್ದೇನೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಶತಕದ ಜೊತೆಯಾಟವಾಡಿದ್ದರು. ಈ ವೇಳೆ ರಹಾನೆ ಕುಲದೀಪ್ ಯಾದವ್ ಅವರಿಗೆ ಬೌಲ್ ನೀಡಿದ್ದರು. ಇದು ಧೈರ್ಯಶಾಲಿ ನಡೆ ಎಂದು ನಾನು ಭಾವಿಸಿದೆವು. ಆದರೆ ಯೋಜನೆಗಳು ಚುರುಕಾಗಿತ್ತು. ಮೊದಲ ಸ್ಲಿಪ್‌ನಲ್ಲಿದ್ದ ರಹಾನೆಗೆ ವಾರ್ನರ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇದೇ ಪಂದ್ಯದಲ್ಲಿ ಕುಲದೀಪ್ ಕೂಡ ಐದು ವಿಕೆಟ್ ಉರುಳಿಸಿ ಮಿಂಚಿದರು ಎಂದು ಚಾಪೆಲ್ ಸ್ಮರಿಸಿದರು.


  ಅಜಿಂಕ್ಯ ರಹಾನೆ ಧೈರ್ಯಶಾಲಿ ಹಾಗೂ ಚಾಣಾಕ್ಷ. ಈ ಎರಡು ಪ್ರಮುಖ ಗುಣಗಳಿಗಿಂತ ಯಾವುದೇ ಸಂದರ್ಭದಲ್ಲೂ ಶಾಂತ ರೀತಿಯಲ್ಲಿ ವರ್ತಿಸುವ ಗುಣ ಕೂಡ ಆತನಲ್ಲಿದೆ. ಉತ್ತಮ ನಾಯಕತ್ವಕ್ಕೆ ಬೇಕಾದ ಪ್ರಮುಖ ಅಂಶವೆಂದರೆ, ತಂಡ ಆಟಗಾರರಿಂದ ಗೌರವ ಪಡೆಯುವುದು. ಅದು ಕೂಡ ಆತನಲ್ಲಿದೆ. ಈ ಎಲ್ಲಾ ಕಾರಣಗಳಿಂದ ರಹಾನೆ ಟೀಮ್ ಇಂಡಿಯಾ ನಾಯಕನಾಗಲೇ ಹುಟ್ಟಿದ ವ್ಯಕ್ತಿ ಅನಿಸುತ್ತೆ ಎಂದು ಇಯಾನ್ ಚಾಪೆಲ್ ತಿಳಿಸಿದ್ದಾರೆ.

  Published by:zahir
  First published: