ಸುಮಾರು ಒಂಬತ್ತು ತಿಂಗಳ ಬಳಿಕ ಭಾರತ ಕ್ರಿಕೆಟ್ ತಂಡ ಕೊರೋನಾ ನಡುವೆ ಅಂತರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದೆ. ನಾಳೆ ಶುಕ್ರವಾರದಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ. ಕ್ರಿಕೆಟ್ ಲೋಕದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು ರೋಚಕ ಕಾದಾಟ ವೀಕ್ಷಿಸಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಹಾಗಾದ್ರೆ ಇಂಡೋ-ಆಸೀಸ್ ಕದನ ವೀಕ್ಷಿಸುವುದು ಹೇಗೆ?, ಇಲ್ಲಿದೆ ಮಾಹಿತಿ.
ಕೋವಿಡ್ -19 ನಡುವೆ ಇದು ಭಾರತದ ಮೊದಲ ಅಂತರಾಷ್ಟ್ರೀಯ ಸರಣಿಯಾಗಿದ್ದು, ಸಂಪೂರ್ಣ ಸುರಕ್ಷತಾ ನಿಯಮದೊಂದಿಗೆ ಉಭಯ ತಂಡಗಳು ಮಹತ್ವದ ಸರಣಿ ಆಡಲಿದೆ. ಒಟ್ಟು 3 ಏಕದಿನ, 3 ಟಿ-20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿವೆ.
IND vs AUS: ನಾಳೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ: ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ
ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಈವರೆಗೆ ಒಟ್ಟು 51 ಏಕದಿನ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಗೆದ್ದಿದ್ದು ಕೇವಲ 13 ಪಂದ್ಯಗಳಲ್ಲಷ್ಟೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಗೆದ್ದ ಸರಣಿ ಕೇವಲ 3. 1984-85ರಲ್ಲಿ ನಡೆದ ಬೆನ್ಸನ್ ಮತ್ತು ಹೆಡ್ಜಸ್ ವಿಶ್ವ ಕ್ರಿಕೆಟ್ ಚಾಂಪಿಯನ್ಶಿ ಪ್, ಕಾಮನ್ವೆಲ್ತ್ ಬ್ಯಾಂಕ್ ಸೀರಿಸ್ ಹಾಗೂ 2018-19 ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದಿತ್ತು.
ಇನ್ನೂ ಮೊದಲ ಏಕದಿನ ಪಂದ್ಯ ನಡೆಯಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾವೇ ಪಾರುಪತ್ಯ ಸಾಧಿಸಿದೆ. ಆಡಿದ 17 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 14ರಲ್ಲಿ ಗೆದ್ದರೆ ಟೀಂ ಇಂಡಿಯಾ ಎರಡರಲ್ಲಿ ಜಯ ಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.
2ನೇ ಏಕದಿನ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು ನ. 29ಕ್ಕೆ ಏರ್ಪಡಿಸಲಾಗಿದೆ. ಡಿ. 2 ರಂದು ಅಂತಿಮ ಮೂರನೇ ಏಕದಿನ ಪಂದ್ಯ ಕ್ಯಾನ್ಬೆರಾದಲ್ಲಿ ನಡೆಯಲಿದೆ. ಎಲ್ಲಾ ಏಕದಿನ ಪಂದ್ಯ ಭಾರತದ ಕಾಲಮಾನದ ಪ್ರಕಾರ ಬೆಳಗ್ಗೆ 9:10ಕ್ಕೆ ಆರಂಭವಾಗಲಿದೆ.
IND vs AUS: ರೋಹಿತ್ – ಇಶಾಂತ್ ಭಾರತ ತಂಡ ಸೇರಿಕೊಳ್ಳಲು ಬಿಸಿಸಿಐ ಮಾಡಿತು ಮಾಸ್ಟರ್ ಪ್ಲ್ಯಾನ್: ಏನದು?
ಯಾವುದರಲ್ಲಿ ನೇರ ಪ್ರಸಾರ:
ಭಾರತ – ಆಸ್ಟ್ರೇಲಿಯಾ ಸರಣಿಯ ನೇರಪ್ರಸಾರದ ಹಕ್ಕನ್ನು ಈ ಬಾರಿ ಸೋನಿ ಸ್ಫೋರ್ಟ್ಸ್ ನೆಟ್ವರ್ಕ್ ಖರೀದಿ ಮಾಡಿದೆ. ಸೋನಿ ಸಿಕ್ಸ್, ಸೋನಿ ಟೆನ್ 1, ಸೋನಿ ಟೆನ್ 3 ಚಾನೆಲ್ನಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು. ಇದರ ಜೊತೆಗೆ ಡಿಡಿ ಸ್ಫೋರ್ಟ್ಸ್ನಲ್ಲಿ ಉಚಿತವಾಗಿ ಪ್ರಸಾರವಾಗಲಿದೆ.
ಇನ್ನೂ ಆನ್ಲೈನ್ನಲ್ಲಿ ವೀಕ್ಷಿಸಬೇಕದಾರೆ ಸೋನಿ ಲೈವ್ ಆ್ಯಪ್ನಲ್ಲಿ ನೇರಪ್ರಸಾರವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ