news18-kannada Updated:January 18, 2021, 11:55 AM IST
Team India
ಬ್ರಿಸ್ಬೇನ್ (ಜ. 18): ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. 33 ರನ್ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿ 294 ರನ್ಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು 328 ರನ್ಗಳ ಟಾರ್ಗೆಟ್ ನೀಡಿದೆ.
ನಿನ್ನೆ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್ಗೆ ಹೆಚ್ಚಿಸಿಕೊಂಡಿದ್ದ ಆಸ್ಟ್ರೇಲಿಯಾ ಇಂದು ಆರಂಭದಲ್ಲೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಾರ್ಕಸ್ ಹ್ಯಾರಿಸ್ ಶಾರ್ದುಲ್ ಠಾಕೂರ್ ಓವರ್ನಲ್ಲಿ ರಿಷಬ್ ಪಂತ್ಗೆ ಕ್ಯಾಚ್ ಕೊಟ್ಟು 38 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಅದರ ಬೆನ್ನಲ್ಲೇ ಡೇವಿಡ್ ವಾರ್ನರ್ ಸಹ 48 ರನ್ ಗಳಿಸಿ ಅರ್ಧಶತಕ ಹೊಸ್ತಿಲಿನಲ್ಲಿ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.
Washington Sundar: ಭಾರತದ ಮಾನ ಕಾಪಾಡಿದ ಮಗನ ಬಗ್ಗೆ ಬೇಸರ ಹೊರಹಾಕಿದ ವಾಷಿಂಗ್ಟನ್ ಸುಂದರ್ ತಂದೆ
ಇದಾದ ನಂತರ ಎಚ್ಚರಿಕೆಯ ಆಟವಾಡುತ್ತಿದ್ದ, ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಮಾರ್ನಾಸ್ ಲಾಬುಶಾನ್ 25 ರನ್ಗೆ ಹಾಗೂಮ್ಯಾಥ್ಯೂ ವೇಡ್(0) ಅವರ ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಉರಳಿಸಿದರು.
ಈ ನಡುವೆ ಸ್ಟೀವ್ ಸ್ಮಿತ್ ಹಾಗೂ ಕಾಮೆರಾನ್ ಗ್ರೀನ್ ಕೊಂಚಹೊತ್ತು ತಂಡಕ್ಕೆ ಆಸರೆಯಾದರು. ಆದರೆ, ಅಪಾಯಕಾರಿ ಬ್ಯಾಟ್ಸ್ಮನ್ ಸ್ಮಿತ್ ಅವರನ್ನು ಅರ್ಧಶತಕ ಸಿಡಿಸಿದ ಬೆನ್ನಲ್ಲೆ ಪೆವಿಲಿಯನ್ಗೆ ಅಟ್ಟುವಲ್ಲಿ ಸಿರಾಜ್ ಯಶಸ್ವಿಯಾದರು. ಸ್ಮಿತ್ 74 ಎಸೆತಗಳಲ್ಲಿ 55 ರನ್ ಗಳಿಸಿ ನಿರ್ಗಮಿಸಿದರು. ಗ್ರೀನ್ ಕೂಡ 37 ರನ್ಗೆ ಬ್ಯಾಟ್ ಕೆಳಗಿಟ್ಟರು.
Video: ವಿಶ್ವ ದಾಖಲೆ ನಿರ್ಮಿಸಿದರೂ ಸಂಭ್ರಮಿಸಲಿಲ್ಲ: ಆಟಗಾರ್ತಿಯ ಕಾಳಜಿಗೆ ನೆಟ್ಟಿಗರು ಫಿದಾ..!
ನಾಯಕ ಟಿಮ್ ಪೈನ್ ಆಟ 37 ಎಸೆತಗಳಲ್ಲಿ 27 ರನ್ಗೆ ಅಂತ್ಯವಾಯಿತು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪ್ಯಾಟ್ ಕಮಿನ್ಸ್ 51 ಎಸೆತಗಳಲ್ಲಿ 28 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ 75.5 ಓವರ್ನಲ್ಲಿ 294 ರನ್ಗೆ ಆಲೌಟ್ ಆಯಿತು.
ಭಾರತ ಪರ ಶಾರ್ದೂಲ್ ಠಾಕೂರ್ 5 ವಿಕೆಟ್ ಕಿತ್ತು ಮಿಂಚಿದರೆ, ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ನಿನ್ನೆ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ನಲ್ಲಿ ಅದ್ಭುತ ನೆರವಾದರು. 186 ರನ್ ಗೆ 6ನೇ ವಿಕೆಟ್ ಪತನವಾದಾಗ ಒಂದಾದ ಈ ಜೋಡಿ ಶತಕದ ಜೊತೆಯಾಟವಾಡಿತು. ಈ ಮೂಲಕ 30 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.
Published by:
Vinay Bhat
First published:
January 18, 2021, 10:39 AM IST