ಬ್ರಿಸ್ಬೇನ್ (ಜ. 18): ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. 33 ರನ್ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಾಂಗರೂ ಪಡೆ ಊಟದ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡಿದ್ದು 149 ರನ್ ಗಳಿಸಿದೆ. 182 ರನ್ಗಳ ಮುನ್ನಡೆಯಲ್ಲಿದೆ. ಭಾರತೀಯ ಯುವ ಬೌಲರ್ಗಳು ಪರಾಕ್ರಮ ಮೆರೆಯುತ್ತಿದ್ದು 4ನೇ ದಿನವನ್ನು ಉತ್ತಮವಾಗಿ ಆರಂಭಿಸಿದೆ. ಇತ್ತ ಸ್ಟೀವ್ ಸ್ಮಿತ್ ಹಾಗೂ ಕಾಮೆರನ್ ಗ್ರೀನ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.
ನಿನ್ನೆ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್ಗೆ ಹೆಚ್ಚಿಸಿಕೊಂಡಿದ್ದ ಆಸ್ಟ್ರೇಲಿಯಾ ಇಂದು ಆರಂಭದಲ್ಲೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಾರ್ಕಸ್ ಹ್ಯಾರಿಸ್ ಶಾರ್ದುಲ್ ಠಾಕೂರ್ ಓವರ್ನಲ್ಲಿ ರಿಷಬ್ ಪಂತ್ಗೆ ಕ್ಯಾಚ್ ಕೊಟ್ಟು 38 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಅದರ ಬೆನ್ನಲ್ಲೇ ಡೇವಿಡ್ ವಾರ್ನರ್ ಸಹ 48 ರನ್ ಗಳಿಸಿ ಅರ್ಧಶತಕ ಹೊಸ್ತಿಲಿನಲ್ಲಿ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.
It is Lunch on Day 4 with Australia on 149-4. #TeamIndia took 4 wickets in the morning session for 128 runs in 35 overs. #AUSvsIND
Details - https://t.co/OgU227xylR pic.twitter.com/qYi1PpkjxK
— BCCI (@BCCI) January 18, 2021
ಇದಾದ ನಂತರ ಎಚ್ಚರಿಕೆಯ ಆಟವಾಡುತ್ತಿದ್ದ, ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಮಾರ್ನಾಸ್ ಲಾಬುಶಾನ್ 25 ರನ್ಗೆ ಹಾಗೂಮ್ಯಾಥ್ಯೂ ವೇಡ್(0) ಅವರ ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಉರಳಿಸಿದರು.
ಸದ್ಯ ಊಟದ ವಿರಾಮದ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡಿದ್ದು 149 ರನ್ ಗಳಿಸಿದೆ. 182 ರನ್ಗಳ ಮುನ್ನಡೆಯಲ್ಲಿದೆ. 28 ರನ್ ಗಳಿಸಿ ಸ್ಟೀವ್ ಸ್ಮಿತ್ ಹಾಗೂ 4 ರನ್ ಗಳಿಸಿ ಕ್ಯಾಮೆರಾನ್ ಗ್ರೀನ್ ಕ್ರೀಸ್ನಲ್ಲಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ನಲ್ಲಿ ಅದ್ಭುತ ನೆರವಾದರು. 186 ರನ್ ಗೆ 6ನೇ ವಿಕೆಟ್ ಪತನವಾದಾಗ ಒಂದಾದ ಈ ಜೋಡಿ ಶತಕದ ಜೊತೆಯಾಟವಾಡಿತು. ಈ ಮೂಲಕ 30 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.
India vs Australia: ವಾಷಿಂಗ್ಟನ್ ಸುಂದರ ಆಟಕ್ಕೆ 110 ವರ್ಷಗಳ ಹಿಂದಿನ ದಾಖಲೆ ಧೂಳೀಪಟ..!
ಭಾರತ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಿಂದ ಸಮವಾಗಿದ್ದು, ಕಳೆದ ಟೆಸ್ಟ್ನಲ್ಲಿ ಭಾರತ ಸೋಲಿನ ದವಡೆಯಿಂದ ಪಾರಾಗಿ ರೋಚಕ ರೀತಿಯಲ್ಲಿ ಡ್ರಾ ಸಾಧಿಸಿತ್ತು. ಈ ನಾಲ್ಕನೇ ಪಂದ್ಯದ ಸದ್ಯದ ಗತಿ ಗಮನಿಸಿದರೆ ಡ್ರಾ ಆಗುವ ಸಾಧ್ಯತೆ ತುಸು ಹೆಚ್ಚಿದ್ದಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ