India vs Australia LIVE: ಟೀ ವಿರಾಮದ ವೇಳೆಗೆ ಭಾರತ 280-5: ಗೆಲುವಿಗೆ ಬೇಕು 127 ರನ್ಸ್

ಚೇತೇಶ್ವರ್ ಪೂಜಾರ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಂತ್ 186 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಆಸೀಸ್ ಬೌಲರ್​ಗಳ ಬೆವರಿಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಈ ಜೋಡಿ 148 ರನ್​ಗಳ ಕಾಣಿಕೆ ನೀಡಿತು.

Australia vs India

Australia vs India

  • Share this:
    ಸಿಡ್ನಿ (ಜ. 11): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಸರಣಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಟೀಂ ಇಂಡಿಯಾ ಗೆಲುವಿಗೆ ಕಠಿಣ ಹೋರಾಟ ನಡೆಸುತ್ತಿದ್ದು, ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಬೊಂಬಾಟ್ ಬ್ಯಾಟಿಂಗ್ ತಂಡಕ್ಕೆ ನೆರವಾಗಿದೆ. ಅದರಲ್ಲೂ ಪಂತ್ ಆಕ್ರಮಣ ಆಟ ಪ್ರದರ್ಶಿಸಿ ತಂಡಕ್ಕೆ ಗೆಲುವನ್ನು ಹತ್ತಿರ ಮಾಡಿ ನಿರ್ಗಮಿಸಿದರು. ನಿನ್ನೆ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 312 ರನ್​ಗೆ ಡಿಕ್ಲೇರ್ ಘೋಷಿಸಿದ್ದ ಆಸ್ಟ್ರೇಲಿಯಾ ಬೃಹತ್ ಮುನ್ನಡೆಯೊಂದಿಗೆ ಭಾರತಕ್ಕೆ ಗೆಲ್ಲಲು 407 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಗೆಲುವಿಗೆ 309 ರನ್​ಗಳ ಅವಶ್ಯಕತೆಯಿತ್ತು.

    ಅಂತಿಮ ಐದನೇ ದಿನ ಬ್ಯಾಟಿಂಗ್ ಮುಂದುವರೆಸಿದ ಟೀಂ ಇಂಡಿಯಾ ಬೇಗನೆ ನಾಯಕ ಅಜಿಂಕ್ಯಾ ರಹಾನೆ(4) ವಿಕೆಟ್ ಕಳೆದುಕೊಂಡಿತು. ಇಂದು ಒಂದೂ ರನ್ ಗಳಿಸಿದರೆ ರಹಾನೆ ಔಟ್ ಆದರು.

    BBL 10: ಆಟಗಾರನ ಅದೃಷ್ಟವೊ, ದುರಾದೃಷ್ಟವೊ...ಹೀಗೊಂದು ಅಚ್ಚರಿಯ ರನೌಟ್..!

    ಬಳಿಕ ಚೇತೇಶ್ವರ್ ಪೂಜಾರ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಂತ್ 186 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಆಸೀಸ್ ಬೌಲರ್​ಗಳ ಬೆವರಿಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಈ ಜೋಡಿ 148 ರನ್​ಗಳ ಕಾಣಿಕೆ ನೀಡಿತು.





    ಶತಕದ ಅಂಚಿನಲ್ಲಿ ಎಡವಿದ ರಿಷಭ್ 118 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್​ನೊಂದಿಗೆ 97 ರನ್​ಗೆ ಔಟ್ ಆದರು. ಬಳಿಕ ಪೂಜಾರ ಕೂಡ ಒಂದಿಷ್ಟು ಆಕರ್ಷಕ ಹೊಡೆತ ಬಾರಿಸಿ ನೆರವಾದರು.  205 ಎಸೆತಗಳನ್ನು ಎದುರಿಸಿದ ಪೂಜಾರ 12 ಬೌಂಡರಿಯೊಂದಿಗೆ 77 ರನ್ ಬಾರಿಸಿದರು.

    ಸದ್ಯ ಕ್ರೀಸ್​ನಲ್ಲಿ ಹನುಮಾ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದು ತಂಡದ ಗೆಲುವಿಗೆ ಹರಸಾಹಸ ಪಡುತ್ತಿದ್ದಾರೆ. ಟೀ ವಿರಾಮದ ವೇಳೆಗೆ ಭಾರತ 5 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದೆ. ಗೆಲುವಿಗೆ ಇನ್ನೂ 127 ರನ್​ಗಳ ಅವಶ್ಯಕತೆಯಿದೆ.

    ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್​ಗೆ ಆಲೌಟ್ ಆಗುವ ಮೂಲಕ 94 ರನ್​ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್​ಸ್ಕಿ ಅವರ 62 ರನ್​ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್​ಗೆ ಸರ್ವಪತನ ಕಂಡಿತು.

    ಕೃಣಾಲ್ ಪಾಂಡ್ಯ ವಿರುದ್ಧ ಗಂಭೀರ ಆರೋಪ: ಟೂರ್ನಿಯಿಂದ ಹಿಂದೆ ಸರಿದ ದೀಪಕ್ ಹೂಡ

    ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಕ್ಯಾಮೆರ್ ಗ್ರೀನ್ 84 ರನ್, ಸ್ಟೀವ್ ಸ್ಮಿತ್ 81 ಹಾಗೂ ಮಾರ್ನಸ್ ಲಾಬುಶೇನ್ ಅವರ 73 ರನ್​ಗಳ ನೆರವಿನಿಂದ ಆಸ್ಟ್ರೇಲಿಯಾ 312 ರನ್​ಗೆ ಡಿಕ್ಷೇರ್ ಘೋಷಿಸಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 407 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.
    Published by:Vinay Bhat
    First published: