ಸಿಡ್ನಿ (ಜ. 11): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಸರಣಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಟೀಂ ಇಂಡಿಯಾ ಗೆಲುವಿನ ಆಸೆ ಬಿಟ್ಟು ಡ್ರಾ ಸಾಧಿಸುವತ್ತ ಚಿತ್ತ ನೆಟ್ಟಿದೆ. ಭಾರತದ ಗೆಲುವಿಗೆ ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಬೊಂಬಾಟ್ ಬ್ಯಾಟಿಂಗ್ ತಂಡಕ್ಕೆ ನೆರವಾದರೂ ನಂತರ ಕುಸಿತ ಕಂಡಿತು. ನಿನ್ನೆ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 312 ರನ್ಗೆ ಡಿಕ್ಲೇರ್ ಘೋಷಿಸಿದ್ದ ಆಸ್ಟ್ರೇಲಿಯಾ ಬೃಹತ್ ಮುನ್ನಡೆಯೊಂದಿಗೆ ಭಾರತಕ್ಕೆ ಗೆಲ್ಲಲು 407 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಗೆಲುವಿಗೆ 309 ರನ್ಗಳ ಅವಶ್ಯಕತೆಯಿತ್ತು.
ಅಂತಿಮ ಐದನೇ ದಿನ ಬ್ಯಾಟಿಂಗ್ ಮುಂದುವರೆಸಿದ ಟೀಂ ಇಂಡಿಯಾ ಬೇಗನೆ ನಾಯಕ ಅಜಿಂಕ್ಯಾ ರಹಾನೆ(4) ವಿಕೆಟ್ ಕಳೆದುಕೊಂಡಿತು. ಇಂದು ಒಂದೂ ರನ್ ಗಳಿಸಿದರೆ ರಹಾನೆ ಔಟ್ ಆದರು.
BBL 10: ಆಟಗಾರನ ಅದೃಷ್ಟವೊ, ದುರಾದೃಷ್ಟವೊ...ಹೀಗೊಂದು ಅಚ್ಚರಿಯ ರನೌಟ್..!
ಬಳಿಕ ಚೇತೇಶ್ವರ್ ಪೂಜಾರ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಂತ್ 186 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಆಸೀಸ್ ಬೌಲರ್ಗಳ ಬೆವರಿಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಈ ಜೋಡಿ 148 ರನ್ಗಳ ಕಾಣಿಕೆ ನೀಡಿತು.
ಶತಕದ ಅಂಚಿನಲ್ಲಿ ಎಡವಿದ ರಿಷಭ್ 118 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ನೊಂದಿಗೆ 97 ರನ್ಗೆ ಔಟ್ ಆದರು. ಬಳಿಕ ಪೂಜಾರ ಕೂಡ ಒಂದಿಷ್ಟು ಆಕರ್ಷಕ ಹೊಡೆತ ಬಾರಿಸಿ ನೆರವಾದರು. 205 ಎಸೆತಗಳನ್ನು ಎದುರಿಸಿದ ಪೂಜಾರ 12 ಬೌಂಡರಿಯೊಂದಿಗೆ 77 ರನ್ ಬಾರಿಸಿದರು.
ಸದ್ಯ ಕ್ರೀಸ್ನಲ್ಲಿ ಹನುಮಾ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದು ಡ್ರಾ ಸಾಧಿಸುವತ್ತ ಚಿತ್ತ ನೆಟ್ಟಿದ್ದಾರೆ. ಅದರಲ್ಲೂ ವಿಹಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಆಟಗಾರ ಎನಿಸಿದ್ದಾರೆ. ವಿಹಾರಿ 100 ಎಸೆತಗಳನ್ನು ಎದುರಿಸಿ ಗಳಿಸಿದ್ದು 6 ರನ್. ಅಶ್ವಿನ್ ಕೂಡ ಇವರಿಗೆ ಅದೇ ರೀತಿ ಸಾತ್ ನೀಡುತ್ತಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್ಗೆ ಆಲೌಟ್ ಆಗುವ ಮೂಲಕ 94 ರನ್ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್ಸ್ಕಿ ಅವರ 62 ರನ್ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್ಗೆ ಸರ್ವಪತನ ಕಂಡಿತು.
ಕೃಣಾಲ್ ಪಾಂಡ್ಯ ವಿರುದ್ಧ ಗಂಭೀರ ಆರೋಪ: ಟೂರ್ನಿಯಿಂದ ಹಿಂದೆ ಸರಿದ ದೀಪಕ್ ಹೂಡ
ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಕ್ಯಾಮೆರ್ ಗ್ರೀನ್ 84 ರನ್, ಸ್ಟೀವ್ ಸ್ಮಿತ್ 81 ಹಾಗೂ ಮಾರ್ನಸ್ ಲಾಬುಶೇನ್ ಅವರ 73 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ 312 ರನ್ಗೆ ಡಿಕ್ಷೇರ್ ಘೋಷಿಸಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 407 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ