ಸಿಡ್ನಿ (ಜ. 10): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 312 ರನ್ಗೆ ಡಿಕ್ಲೇರ್ ಘೋಷಿಸಿದ್ದು, ಬೃಹತ್ ಮುನ್ನಡೆಯೊಂದಿಗೆ ಭಾರತಕ್ಕೆ ಗೆಲ್ಲಲು 407 ರನ್ಗಳ ಟಾರ್ಗೆಟ್ ನೀಡಿದೆ. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಭಾರತ ತಂಡದ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದು, ಅರ್ಧಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್ಗೆ ಆಲೌಟ್ ಆಗುವ ಮೂಲಕ 94 ರನ್ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್ಸ್ಕಿ ಅವರ 62 ರನ್ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್ಗೆ ಸರ್ವಪತನ ಕಂಡಿತು.
India vs Australia: 3ನೇ ಟೆಸ್ಟ್ನಲ್ಲಿ ಸಂಕಷ್ಟದಲ್ಲಿರುವ ಟೀಂ ಇಂಡಿಯಾಕ್ಕೆ ಒಂದಲ್ಲ ಎರಡು ದೊಡ್ಡ ಶಾಕ್
ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ಸಾಗುತ್ತಿದೆ. ಡೇವಿಡ್ ವಾರ್ನರ್(13) ಮತ್ತೆ ವೈಫಲ್ಯ ಅನುಭವಿಸಿದರೆ, ವಿಲ್ ಪುಕೋವ್ಸ್ಕಿ 10 ರನ್ಗೆ ನಿನ್ನೆಯೆ ನಿರ್ಗಮಿಸಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 29 ಓವರ್ಗೆ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. 197 ರನ್ಗಳ ಮುನ್ನಡೆ ಸಾಧಿಸಿತ್ತು. ಮಾರ್ನಸ್ ಲಾಬುಶೇನ್(47*) ಹಾಗೂ ಸ್ಟೀವ್ ಸ್ಮಿತ್(29*) ಅರ್ಧಶತಕದ ಜೊತೆಯಾಟ ಆಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
OUT!
Ashwin gets Smith again. #TeamIndia #AUSvIND
Details - https://t.co/lHRi0Qef30 pic.twitter.com/2Z2JVv3vqE
— BCCI (@BCCI) January 10, 2021
IPL 2021: ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗನನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್?
ಬಳಿಕ ಗ್ರೀನ್ ಜೊತೆಗೆ ನಾಯಕ ಟಿಮ್ ಪೈನ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಬಿರುಸಿನ ಆಟದ ಮೊರೆ ಹೋದರು. ತಂಡದ ಮೊತ್ತ 300ರ ಗಡಿ ದಾಟುತ್ತಿದ್ದಂತೆ ಟೀ ವಿರಾಮದ ಸಮದ ವೇಳೆ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಣೆ ಮಾಡಿದೆ. ಗ್ರೀನ್ 132 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ನೊಂದಿಗೆ 84 ರನ್ ಬಾರಿಸಿದರೆ, ಪೈನ್ 52 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.
ಆಸ್ಟ್ರೇಲಿಯಾ 87 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿದ್ದಾಗ ಡಿಕ್ಷೇರ್ ಘೋಷಿಸಿತು. ಈ ಹೊತ್ತಿಗೆ 406 ರನ್ಗಳ ಮುನ್ನಡೆ ಸಾಧಿಸಿತ್ತು. ಭಾರತ ಪರ ಆರ್. ಅಶ್ವಿನ್ ಹಾಗೂ ನವ್ದೀಪ್ ಸೈನಿ ತಲಾ 2 ವಿಕೆಟ್ ಕಿತ್ತರೆ, ಸಿರಾಜ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ