HOME » NEWS » Sports » CRICKET INDIA VS AUSTRALIA LIVE SCORE 3RD TEST AT SYDNEY DAY 4 NDIA 407 RUN TARGET INDIA NEED 309 MORE TO WIN VB

India vs Australia: 4ನೇ ದಿನದಾಟದ ಅಂತ್ಯಕ್ಕೆ 98-2: ಭಾರತದ ಗೆಲುವಿಗೆ ಬೇಕು 309 ರನ್ಸ್

ಬಳಿಕ ಗ್ರೀನ್ ಜೊತೆಗೆ ನಾಯಕ ಟಿಮ್ ಪೈನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಬಿರುಸಿನ ಆಟದ ಮೊರೆ ಹೋದರು. ತಂಡದ ಮೊತ್ತ 300ರ ಗಡಿ ದಾಟುತ್ತಿದ್ದಂತೆ ಟೀ ವಿರಾಮದ ಸಮದ ವೇಳೆ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಣೆ ಮಾಡಿದೆ.

news18-kannada
Updated:January 10, 2021, 12:38 PM IST
India vs Australia: 4ನೇ ದಿನದಾಟದ ಅಂತ್ಯಕ್ಕೆ 98-2: ಭಾರತದ ಗೆಲುವಿಗೆ ಬೇಕು 309 ರನ್ಸ್
Rohit sharma
  • Share this:
ಸಿಡ್ನಿ (ಜ. 10): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ​ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ – ಗವಾಸ್ಕರ್ ಟೆಸ್ಟ್​ ಸರಣಿಯ ಮೂರನೇ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 312 ರನ್​ಗೆ ಡಿಕ್ಲೇರ್ ಘೋಷಿಸಿ, ಬೃಹತ್ ಮುನ್ನಡೆಯೊಂದಿಗೆ ಭಾರತಕ್ಕೆ ಗೆಲ್ಲಲು 407 ರನ್​ಗಳ ಟಾರ್ಗೆಟ್ ನೀಡಿತು. ಟಾರ್ಗೆಟ್ ಬೆನ್ನಟ್ಟಿರುವ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನೂ 309 ರನ್​ಗಳ ಅವಶ್ಯಕತೆಯಿದೆ.

ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಎರಡನೇ ಇನ್ನಿಂಗ್ಸ್​ನಲ್ಲೂ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ಗಿಲ್ 64 ಎಸೆತಗಳಲ್ಲಿ 31 ರನ್ ಗಳಿಸಿ ಔಟ್ ಆದರು. ಇತ್ತ ಹಿಟ್​ಮ್ಯಾನ್ 96 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.



98 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ರೋಹಿತ್ 52 ರನ್​ಗೆ ಬ್ಯಾಟ್ ಕೆಳಗಿಟ್ಟರು. ಸದ್ಯ ಕ್ರೀಸ್​ನಲ್ಲಿ 9 ರನ್ ಗಳಿಸಿ ಚೇತೇಶ್ವರ್ ಪೂಜಾರ ಹಾಗೂ 4 ರನ್ ಗಳಿಸಿ ನಾಯಕ ಅಜಿಂಕ್ಯಾ ರಹಾನೆ ಇದ್ದು ನಾಳೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್​ಗೆ ಆಲೌಟ್ ಆಗುವ ಮೂಲಕ 94 ರನ್​ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್​ಸ್ಕಿ ಅವರ 62 ರನ್​ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್​ಗೆ ಸರ್ವಪತನ ಕಂಡಿತು.

India vs Australia: 3ನೇ ಟೆಸ್ಟ್​ನಲ್ಲಿ ಸಂಕಷ್ಟದಲ್ಲಿರುವ ಟೀಂ ಇಂಡಿಯಾಕ್ಕೆ ಒಂದಲ್ಲ ಎರಡು ದೊಡ್ಡ ಶಾಕ್

ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ಸಾಗುತ್ತಿದೆ. ಡೇವಿಡ್ ವಾರ್ನರ್(13) ಮತ್ತೆ ವೈಫಲ್ಯ ಅನುಭವಿಸಿದರೆ, ವಿಲ್ ಪುಕೋವ್​ಸ್ಕಿ 10 ರನ್​ಗೆ ನಿನ್ನೆಯೆ ನಿರ್ಗಮಿಸಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 29 ಓವರ್​ಗೆ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. 197 ರನ್​ಗಳ ಮುನ್ನಡೆ ಸಾಧಿಸಿತ್ತು. ಮಾರ್ನಸ್ ಲಾಬುಶೇನ್(47*) ಹಾಗೂ ಸ್ಟೀವ್ ಸ್ಮಿತ್(29*) ಅರ್ಧಶತಕದ ಜೊತೆಯಾಟ ಆಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.





ಇಂದು ಇನ್ನಿಂಗ್ಸ್​ ಮುಂದುವರೆಸಿದ ಈ ಜೋಡಿ ದೊಡ್ಡ ಜೊತೆಯಾಟ ಆಡಲು ಸಾಧ್ಯವಾಗಲಿಲ್ಲ. 118 ಎಸೆತಗಳಲ್ಲಿ 73 ರನ್ ಗಳಿಸಿ ಲಾಬುಶೇನ್ ಔಟ್ ಆದರು. ಮ್ಯಾಥ್ಯೂ ವೇಡ್ ಬಂದ ಬೆನ್ನಲ್ಲೆ 4 ರನ್​ಗೆ ನಿರ್ಗಮಿಸಿದರು. ಈ ನಡುವೆ ಸ್ಮಿತ್ ಆಕರ್ಷಕ ಅರ್ಧಶತಕ ಪೂರೈಸಿದರು. ಕ್ಯಾಮೆರನ್ ಗ್ರೀನ್ ಜೊತೆಯಾದ ಸ್ಮಿತ್ 60 ರನ್​ಗಳ ಕಾಣಿಕೆ ನೀಡಿದರು. 167 ಎಸೆತಗಳಲ್ಲಿ ಎದುರಿಸಿದ ಸ್ಮಿತ್ 8 ಬೌಂಡರಿ, 1 ಸಿಕ್ಸರ್ ಸಿಡಿಸಿ 81 ರನ್​ ಗಳಿಸಿ ಔಟ್ ಆದರು.

IPL 2021: ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗನನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್​?

ಬಳಿಕ ಗ್ರೀನ್ ಜೊತೆಗೆ ನಾಯಕ ಟಿಮ್ ಪೈನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಬಿರುಸಿನ ಆಟದ ಮೊರೆ ಹೋದರು. ತಂಡದ ಮೊತ್ತ 300ರ ಗಡಿ ದಾಟುತ್ತಿದ್ದಂತೆ ಟೀ ವಿರಾಮದ ಸಮದ ವೇಳೆ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಣೆ ಮಾಡಿದೆ. ಗ್ರೀನ್ 132 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ನೊಂದಿಗೆ 84 ರನ್ ಬಾರಿಸಿದರೆ, ಪೈನ್ 52 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.

ಆಸ್ಟ್ರೇಲಿಯಾ 87 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿದ್ದಾಗ ಡಿಕ್ಷೇರ್ ಘೋಷಿಸಿತು. ಈ ಹೊತ್ತಿಗೆ 406 ರನ್​ಗಳ ಮುನ್ನಡೆ ಸಾಧಿಸಿತ್ತು. ಭಾರತ ಪರ ಆರ್. ಅಶ್ವಿನ್ ಹಾಗೂ ನವ್​ದೀಪ್ ಸೈನಿ ತಲಾ 2 ವಿಕೆಟ್ ಕಿತ್ತರೆ, ಸಿರಾಜ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: January 10, 2021, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories