ಸಿಡ್ನಿ (ಜ. 07): ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ 1 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಚೇತರಿಕೆ ಕಂಡಿದೆ. ಪಂದ್ಯ ಆರಂಭವಾಗಿ ಕೆಲಹೊತ್ತಲ್ಲೇ ವರುಣ ದೇವನ ದರ್ಶನವಾಗಿದ್ದು, ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ನಿನ್ನೆಯಿಂದ ಸಿಡ್ನಿಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಇಂದುಕೂಡ ಪಂದ್ಯ ಆರಂಭಕ್ಕೆ ಮಳೆ ಅಡ್ಡಿ ಪಡಿಸಿತು. ಬಳಿಕ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಹಾಗೂ ವಿಲ್ ಪೌಸ್ಕಿ ತಂಡಕ್ಕೆ ಉತ್ತಮ ಆರಂಭ ಒದಗಿಸಲಿಲ್ಲ. ಬಹಳಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿದ ವಾರ್ನರ್ ಕೇವಲ 5 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಔಟ್ ಆದರು.
Mohammed Siraj: ರಾಷ್ಟ್ರಗೀತೆ ವೇಳೆ ಭಾವುಕರಾಗಿ ಮೈದಾನದಲ್ಲೇ ಕಣ್ಣೀರು ಸುರಿಸಿದ ಮೊಹಮ್ಮದ್ ಸಿರಾಜ್
ನಂತರ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಪೌಸ್ಕಿ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಲು ಹೊರಟರು. ಆದರೆ, 7.1 ಓವರ್ನಲ್ಲಿ 21 ರನ್ಗೆ 1 ವಿಕೆಟ್ ಕಳೆದುಕೊಂಡಾಗ ಜೋರಾಗಿ ಮಳೆ ಸುರಿಯಲು ಆರಂಭಿಸಿತು. ಹೀಗಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
50 partnership up between Pucovski and Labuschagne 🤝 #AUSvIND pic.twitter.com/apD3FmXDLf
— 7Cricket (@7Cricket) January 7, 2021
ಮೂರನೇ ಟೆಸ್ಟ್ಗೆ ಭಾರತ ತಂಡ ಎರಡು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಕರ್ನಾಟಕದ ಮಯಂಕ್ ಅಗರ್ವಾಲ್ ಬದಲು ರೋಹಿತ್ ಶರ್ಮಾ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಗಾಯಗೊಂಡಿರುವ ಉಮೇಶ್ ಯಾದವ್ ಬದಲು ನವದೀಪ್ ಸೈನಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈನಿ ಅವರಿಗೆ ಇದು ಮೊದಲ ಟೆಸ್ಟ್ ಪಂದ್ಯ. ಇದು ಬಿಟ್ಟರೆ ಮೆಲ್ಬೋರ್ನ್ನಲ್ಲಿ ಕಾಂಗರೂಗಳ ಪಡೆ ಮೇಲೆ ದಿಗ್ವಿಜಯ ಸಾಧಿಸಿದ್ದ ಟೀಂ ಇಂಡಿಯಾದಲ್ಲಿ ಬೇರೆ ಬದಲಾವಣೆ ಆಗಿಲ್ಲ.
ವಿಶೇಷ ಎಂದರೆ ರೋಹಿತ್ ಶರ್ಮಾ ಒಂದು ವರ್ಷದ ನಂತರ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. 2019ರ ನವೆಂಬರ್ನಲ್ಲಿ. ಹಾಗೆಯೇ, ವಿದೇಶದ ಪಿಚ್ನಲ್ಲಿ ಅವರು ಕೊನೆಯ ಬಾರಿ ಆಡಿದ್ದು 2018ರಲ್ಲಿ. ಅದೂ ಮೆಲ್ಬೋರ್ನ್ನ ಎಂಸಿಜಿಯಲ್ಲಿ. ಆ ವರ್ಷ ತಮ್ಮ ಮಗು ನೋಡಲು ಆಸ್ಟ್ರೇಲಿಯಾ ಸರಣಿಯಿಂದ ಮಧ್ಯದಲ್ಲೇ ತವರಿಗೆ ವಾಪಸ್ ಬಂದಿದ್ದ ರೋಹಿತ್ ಶರ್ಮಾ 2019ರವರೆಗೂ ಭಾರತದಲ್ಲಿ ನಡೆದ 5 ಟೆಸ್ಟ್ ಪಂದ್ಯಗಳಲ್ಲಿ 3 ಭರ್ಜರಿ ಶತಕ ದಾಖಲಿಸಿದ್ದರು. ಮಿಡ್ಲ್ ಆರ್ಡರ್ ಬಿಟ್ಟು ಓಪನರ್ ಆಗಿಯೂ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಆ ನಂತರ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿಯಬೇಕಾಯಿತು.
IPL 2021: ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೇರಿದ ಟೀಮ್ ಇಂಡಿಯಾದ ಮಾಜಿ ಆಟಗಾರ..!
ಭಾರತ ತಂಡ: ಅಜಿಂಕ್ಯಾ ರನಾನೆ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಗಗನ್ ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ವಿಲ್ ಪೌಸ್ಕಿ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮರನ್ ಗ್ರೀನ್, ಟಿಮ್ ಪೈನ್ (ನಾಯಕ, ವಿ. ಕೀ.), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲ್ಯಾನ್, ಜೋಷ್ ಹ್ಯಾಜ್ಲೆವುಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ