HOME » NEWS » Sports » CRICKET INDIA VS AUSTRALIA LIVE SCORE 3RD ODI MATCH IN BANGALORE ROHIT SHARMA COMPLETE 29TH 100 VB

India vs Australia Live: 119 ರನ್ ಗಳಿಸಿ ರೋಹಿತ್ ಔಟ್; ಭಾರತದ 2ನೇ ವಿಕೆಟ್ ಪತನ

India vs Australia Live Score, 3rd ODI Match in Bangalore: ಟೀಂ ಇಂಡಿಯಾಕ್ಕೆ ಈ ಸರಣಿ ಗೆಲುವು ತುಂಬಾನೇ ಮುಖ್ಯವಾಗಿದೆ. ಯಾಕೆಂದರೆ, ಆಸ್ಟ್ರೇಲಿಯಾ ಕಳೆದ ವರ್ಷ ಭಾರತಕ್ಕೆ ಬಂದು 5 ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆಯನ್ನು 3-2ರಿಂದ ಸೋಲಿಸಿತು. ಸದ್ಯ ಸೇಡಿಗಾಗಿ ಕೊಹ್ಲಿ ಸೈನ್ಯ ಕಾಯುತ್ತಿದೆ.

Vinay Bhat | news18-kannada
Updated:January 19, 2020, 8:13 PM IST
India vs Australia Live: 119 ರನ್ ಗಳಿಸಿ ರೋಹಿತ್ ಔಟ್; ಭಾರತದ 2ನೇ ವಿಕೆಟ್ ಪತನ
ರೋಹಿತ್ ಶರ್ಮಾ 868 ರೇಟಿಂಗ್ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
  • Share this:
ಬೆಂಗಳೂರು (ಜ. 19): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕದ ನೆರವಿನಿಂದ 50 ಓವರ್​ನಲ್ಲಿ 286 ರನ್ ಬಾರಿಸಿದೆ.

ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಶತಕದ ಜೊತೆಯಾಟ ತಂಡಕ್ಕೆ ನೆರವಾಗಿದೆ. ಈ ನಡುವೆ ರೋಹಿತ್ ಏಕದಿನ ಕ್ರಿಕೆಟ್​ನಲ್ಲಿ 29ನೇ ಶತಕ ಸಿಡಿಸಿ ಔಟ್ ಆದರು. 128 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್​​ನೊಂದಿಗೆ ಹಿಟ್​ಮ್ಯಾನ್ 119 ರನ್ ಚಚ್ಚಿ ನಿರ್ಗಮಿಸಿದರು.

ಸದ್ಯ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ಭಾರತವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಭಾರತ ಉತ್ತಮ ಆರಂಭ ಪಡೆದುಳ್ಳುವ ಜೊತೆಗೆ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಇಂಜುರಿಗೆ ತುತ್ತಾದ ಪರಿಣಾಮ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್​ ಆರಂಭಿಸಿದರು.

ರೋಹಿತ್ ಆರಂಭದಿಂದಲೇ ಬಿರುಸಿನ ಆಟದ ಮೊರೆ ಹೋದರೆ, ರಾಹುಲ್ ಇವರಿಗೆ ಉತ್ತಮ ಸಾಥ್ ನೀಡಿದರು. ಆದರೆ, ರಾಹುಲ್ 27 ಎಸೆತಗಳಲ್ಲಿ 19 ರನ್ ಗಳಿಸಿ ಎಲ್​ಬಿ ಬಲೆಗೆ ಸಿಲುಕಿದರು. ಈ ಜೋಡಿ ಮೊದಲ ವಿಕೆಟ್​ಗೆ 69 ರನ್​ಗಳ ಜೊತೆಯಾಟ ನೀಡಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಉಳಿದ ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಪೈಕಿ ವಾರ್ನರ್ ಆರಂಭದಲ್ಲೇ ಔಟ್ ಆದರು.

IND vs AUS: ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು ಗೊತ್ತಾ..?ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ವಾರ್ನರ್(3) ಅವರು ಕೀಪರ್ ಕೆ ಎಲ್ ರಾಹುಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಬೆನ್ನಲ್ಲೆ ಅನಗತ್ಯ ರನ್ ಕಲೆಹಾಕಲೋಗಿ ಫಿಂಚ್(19) ರನೌಟ್​​ಗೆ ಬಲಿಯಾದರು.

ಬಳಿಕ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಜೋಪಾನವಾಗಿ ಇನ್ನಿಂಗ್ಸ್​ ಕಟ್ಟಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಇಬ್ಬರೂ ಅರ್ಧಶತಕ ಪೂರೈಸಿದರು.

ಆದರೆ, ಲಾಬುಶೇನ್ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. 64 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 54 ರನ್​ಗೆ ಮಾರ್ನಸ್ ಔಟ್ ಆದರು. ಈ ಮೂಲಕ ಸ್ಮಿತ್- ಮಾರ್ನಸ್ 127 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಬಂದ ಬೆನ್ನಲ್ಲೆ ಮಿಚೆಲ್ ಸ್ಟಾರ್ಕ್​ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.

IND vs AUS: ಟೀಂ ಇಂಡಿಯಾ ಮಿಂಚಿನ ಫೀಲ್ಡಿಂಗ್​ಗೆ ಫಿಂಚ್ ರನೌಟ್; ಇಲ್ಲಿದೆ ರೋಚಕ ವಿಡಿಯೋ

ಬಳಿಕ ಸ್ಮಿತ್ ಜೊತೆಯಾದ ಅಲೆಕ್ಸ್ ಕ್ಯಾರಿ(35) ಅರ್ಧಶತಕದ ಜೊತೆಯಾಟ ಆಡಿದರೆ, ಆಸ್ಟನ್ ಟರ್ನರ್(4) ಬೇಗನೆ ಔಟ್ ಆದರು. ಈ ನಡುವೆ ಸ್ಮಿತ್ 117 ಎಸೆತಗಳಲ್ಲಿ ಏಕದಿನ ಕ್ರಿಕೆಟ್​ನ 9ನೇ ಶತಕ ಪೂರೈಸಿದರು.

ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿದ ಸ್ಮಿತ್ ತಂಡದ ರನ್ ಗತಿಯನ್ನು ಏರಿಸಿದರು. ಆಸ್ಟ್ರೇಲಿಯಾ 50 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು. ಸ್ಮಿತ್ 132 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಿಡಿಸಿ 131 ರನ್ ಗಳಿಸಿದರು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ 2, ಕುಲ್ದೀಪ್ ಯಾದವ್ ಹಾಗೂ ಸೈನಿ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸಿದೆ.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್ (ವಿಕೆಟ್- ಕೀಪರ್), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ.

ಇತ್ತ ಆಸ್ಟ್ರೇಲಿಯಾ ತಂಡ ಒಂದು ಬದಲಾವಣೆ ಮಾಡಿ ಇಂದಿನ ಪಂದ್ಯದಲ್ಲಿ ಆಡುತ್ತಿದೆ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಆಸ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್ - ಕೀಪರ್), ಆಸ್ಟನ್ ಅಗರ್, ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​, ಜೋಷ್ ಹ್ಯಾಜ್ಲೆವುಡ್, ಆ್ಯಡಂ ಜಂಪಾ.
First published: January 19, 2020, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading