India vs Australia Live: ವಾರ್ನರ್ ಅಮೋಘ ಶತಕ; ಗೆಲುವಿನತ್ತ ಆಸ್ಟ್ರೇಲಿಯಾ

India vs Australia Live Score, 1st ODI at Mumbai: ಟೀಂ ಇಂಡಿಯಾಕ್ಕೆ ಈ ಸರಣಿ ತುಂಬಾನೇ ಮುಖ್ಯ ಎನಿಸಿದೆ. ಯಾಕೆಂದರೆ, ಆಸ್ಟ್ರೇಲಿಯಾ ಕಳೆದ ವರ್ಷ ಭಾರತಕ್ಕೆ ಬಂದು 5 ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆಯನ್ನು 3-2ರಿಂದ ಸೋಲಿಸಿತು. ಸದ್ಯ ಸೇಡಿಗಾಗಿ ಕೊಹ್ಲಿ ಸೈನ್ಯ ಕಾಯುತ್ತಿದೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

  • Share this:
ಮುಂಬೈ (ಜ. 14): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರು ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಪಡೆ 255 ರನ್​ಗೆ ಆಲೌಟ್ ಆಯಿತು.

ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಸುಲಭ ಜಯದತ್ತ ದಾಪುಗಾಲಿಡುತ್ತಿದೆ. ಓಪನರ್​ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ದ್ವಿಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ.

ಈ ನಡುವೆ ವಾರ್ನರ್ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 88 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸ್​ ಬಾರಿಸಿ ಏಕದಿನ ಕ್ರಿಕೆಟ್​ನಲ್ಲಿ 18ನೇ ಶತಕ ಗಳಿಸಿದರು. ಫಿಂಚ್ ಕೂಡ ಶತಕದ ಅಂಚಿನಲ್ಲಿದ್ದಾರೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಪೈಕಿ, ಹಿಟ್​ಮ್ಯಾನ್ 15 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು.

ಟೀಂ ಇಂಡಿಯಾಕ್ಕೆ ಸ್ಯಾಮ್ಸನ್​ಗಿಂತ ರಿಷಭ್ ಪಂತ್ ಅಗತ್ಯವೇ ಹೆಚ್ಚು; ಯಾಕೆ?, ಈ ಸ್ಟೋರಿ ಓದಿ!

ಆದರೆ, 2ನೇ ವಿಕೆಟ್​ಗೆ ಜೊತೆಯಾದ ಧವನ್ ಹಾಗೂ ಕೆ ಎಲ್ ರಾಹುಲ್ ಉತ್ತಮ ಆಟ ಪ್ರದರ್ಶಿಸಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಇವರಿಬ್ಬರು ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. 121 ರನ್​ಗಳ ಜೊತೆಯಾಟ ಆಡಿದರು.

ಚೆನ್ನಾಗಿಯೆ ಆಡುತ್ತಿದ್ದ ರಾಹುಲ್ 61 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ 47 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ ಧವನ್ ಕೂಡ 91 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಬಾರಿಸಿ 74 ರನ್​ಗೆ ನಿರ್ಗಮಿಸಿದರು.

ನಾಯಕ ವಿರಾಟ್ ಕೊಹ್ಲಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಕೇವಲ 16 ರನ್​ಗೆ ಬ್ಯಾಟ್ ಕೆಳಗಿಟ್ಟರು. ಶ್ರೇಯಸ್ ಐಯರ್ 4 ರನ್​ಗೆ ಸುಸ್ತಾದರು. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೊತೆಯಾಟ 49 ರನ್​ಗಳನ್ನು ನೀಡಿತು. ಜಡೇಜಾ 32 ಎಸೆತಗಳಲ್ಲಿ 25 ರನ್ ಕಲೆಹಾಕಿದರೆ, ರಿಷಭ್ ಪಂತ್ 28 ರನ್ ಬಾರಿಸಿದರು. ನಂತರ ಬಂದ ಬ್ಯಾಟ್ಸ್​ಮನ್​ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು.

ಅಂತಿಮವಾಗಿ ಭಾರತ 49.1 ಓವರ್​ನಲ್ಲಿ 255 ರನ್​ಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 3, ಪ್ಯಾಟ್ ಕಮಿನ್ಸ್​ ಹಾಗೂ ಕೇನ್ ರಿಚರ್ಡಸನ್ 2 ವಿಕೆಟ್ ಕಿತ್ತರೆ, ಆ್ಯಡಂ ಜಂಪಾ ಹಾಗೂ ಆಸ್ಟನ್ ಅಗರ್ ತಲಾ 1 ವಿಕೆಟ್ ಪಡೆದರು.

ಭಾರತ ಮೂವರು ಓಪನರ್​ಗಳ ಜೊತೆ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇನ್ನಿಂಗ್ಸ್​ ಆರಂಭಿಸಿದರೆ, ಕೆ ಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು, ಕೇದರ್ ಜಾಧವ್ ಹೊರಗುಳಿದಿದ್ದಾರೆ.

ಹರಿದ ಗ್ಲೌಸ್, ಮುರಿದ ಬ್ಯಾಟ್, ತಂದೆಯ ಜೇಬಲಿದ್ದದ್ದು ಕೇವಲ 280 ರೂ: ಆದರೆ ಇಂದು ಟೀಂ ಇಂಡಿಯಾ ಪ್ಲೇಯರ್

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಆಸ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್ - ಕೀಪರ್), ಆಸ್ಟನ್ ಅಗರ್, ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​, ಕೇನ್ ರಿಚರ್ಡಸನ್, ಆ್ಯಡಂ ಜಂಪಾ.
Published by:Vinay Bhat
First published: