India vs Australia, Live Cricket Score: ಕೊಹ್ಲಿ ಶತಕದ ಮಿಂಚು; ಆಸೀಸ್​ಗೆ ಸವಾಲಿನ ಟಾರ್ಗೆಟ್ ನೀಡಿದ ಭಾರತ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿಲ್ಲ. ರೋಹಿತ್ ಶರ್ಮಾ(0) ಹಾಗೂ ಶಿಖರ್ ಧವನ್(21) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

Harshith AS | news18
Updated:March 13, 2019, 5:14 PM IST
India vs Australia, Live Cricket Score: ಕೊಹ್ಲಿ ಶತಕದ ಮಿಂಚು; ಆಸೀಸ್​ಗೆ ಸವಾಲಿನ ಟಾರ್ಗೆಟ್ ನೀಡಿದ ಭಾರತ
ಕೊಹ್ಲಿ
Harshith AS | news18
Updated: March 13, 2019, 5:14 PM IST
ನಾಗ್ಪುರ: ಇಲ್ಲಿನ ವಿದರ್ಭ ಕ್ರೀಂಡಾಗಣದಲ್ಲಿ ನಡೆಯುತ್ತಿರುವ  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕೊಹ್ಲಿ ಶತಕದ ನೆರವಿನಿಂದ ಎದುರಾಳಿಗೆ 251 ರನ್​ಗಳ ಟಾರ್ಗೆಟ್  ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿಲ್ಲ. ರೋಹಿತ್ ಶರ್ಮಾ(0) ಹಾಗೂ ಶಿಖರ್ ಧವನ್(21) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

ಇತ್ತ ಇನ್ನಿಂಗ್ಸ್​ ಕಟ್ಟಲು ಹೊರಟ ರಾಯುಡು 18 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ವಿಜಯ್ ಶಂಕರ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ, ಶಂಕರ್ 46 ರನ್​​ಗೆ ನಿರ್ಗಮಿಸಿದರು.

ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ನಾಯಕ ಕೊಹ್ಲಿ ಕ್ರೀಸ್ ಕಚ್ಚಿ ಆಡಿ ತಂಡದ ರನ್ ಗತಿಯನ್ನು ಏರಿಸಿದರು. ಕಳೆದ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದಿದ್ದ ಧೋನಿ(0) ಹಾಗೂ ಜಾಧವ್(11) ಈ ಬಾರಿ ಬೇಗನೆ ಔಟ್ ಆಗಿದ್ದು, ತಂಡಕ್ಕೆ ಮತ್ತಷ್ಡು ಹೊಡೆತ ಬಿದ್ದಿತು. ಪರಿಣಾಮ ಭಾರತ ದಿಢೀರ್ ಕುಸಿತ ಕಂಡಿತು.

ಆದರೆ, ನೆಲಕಚ್ಚಿ ಆಡಿದ ಕೊಹ್ಲಿ ಆಕರ್ಷಕ ಶತಕ ಬಾರಿಸಿದರು. 40 ನೇ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಕೊನೆಯವರೆಗು ತಂಡಕ್ಕೆ ಆಸರೆಯಾಗಿ ನಿಂತ ಕೊಹ್ಲಿ ಅಂತು ತಂಡದ ಸ್ಕೋರ್ ಅನ್ನು 200ರ ಗಡಿ ದಾಟಿಸಿದರು. ಆದರೆ, 116 ರನ್​​ಗಳಿಸಿರುವಾಗ ಆ್ಯಡಂ ಜಂಪಾ ಸ್ಪಿನ್ ಬಲೆಗೆ ಸಿಲುಕಿ ವಿಕೆಟ್ ಒಪ್ಪಿಸಿದು. ಈ ಮೂಲಕ ಭಾರತ ಅಂತಿಮವಾಗಿ 250 ರನ್​ಗೆ ಸರ್ವಪತನ ಕಂಡಿತು.

First published:March 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ