news18-kannada Updated:January 19, 2021, 12:09 PM IST
ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನವಾಗಿದ್ದು ಭಾರತ ತಂಡ ಗೆಲುವಿಗೆ ಹೋರಾಟ ನಡೆಸುತ್ತಿದೆ.
ಬ್ರಿಸ್ಬೇನ್ (ಜ. 19): ಇಲ್ಲಿನ ಗಬ್ಬಾದಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನವಾಗಿದ್ದು ಭಾರತ ತಂಡ ಗೆಲುವಿಗೆ ಹೋರಾಟ ನಡೆಸುತ್ತಿದೆ. ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಶತಕದ ಅಂಚಿನಲ್ಲಿ ಔಟ್ ಆಗಿ ನಿರಾಸೆ ಮೂಡಿಸಿದರೆ, ನಾಯಕ ಅಜಿಂಕ್ಯಾ ರಹಾನೆ ಬೇಗನೆ ಔಟ್ ಆದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು.
ಸದ್ಯ ರಿಷಭ್ ಪಂತ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತಿದ್ದಾರೆ. ಮಯಾಂಕ್ ಅಗರ್ವಾಲ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಭಾರತದ ಗೆಲುವಿಗೆ 69 ರನ್ ಬೇಕಾಗಿದ್ದರೆ, ಆಸ್ಟ್ರೇಲಿಯಾದ ಜಯಕ್ಕೆ ಎದುರಾಳಿಯ 6 ವಿಕೆಟ್ಗಳು ಉರುಳಿಸಬೇಕಿದೆ.ನಿನ್ನೆ ಆಸ್ಟ್ರೇಲಿಯಾವನ್ನು 294 ರನ್ಗೆ ಆಲೌಟ್ ಮಾಡಿ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಅಂತಿಮ ಸೆಷನ್ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಬೇಗನೆ ದಿನದಾಟವನ್ನು ಮುಗಿಸಲಾಯಿತು.
Video: 41ರ ಹರೆಯದ ಹಿರಿಯ ವೇಗಿ ದಾಳಿಗೆ ನಲುಗಿದ ಬಲಿಷ್ಠ ಮುಂಬೈ..!
ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಆರಂಭದಲ್ಲೇ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್ಗೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್ ಕಚ್ಚಿ ನಿಂತರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವಿನ ಆಸೆಯನ್ನು ಚುಗುರಿಸಿತು.
ಆದರೆ, ಶತಕದ ಅಂಚಿನಲ್ಲಿ ಎಡವಿದ ಗಿಲ್ 146 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಿಡಿಸಿ 91 ರನ್ಗೆ ಔಟ್ ಆದರು. ನಾಯಕ ಅಜಿಂಕ್ಯಾ ರಹಾನೆ 1 ಸಿಕ್ಸ್, ಬೌಂಡರಿ ಬಾರಿಸಿ 24 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ರಿಷಭ್ ಪಂತ್ ಹಾಗೂ ಪೂಜಾರ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು.
ಆದರೆ, ಅರ್ಧಶತಕ ಬಾರಿಸಿದ ಬಳಿಕ ಪೂಜಾರ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 211 ಎಸೆತಗಳಲ್ಲಿ 56 ರನ್ ಗಳಿಸಿ ಎಲ್ಬಿ ಬಲೆಗೆ ಪೂಜಾರ ಸಿಲುಕಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್(5 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್(4 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ತಂಡದ ಪರ ಸ್ಟೀವ್ ಸ್ಮಿತ್ 55, ಡೇವಿಡ್ ವಾರ್ನರ್ 48, ಕಾಮೆರನ್ ಗ್ರೀನ್ 37 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಕಾಣಿಕೆ ತಂಡಕ್ಕೆ ಅಷ್ಟೇನು ಸಿಗಲಿಲ್ಲ. ಪರಿಣಾಮ 294 ರನ್ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 328 ರನ್ಗಳ ಟಾರ್ಗೆಟ್ ನೀಡಿತು.
Published by:
Vinay Bhat
First published:
January 19, 2021, 10:22 AM IST