• Home
  • »
  • News
  • »
  • sports
  • »
  • India vs Australia: ಭಾರತ 244 ರನ್​ಗೆ ಆಲೌಟ್: 94 ರನ್​ಗಳ ಹಿನ್ನಡೆಯಲ್ಲಿ ರಹಾನೆ ಪಡೆ

India vs Australia: ಭಾರತ 244 ರನ್​ಗೆ ಆಲೌಟ್: 94 ರನ್​ಗಳ ಹಿನ್ನಡೆಯಲ್ಲಿ ರಹಾನೆ ಪಡೆ

India vs Australia

India vs Australia

ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 45 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಕ್ರೀಸ್​ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದರು.

  • Share this:

    ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 338 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್​ಗೆ ಆಲೌಟ್ ಆಗುವ ಮೂಲಕ 94 ರನ್​ಗಳ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್​ಸ್ಕಿ ಅವರ 62 ರನ್​ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್​ಗೆ ಸರ್ವಪತನ ಕಂಡಿತು.


    BBL 10: ಅದ್ಭುತ ಅತ್ಯಾದ್ಭುತ...ಮ್ಯಾಕ್ಸ್ ಫೀಲ್ಡಿಂಗ್​​ಗೆ ನಿಬ್ಬೆರಗಾದ ಪ್ರೇಕ್ಷಕರು..!



    ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ 26 ರನ್ ಗಳಿಸಿರುವಾಗ ಔಟ್ ಆದರು. ಇತ್ತ ಶುಭ್ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ನಿರ್ಗಮಿಸಿದರು.


    ಹೀಗೆ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 45 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಕ್ರೀಸ್​ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದರು. ಇಂದು ಮೂರನೇ ದಿನ ಬ್ಯಾಟಿಂಗ್ ಮುಂದುವರೆಸಿದ ಈ ಜೋಡಿ ಜೊತೆಯಾಟ ಯಶಸ್ವಿಯಾಗಲಿಲ್ಲ. ನಾಯಕ ರಹಾನೆ 70 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು. ಹನುಮ ವಿಹಾರಿ 4 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾದರು.


    IPL 2021: ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಡೆಡ್ ​ಲೈನ್ ಫಿಕ್ಸ್..!


    ಈ ಸಂದರ್ಭ ಪೂಜಾರ ಜೊತೆಯಾದ ರಿಷಭ್ ಪಂತ್ ಎಚ್ಚರಿಕೆಯ ಇನ್ನಿಂಗ್ಸ್​ ಕಟ್ಟಿದರು. 200ರ ಅಂಚಿಗೆ ತಂಡದ ಮೊತ್ತವನ್ನು ತಂದಿಟ್ಟ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ರಿಷಭ್ ಪಂತ್ ಅನಗತ್ಯ ಹೊಡೆತಕ್ಕೆ ಮಾರುಹೋಗಿ 67 ಎಸೆತಗಳಲ್ಲಿ 36 ರನ್​ಗೆ ಔಟ್ ಆದರು.


    ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ಪೂಜಾರ ಕೂಡ ಬ್ಯಾಟ್ ಕೆಳಗಿಟ್ಟರು. 176 ಎಸೆತಗಳಲ್ಲಿ ಎದುರಿಸಿದ ಪೂಜಾರ 5 ಬೌಂಡರಿಯೊಂದಿಗೆ 50 ರನ್ ಗಳಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಆರ್. ಅಶ್ವಿನ್ 10, ನವ್​ದೀಪ್ ಸೈನಿ 3, ಜಸ್​ಪ್ರೀತ್ ಬುಮ್ರಾ 0 ಹಾಗೂ ಮೊಹಮ್ಮದ್ ಸಿರಾಜ್ 6 ರನ್​ಗೆ ಔಟ್ ಆದರು. ರವೀಂದ್ರ ಜಡೇಜಾ ಕೆಲಹೊತ್ತು ಬ್ಯಾಟ್ ಬೀಸಿ 37 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು.


    ಭಾರತ 100.4 ಓವರ್​ನಲ್ಲಿ 244 ರನ್​ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಕಿತ್ತರೆ, ಜೋಶ್ ಕ್ಯಾಜ್ಲೆವುಡ್ 2 ಹಾಗೂ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರು.

    Published by:Vinay Bhat
    First published: