India vs Australia, Live Cricket Score: ಸ್ಟೀವ್ ಸ್ಮಿತ್ ಆಕರ್ಷಕ ಶತಕ: ಆಸೀಸ್ 7 ವಿಕೆಟ್ ಪತನ

ನಾಯಕ ಟಿಮ್ ಪೈನ್ ಆಟ ಕೇವಲ 1 ರನ್​ಗೆ ಅಂತ್ಯವಾಯಿತು. ಸದ್ಯ ಶತಕ ಸಿಡಿಸಿರುವ ಸ್ಮಿತ್ ಜೊತೆ ಮಿಚೆಲ್ ಸ್ಟಾರ್ಕ್ ಕ್ರೀಸ್​ನಲ್ಲಿದ್ದಾರೆ.

Steve Smith

Steve Smith

  • Share this:
    ಸಿಡ್ನಿ (ಜ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ಸಾಗುತ್ತಿರುವ ಭಾರತ ವಿರುದ್ಧದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಕಳಪೆ ಫಾರ್ಮ್​​ನಲ್ಲಿದ್ದ ಸ್ಟೀವ್ ಸ್ಮಿತ್ ಭರ್ಜರಿ ಕಮ್​ಬ್ಯಾಕ್ ಮಾಡಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. 201 ಎಸೆತಗಳಲ್ಲಿ 13 ಬೌಂಡರಿಯೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 27ನೇ ಶತಕ ಪೂರೈಸಿದ್ದಾರೆ. ಜೊತೆಗೆ ಮಾರ್ನಸ್ ಲಾಬುಶೇನ್ ಬ್ಯಾಟ್​ನಿಂದ ಅಮೋಘ ಇನ್ನಿಂಗ್ಸ್​ ಮೂಡಿಬಂದಿದೆ . ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 55 ಓವರ್​​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದ ಕಾಂಗರೂ ಪಡೆ ಇಂದು 250ರ ಗಡಿ ದಾಟಿ 300ರತ್ತ ಸಾಗುತ್ತಿದೆ.

    ನಿನ್ನೆ ಮಳೆಯ ನಡುವೆ ನಡೆದ ಮೊದಲ ದಿನದಾಟ ಉಭಯ ತಂಡಗಳಿಗೆ ಸಮಬಲವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ಆರಂಭದಲ್ಲಿ ಡೇವಿಡ್ ವಾರ್ನರ್(5) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಪುಕೋವ್​ಸ್ಕಿ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಲು ಹೊರಟರು. ಈ ಜೋಡಿ ತಂಡಕ್ಕೆ 100 ರನ್​ಗಳ ಕಾಣಿಕೆ ನೀಡಿತು.

    India vs Australia, 3rd Test: ವಿಲ್-ಲಾಬುಶೇನ್ ಅರ್ಧಶತಕ: ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 166-2

    ವಿಲ್ ಪುಕೋವ್​ಸ್ಕಿ 110 ಎಸೆತಗಳಲ್ಲಿ 62 ರನ್ ಬಾರಿಸಿ ನವ್​ದೀಪ್ ಸೈನಿ ಬೌಲಿಂಗ್​ನಲ್ಲಿ ಔಟ್ ಆದರು. ಬಳಿಕ ಸ್ಟೀವ್ ಸ್ಮಿತ್ ಜೊತೆಯಾದ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಲಾಬುಶೇನ್ 67 ರನ್ ಬಾರಿಸಿ ಹಾಗೂ ಸ್ಮಿತ್ 31 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.





    ಇಂದು ಇನ್ನಿಂಗ್ಸ್ ಮುಂದುವರೆಸಿದ ಈ ಜೋಡಿ ಅದೇ ಲಯದಲ್ಲಿ ಬ್ಯಾಟ್ ಬೀಸಿತು. ಶತಕದ ಜೊತೆಯಾಟ ಆಡಿತು. 196 ಎಸೆತಗಳಲ್ಲಿ ಎದುರಿಸಿದ ಲಾಬುಶೇನ್ 11 ಬೌಂಡರಿ ಬಾರಿಸಿ 91 ರನ್ ಗಳಿಸಿ ಜಡೇಜಾ ಬೌಲಿಂಗ್​ನಲ್ಲಿ ಔಟ್ ಆದರು. ಇದರ ಬೆನ್ನಲ್ಲೆ ಮ್ಯಾಥ್ಯೂ ವೇಡ್ 13 ರನ್​​ಗೆ ಬ್ಯಾಟ್ ಕೆಳಗಿಟ್ಟರೆ, ಕಾಮೆರಾನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್​ ಸೊನ್ನೆ ಸುತ್ತಿದರು. ನಾಯಕ ಟಿಮ್ ಪೈನ್ ಆಟ ಕೇವಲ 1 ರನ್​ಗೆ ಅಂತ್ಯವಾಯಿತು. ಸದ್ಯ ಶತಕ ಸಿಡಿಸಿರುವ ಸ್ಮಿತ್ ಜೊತೆ ಮಿಚೆಲ್ ಸ್ಟಾರ್ಕ್ ಕ್ರೀಸ್​ನಲ್ಲಿದ್ದಾರೆ.

    IPL 2021: ಐಪಿಎಲ್​ ಹರಾಜಿಗೆ ಡೇಟ್ ಫಿಕ್ಸ್..!

    ಭಾರತ ಪರ ರವೀಂದ್ರ ಜಡೇಜಾ 3, ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ನವ್​ದೀಪ್ ಸೈನಿ ತಲಾ 1 ವಿಕೆಟ್ ಪಡೆದಿದ್ದಾರೆ.
    First published: