India vs Australia: ಏನಿದು ಬಾಕ್ಸಿಂಗ್ ಡೇ ಟೆಸ್ಟ್​, ಈ ಹೆಸರು ಏಕೆ ಬಂತು..?

1967, 1972 ಮತ್ತು 1976 ರಲ್ಲಿ ಅಡಿಲೇಡ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಲಾಯಿತು. 1975 ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಪಂದ್ಯವು ಇಡೀ ವಿಶ್ವದ ಗಮನ ಸೆಳೆಯಿತು.

Paine-Kohli

Paine-Kohli

  • Share this:
    ಡಿಸೆಂಬರ್ 26 ರಿಂದ ಭಾರತ-ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಹೆಚ್ಚಿನವರು ಬಾಕ್ಸಿಂಗ್ ಡೇ ಟೆಸ್ಟ್ ಎಂದರೆ ಎರಡು ತಂಡಗಳ ಹಣಾಹಣಿ ಅಥವಾ ಕಾಳಗ ಅಂದುಕೊಂಡಿದ್ದಾರೆ. ಹೀಗಾಗಿ ಇದನ್ನು ಬಾಕ್ಸಿಂಗ್ ಡೇ ಎಂದು ವರ್ಣಿಸಲಾಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಇಲ್ಲಿ ಬಾಕ್ಸಿಂಗ್ ಎಂದರೆ ಮುಷ್ಠಿ ಕಾಳಗವಲ್ಲ. ಬದಲಾಗಿ ಕ್ರಿಸ್​ಮಸ್ ಮರುದಿನ ನಡೆಯುತ್ತಿರುವುದರಿಂದ ಬಾಕ್ಸಿಂಗ್ ಡೇ ಪಂದ್ಯ ಎಂದು ಕರೆಯಲಾಗುತ್ತಿದೆ.

    ಅಂದರೆ ಕ್ರಿಸ್​ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್ ನೀಡುತ್ತಾರೆ​. ಮರುದಿನ ಅಂದರೆ ಡಿಸೆಂಬರ್ 26 ರಂದು ಆ ಬಾಕ್ಸ್​ ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್​ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎನ್ನಲಾಗುತ್ತದೆ. ಇದೇ ದಿನ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂಬ ಹೆಸರು ಬಂದಿದೆ.

    ಹೀಗೆ ಬಾಕ್ಸಿಂಗ್ ಡೇ ಪಂದ್ಯಗಳು ಆರಂಭವಾಗಿದ್ದು 128 ವರ್ಷಗಳ ಹಿಂದೆ. 1892 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯವನ್ನು ಆಯೋಜಿಸಲಾಯಿತು. ಬಳಿಕ ಕ್ರಿಸ್‌ಮಸ್ ಸಮಯದಲ್ಲಿ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಕ್ರಿಕೆಟ್ ಪಂದ್ಯ ಆಯೋಜನೆ ಸಂಪ್ರದಾಯವಾಯಿತು. 1950 ರಲ್ಲಿ ಮೆಲ್ಬೋರ್ನ್​ನಲ್ಲಿ ಕ್ರಿಸ್​ಮಸ್​ಗೆ ಅನುಗುಣವಾಗಿ ಮೊದಲ ಅಂತರರಾಷ್ಟ್ರೀಯ ಪಂದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಿತು. ಡಿಸೆಂಬರ್ 22 ರಂದು ಆರಂಭವಾದ ಈ ಪಂದ್ಯವು ನಿಧಾನಕ್ಕೆ ಬಾಕ್ಸಿಂಗ್ ಡೇಗೆ ಬಂದು ನಿಂತಿತು. ಅಲ್ಲಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ಗೆ ನಾಂದಿಯಾಡಲಾಯಿತು.

    1967, 1972 ಮತ್ತು 1976 ರಲ್ಲಿ ಅಡಿಲೇಡ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಲಾಯಿತು. 1975 ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಪಂದ್ಯವು ಇಡೀ ವಿಶ್ವದ ಗಮನ ಸೆಳೆಯಿತು. ಏಕೆಂದರೆ ಈ ಪಂದ್ಯವನ್ನು ವೀಕ್ಷಿಸಲು ಮೊದಲ ದಿನ ಸುಮಾರು 85,000 ವೀಕ್ಷಕರು ಸ್ಟೇಡಿಯಂಗೆ ಬಂದಿದ್ದರು. ಆ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತಲೇ ಬರುತ್ತಿವೆ. ಇನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿಯೂ ಆಯೋಜಿಸಲಾಗುತ್ತದೆ.
    Published by:zahir
    First published: