IND vs AUS: ಕೆ ಎಲ್ ರಾಹುಲ್ ಮಿಂಚಿನ ಸ್ಟಂಪಿಂಗ್; ಧೋನಿ ಜಾಗಕ್ಕೆ ಕನ್ನಡಿಗನೇ ಫಿಕ್ಸ್​ ಎಂದ ಅಭಿಮಾನಿಗಳು!

KL Rahul: ಆ್ಯರೋನ್ ಫಿಂಚ್ ಅವರನ್ನು ರಾಹುಲ್ ಮಿಂಚಿನ ಸ್ಟಂಪಿಂಗ್ ಮೂಲಕ ಪೆವಿಲಿಯನ್​ಗೆ ಅಟ್ಟಿದರು. ಇದನ್ನು ನೋಡಿದ ಅಭಿಮಾನಿಗಳು ರಿಷಭ್ ಪಂತ್ ಬದಲು ಧೋನಿ ಜಾಗಕ್ಕೆ ಕೆ ಎಲ್ ರಾಹುಲ್ ಅವರೇ ಸೂಕ್ತ ಆಟಗಾರ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

news18-kannada
Updated:January 18, 2020, 11:55 AM IST
IND vs AUS: ಕೆ ಎಲ್ ರಾಹುಲ್ ಮಿಂಚಿನ ಸ್ಟಂಪಿಂಗ್; ಧೋನಿ ಜಾಗಕ್ಕೆ ಕನ್ನಡಿಗನೇ ಫಿಕ್ಸ್​ ಎಂದ ಅಭಿಮಾನಿಗಳು!
ಕೆ ಎಲ್ ರಾಹುಲ್ ಸ್ಟಂಪ್​ಔಟ್ ಮಾಡುತ್ತಿರುವುದು
  • Share this:
ಬೆಂಗಳೂರು (ಜ. 18): ಟೀಂ ಇಂಡಿಯಾ ಆಟಗಾರ ಕೆ ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಹಿಂದೆಯೂ ನಿಂತು ಅದ್ಭುತ ಪ್ರದರ್ಶನ ತೋರಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ರಾಹುಲ್ ಬಾಜಿಕೊಂಡರು.

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್, ಕೇವಲ 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಒಟ್ಟು 52 ಬಾಲ್​ಗಳಲ್ಲಿ 80 ರನ್ ಚಚ್ಚಿದರು. ಈ ಮೂಲಕ ತಾನು ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಬ್ಯಾಟ್ ಬೀಸಲು ಸಿದ್ಧ ಎಂಬ ಸಂದೇಶ ರವಾನಿಸಿದರು.

 



KL Rahul: ಆಸೀಸ್ ಬೌಲರ್​ಗಳ ಬೆಂಡೆತ್ತಿ ಧೋನಿ ದಾಖಲೆ ಮುರಿದ ಕೆ ಎಲ್ ರಾಹುಲ್!

ಅಲ್ಲದೆ ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಹುಲ್, "ನಾನು ಯಾವುದೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ಮತ್ತು ವಿಶ್ವಾಸ ಹೊಂದಿದ್ದೇನೆ. ಅದನ್ನು ಸಂತೋಷದಿಂದಲೇ ಸ್ವೀಕರಿಸುತ್ತೇನೆ. ಅನೇಕ ಆಟಗಾರರಿಗೆ ಈ ಭಾಗ್ಯ ಸಿಗುವುದಿಲ್ಲ. ಆದರೆ, ನನಗೆ ಸಿಕ್ಕಿದೆ. ನಾನು ಇದೇ ಕ್ರಮಾಂಕದಲ್ಲಿ ಆಡಬೇಕೆಂಬ ತೀರ್ಮಾನ ಮಾಡಿಲ್ಲ. ಪಂದ್ಯ ಗೆಲ್ಲುವುದು ಮುಖ್ಯ. ತಂಡಕ್ಕೋಸ್ಕರ ಆಡುವುದು ಪ್ರಮುಖ" ಎಂದು ಹೇಳಿದರು.

ಈ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ಗೆಲುವಿನ ರುವಾರಿಯಾಗಿದ್ದ ನಾಯಕ ಆ್ಯರೋನ್ ಫಿಂಚ್ ಅವರನ್ನು ರಾಹುಲ್ ಮಿಂಚಿನ ಸ್ಟಂಪಿಂಗ್ ಮೂಲಕ ಪೆವಿಲಿಯನ್​ಗೆ ಅಟ್ಟಿದರು. ಇದನ್ನು ನೋಡಿದ ಅಭಿಮಾನಿಗಳು ರಿಷಭ್ ಪಂತ್ ಬದಲು ಧೋನಿ ಜಾಗಕ್ಕೆ ಕೆ ಎಲ್ ರಾಹುಲ್ ಅವರೇ ಸೂಕ್ತ ಆಟಗಾರ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.



ಸ್ಟೀವ್ ಸ್ಮಿತ್ ಜೊತೆ ಕ್ರೀಸ್ ಕಚ್ಚಿ ಆಡುತ್ತಿದ್ದ ಆ್ಯರೋನ್ ಫಿಂಚ್ ವಿಕೆಟ್ ಭಾರತಕ್ಕೆ ಮುಖ್ಯವಾಗಿತ್ತು. 15ನೇ ಓವರ್​ನ​ ಜಡೇಜಾ ಅವರ ಬೌಲಿಂಗ್​ನಲ್ಲಿ ಫಿಂಚ್ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಯತ್ನಿಸಿದರು. ಆದರೆ, ಬಾಲ್ ಟರ್ನ್ ಆದ ಪರಿಣಾಮ ಕೀಪರ್ ಕೈ ಸೇರಿತು. ತಕ್ಷಣವೆ ಮಿಂಚಿನ ಬೇಗದಲ್ಲಿ ರಾಹುಲ್ ಚೆಂಡನ್ನು ವಿಕೆಟ್​ಗೆ ತಾಗಿಸಿ ಫಿಂಚ್​ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.

RIP Bapu Nadkarni: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಆಟಗಾರ ವಿಧಿವಶ; ಕಂಬನಿ ಮಿಡಿದ ಕ್ರಿಕೆಟ್ ಲೋಕ!

ಈ ಪಂದ್ಯದಲ್ಲಿ ರಾಹುಲ್ ವಿಶೇಷ ದಾಖಲೆಯೊಂದನ್ನು ಬರೆದರು. ಏಕದಿನ ಕ್ರಿಕೆಟ್​ನಲ್ಲಿ 1000 ರನ್​ಗಳನ್ನು ಪೂರೈಸಿದ ಸಾಧನೆ ಮಾಡಿದರು.

 









ಅಂದು ಟೀಂ ಇಂಡಿಯಾ ಆಟಗಾರರು ಪಡೆಯುತ್ತಿದ್ದ ಸಂಭಾವನೆ ಕೇವಲ 1 ರೂ..! ಇಂದು ಎಷ್ಟು ಗೊತ್ತೆ?

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಂಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್​​​​ಗಳ ಗೆಲುವು ಸಾಧಿಸಿತು. ಬ್ಯಾಟ್ಸ್​ಮನ್​ಗಳ ಅಬ್ಬರ ಹಾಗೂ ಬೌಲರ್​​ಗಳ ಸಂಘಟಿತ ಹೋರಾಟದ ಫಲದಿಂದ ಕೊಹ್ಲಿ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.

ಅಂತಿಮ ಏಕದಿನ ನಿರ್ಣಾಯಕ ಪಂದ್ಯವಾಗಲಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ