• Home
 • »
 • News
 • »
 • sports
 • »
 • India vs Australia: ರಹಾನೆ-ಪೂಜಾರ ಮೇಲೆ ನಿರೀಕ್ಷೆ: ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 96-2

India vs Australia: ರಹಾನೆ-ಪೂಜಾರ ಮೇಲೆ ನಿರೀಕ್ಷೆ: ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 96-2

ರಹಾನೆ

ರಹಾನೆ

ಶುಭ್ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ 101 ಎಸೆತಗಳಲ್ಲಿ 50 ರನ್​ಗೆ ನಿರ್ಗಮಿಸಿದರು. ಸದ್ಯ ಕ್ರೀಸ್​ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದು ನಾಳೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 • Share this:

  ಸಿಡ್ನಿ (ಜ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ಸಾಗುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್​ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕ ಹಾಗೂ ಮಾರ್ನಸ್ ಲಾಬುಶೇನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 338 ರನ್​ಗೆ ಆಲೌಟ್ ಆದರೆ, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ.


  ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ಆರಂಭದಲ್ಲಿ ಡೇವಿಡ್ ವಾರ್ನರ್(5) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಪುಕೋವ್​ಸ್ಕಿ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಲು ಹೊರಟರು. ಈ ಜೋಡಿ ತಂಡಕ್ಕೆ 100 ರನ್​ಗಳ ಕಾಣಿಕೆ ನೀಡಿತು.


  India vs Australia, 3rd Test: ವಿಲ್-ಲಾಬುಶೇನ್ ಅರ್ಧಶತಕ: ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 166-2


  ವಿಲ್ ಪುಕೋವ್​ಸ್ಕಿ 110 ಎಸೆತಗಳಲ್ಲಿ 62 ರನ್ ಬಾರಿಸಿ ನವ್​ದೀಪ್ ಸೈನಿ ಬೌಲಿಂಗ್​ನಲ್ಲಿ ಔಟ್ ಆದರು. ಬಳಿಕ ಸ್ಟೀವ್ ಸ್ಮಿತ್ ಜೊತೆಯಾದ ಲಾಬುಶೇನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಲಾಬುಶೇನ್ 67 ರನ್ ಬಾರಿಸಿ ಹಾಗೂ ಸ್ಮಿತ್ 31 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.  ಇಂದು ಇನ್ನಿಂಗ್ಸ್ ಮುಂದುವರೆಸಿದ ಈ ಜೋಡಿ ಅದೇ ಲಯದಲ್ಲಿ ಬ್ಯಾಟ್ ಬೀಸಿತು. ಶತಕದ ಜೊತೆಯಾಟ ಆಡಿತು. 196 ಎಸೆತಗಳಲ್ಲಿ ಎದುರಿಸಿದ ಲಾಬುಶೇನ್ 11 ಬೌಂಡರಿ ಬಾರಿಸಿ 91 ರನ್ ಗಳಿಸಿ ಜಡೇಜಾ ಬೌಲಿಂಗ್​ನಲ್ಲಿ ಔಟ್ ಆದರು. ಇದರ ಬೆನ್ನಲ್ಲೆ ಮ್ಯಾಥ್ಯೂ ವೇಡ್ 13 ರನ್​​ಗೆ ಬ್ಯಾಟ್ ಕೆಳಗಿಟ್ಟರೆ, ಕಾಮೆರಾನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್​ ಸೊನ್ನೆ ಸುತ್ತಿದರು. ನಾಯಕ ಟಿಮ್ ಪೈನ್ ಆಟ ಕೇವಲ 1 ರನ್​ಗೆ ಅಂತ್ಯವಾಯಿತು.


  ಈ ಸಂದರ್ಭ ಸ್ಟೀವ್ ಸ್ಮಿತ್ ಟೆಸ್ಟ್​ ಕ್ರಿಕೆಟ್​ನಲ್ಲಿ 27ನೇ ಶತಕ ಸಿಡಿಸಿ ಮಿಂಚಿದರು. ಆದರೆ, ಇವರಿಗೆ ಮಿಚೆಲ್ ಸ್ಟಾರ್ಕ್(24) ಹಾಗೂ ನೇಥನ್ ಲ್ಯಾನ್ (0) ಸಾತ್ ನೀಡಲಿಲ್ಲ. ಅಂತಿಮವಾಗಿ ಸ್ಮಿತ್ ಕೂಡ ರನೌಟ್ ಆಗುವ ಮೂಲಕ ಆಸ್ಟ್ರೇಲಿಯಾ 105.4 ಓವರ್​ಗಳಲ್ಲಿ 338 ರನ್​ಗೆ ಆಲೌಟ್ ಆಯಿತು. ಸ್ಮಿತ್ 226 ಎಸೆತಗಳಲ್ಲಿ 16 ಬೌಂಡರೊಯೊಂದಿಗೆ 131 ರನ್ ಬಾರಿಸಿದರು. ಭಾರತ ಪರ ಜಡೇಜಾ 4 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ ಹಾಗೂ ನವ್​ದೀಪ್ ಸೈನಿ ತಲಾ 2, ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದಿದ್ದಾರೆ.


  ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ 26 ರನ್ ಗಳಿಸಿರುವಾಗ ಔಟ್ ಆದರು.  ಇತ್ತ ಶುಭ್ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ 101 ಎಸೆತಗಳಲ್ಲಿ 50 ರನ್​ಗೆ ನಿರ್ಗಮಿಸಿದರು. ಸದ್ಯ ಕ್ರೀಸ್​ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದು ನಾಳೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 45 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡಿ 96 ರನ್ ಗಳಿಸಿದ್ದು ಇನ್ನೂ 242 ರನ್​ಗಳ ಹಿನ್ನಡೆಯಲ್ಲಿದೆ.

  Published by:Vinay Bhat
  First published: