ಸಿಡ್ನಿ (ಜ. 11): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಸರಣಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಆಸ್ಟ್ರೇಲಿಯಾ ನೀಡಿದ್ದ 407 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಹನುಮಾ ವಿಹಾರಿ ಹಾಗೂ ಆರ್. ಅಶ್ವಿನ್ ಕ್ರಿಸ್ ಕಚ್ಚಿ ನಿಂತರೆ, ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಆಟದ ಪರಿಣಾಮ ರಹಾನೆ ಪಡೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟೆಸ್ಟ್ ಆಸೀಸ್ ಜಯಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಹೀಗಾಗಿ ಸರಣಿ ಸಮಬಲದಿಂದಲೆ ಕೂಡಿದೆ. ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಇನ್ನಷ್ಟು ಕುತೂಹಲ ಕೆರಳಿಸಿದೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 338 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮಾಡಿದ ಭಾರತ 244 ರನ್ಗೆ ಆಲೌಟ್ ಆಗುವ ಮೂಲಕ 94 ರನ್ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(131) ಅವರ ಆಕರ್ಷಕ ಶತಕ, ಮಾರ್ನಸ್ ಲಾಬುಶೇನ್ ಅವರ 91 ರನ್ ಹಾಗೂ ವಿಲ್ ಪುಕೋವ್ಸ್ಕಿ ಅವರ 62 ರನ್ಗಳ ನೆರವಿನಿಂದ 338 ರನ್ ಗಳಿಸಿತು. ಭಾರತ ಚೇತೇಶ್ವರ್ ಪೂಜಾರ ಹಾಗೂ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 244 ರನ್ಗೆ ಸರ್ವಪತನ ಕಂಡಿತು.
India vs Australia: ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ಸಾಧನೆ ಗೈದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ
Match saved 🙌
Ashwin and Vihari batted well over a hundred deliveries each to earn India a memorable draw 👏🇮🇳
The thrill of Test cricket 😅#AUSvIND ▶️ https://t.co/jOSQoYOuSC pic.twitter.com/N8TDwKmgnZ
— ICC (@ICC) January 11, 2021
ಗುರಿ ಬೆನ್ನಟ್ಟಿದ ಭಾರತ ಪರ ರೋಹಿತ್ ಶರ್ಮಾ(52) ಹಾಗೂ ಶುಭ್ಮನ್ ಗಿಲ್(31) ಉತ್ತಮ ಆರಂಭ ಒದಗಿಸಿದರು. ನಿನ್ನೆ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ಗೆಲುವಿಗೆ ಇನ್ನೂ 309 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಐದನೇ ದಿನ ಬ್ಯಾಟಿಂಗ್ ಮುಂದುವರೆಸಿದ ಟೀಂ ಇಂಡಿಯಾ ಬೇಗನೆ ನಾಯಕ ಅಜಿಂಕ್ಯಾ ರಹಾನೆ(4) ವಿಕೆಟ್ ಕಳೆದುಕೊಂಡಿತು. ಇಂದು ಒಂದೂ ರನ್ ಗಳಿಸದೆ ರಹಾನೆ ಔಟ್ ಆದರು.
ಬಳಿಕ ಚೇತೇಶ್ವರ್ ಪೂಜಾರ ಜೊತೆಯಾದ ರಿಷಭ್ ಪಂತ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಂತ್ 186 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿ ಆಸೀಸ್ ಬೌಲರ್ಗಳ ಬೆವರಿಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಈ ಜೋಡಿ 148 ರನ್ಗಳ ಕಾಣಿಕೆ ನೀಡಿತು.
ಶತಕದ ಅಂಚಿನಲ್ಲಿ ಎಡವಿದ ರಿಷಭ್ 118 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ನೊಂದಿಗೆ 97 ರನ್ಗೆ ಔಟ್ ಆದರು. ಬಳಿಕ ಪೂಜಾರ ಕೂಡ ಒಂದಿಷ್ಟು ಆಕರ್ಷಕ ಹೊಡೆತ ಬಾರಿಸಿ ನೆರವಾದರು. 205 ಎಸೆತಗಳನ್ನು ಎದುರಿಸಿದ ಪೂಜಾರ 12 ಬೌಂಡರಿಯೊಂದಿಗೆ 77 ರನ್ ಬಾರಿಸಿದರು.
Rahul Dravid Birthday: ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ಗೆ ಹುಟ್ಟುಹಬ್ಬದ ಸಂಭ್ರಮ
ಪೂಜಾರ-ಪಂತ್ ನಿರ್ಗಮಿಸಿದ ಕಾರಣ ಭಾರತಕ್ಕೆ ಗೆಲುವು ಕಠಿಣವಾಯಿತು. ಹೀಗಾಗಿ ಹನುಮಾ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಡ್ರಾ ಸಾಧಿಸುವತ್ತ ಚಿತ್ತ ನೆಟ್ಟರು. ಅದರಂತೆ ಈ ಜೋಡಿ ಆಸೀಸ್ ಬೌಲರ್ಗಳ ಮಾರಕ ದಾಳಿಯನ್ನು ಎಚ್ಚರಿಯಿಂದ ಎದುರಿಸಿ ಕ್ರೀಸ್ ಕಚ್ಚಿ ನಿಂತರು. ಅದರಲ್ಲೂ ವಿಹಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಆಟಗಾರ ಎನಿಸಿದರು. ವಿಹಾರಿ 100 ಎಸೆತಗಳನ್ನು ಎದುರಿಸಿ ಗಳಿಸಿದ್ದು 6 ರನ್.
Hanuma Vihari and R Ashwin have negotiated over 200 balls between them 🔥
A display of real grit 🇮🇳#AUSvIND ▶️ https://t.co/jOSQoYOuSC pic.twitter.com/cCc1qMycHW
— ICC (@ICC) January 11, 2021
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲದಲ್ಲಿದೆ. ಹೀಗಾಗಿ ಗಬ್ಬಾದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ