India vs Australia: ಭಾರತಕ್ಕೆ ಬಿಗ್ ಶಾಕ್: ಸಿಡ್ನಿ ಟೆಸ್ಟ್ ಡ್ರಾದ ರೂವಾರಿ ಸರಣಿಯಿಂದಲೇ ಔಟ್!

ಅಂತಿಮ ದಿನ ಸ್ನಾಯು ಸೆಳೆತದ ನಡುವೆಯೂ ವಿಹಾರಿ ಸುದೀರ್ಘ‌ ಬ್ಯಾಟಿಂಗ್‌ ನಡೆಸಿ ಭಾರತವನ್ನು ಸೋಲಿನಿಂದ ಪಾರುಮಾಡಿದ್ದರು. ಆದರೆ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಇವರು ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ.

Team India

Team India

 • Share this:
  ಸಿಡ್ನಿ ಕ್ರಿಕೆಟ್ ಗ್ರೌಂಡ್​​ನಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ದೂರದ ಮಾತಾಗಿತ್ತು. ಹೀಗಾಗಿ ಸೋಲಿನಿಂದ ತಪ್ಪಿಸಿ ಕನಿಷ್ಠ​ ಡ್ರಾ ಆದರೂ ಮಾಡಲೇಬೇಕು ಎಂದು ಕ್ರೀಸ್ ಕಚ್ಚಿ ನಿಂತಿದ್ದು ಹನುಮಾ ವಿಹಾರಿ. ಇವರು ಬರೋಬ್ಬರಿ 161 ಎಸೆತಗಳಲ್ಲಿ ಎದುರಿಸಿದರು. ಔಟ್ ಆಗದೆ 23 ರನ್ ಗಳಿಸಿದರು. ಹೀಗೆ ಪಂದ್ಯವನ್ನು ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ ವಿಹಾರಿ ಈಗ ಅಂತಿಮ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ.

  ಅಂತಿಮ ದಿನ ಸ್ನಾಯು ಸೆಳೆತದ ನಡುವೆಯೂ ವಿಹಾರಿ ಸುದೀರ್ಘ‌ ಬ್ಯಾಟಿಂಗ್‌ ನಡೆಸಿ ಭಾರತವನ್ನು ಸೋಲಿನಿಂದ ಪಾರುಮಾಡಿದ್ದರು. ಆದರೆ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಇವರು ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಪಂದ್ಯದ ಬಳಿಕ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದೆ. ಇಂದು ವರದಿ ಬರುವ ಸಾಧ್ಯತೆ ಇದೆ.

  BBL 10: ಹೀಗೂ ಕ್ಯಾಚ್ ಹಿಡಿಯಬಹುದು: ವಿಭಿನ್ನ ಫೀಲ್ಡಿಂಗ್ ವಿಡಿಯೋ ವೈರಲ್

  ಮುಂದಿನ ಮೂರು ದಿನಗಳಲ್ಲಿ ಮತ್ತೊಂದು ಪಂದ್ಯ ಆರಂಭವಾಗಲಿದ್ದು, ಈ ವೇಳೆಗೆ ಅವರು ಸಂಪೂರ್ಣ ಗುಣಮುಖರಾಗುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಸ್ಕ್ಯಾನ್ ವರದಿಗಳು ಬಂದ ನಂತರವೇ ವಿಹಾರಿ ಅವರ ಗಾಯದ ಪ್ರಮಾಣವನ್ನು ಕಂಡು ಹಿಡಿಯಬಹುದು. ಆದರೆ, ಅದು ಗ್ರೇಡ್ 1 ಗಾಯವಾಗಿದ್ದರೂ ಸಹಾ ಅವರು ಕನಿಷ್ಠ ನಾಲ್ಕು ವಾರಗಳ ಕಾಲ ಹೊರಗಿರಬೇಕಾಗಿರುತ್ತದೆ. ಜೊತೆಗೆ ನಂತರ ಎನ್​ಸಿಎನಲ್ಲಿ ಪುನರ್ವಸತಿಗೆ ಒಳಗಾಗಬೇಕಿದೆ.

  ಇನ್ನೂ ಹೆಬ್ಬೆರಳು ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜಾ ಕೂಡ ಮುಂದಿನ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಜಡೇಜಾ ಮತ್ತು ವಿಹಾರಿ ಸೇವೆ ಇಲ್ಲದೆ ಭಾರತ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ದುರ್ಬಲವಾಗಲಿದೆ. ಹೀಗಿರುವಾಗ ಕೊಂಚ ಹೊಂದಾಣಿಕೆ ತರುವ ಸಲುವಾಗಿ ಶೇ. 100ರಷ್ಟು ಫಿಟ್ನೆಸ್‌ ಇಲ್ಲದೇ ಇರುವ ಯುವ ಪ್ರರಿಭೆ ರಿಷಭ್ ಪಂತ್‌ಗೆ ಬ್ಯಾಟಿಂಗ್‌ ಜವಾಬ್ದಾರಿ ಮಾತ್ರ ವಹಿಸಿ, ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ ಜವಾಬ್ದಾರಿಯನ್ನು ಅನುಭವಿ ವೃದ್ಧಿಮಾನ್‌ ಸಹಾಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

  ನಿನ್ನ ಗಬ್ಬಾಗೆ ಕರೆದೊಯ್ಯುವೆ, ನೀ ಭಾರತಕ್ಕೆ ಬಾ: ಆಸೀಸ್ ಆಟಗಾರನಿಗೆ ಅಶ್ವಿನ್ ತಿರುಗೇಟು..!

  ಇತ್ತ ರವಿಚಂದ್ರನ್ ಅಶ್ವಿನ್‌ ಕೂಡ ಬೆನ್ನು ನೋವಿನಿಂದ ಬಳಲುತ್ತಿದ್ದು, ಬ್ಯಾಟಿಂಗ್‌ ವೇಳೆ ಪಕ್ಕೆಲುಬುಗಳಿಗೆ ಪ್ಯಾಟ್‌ ಕಮಿನ್ಸ್‌ ಎಸೆದ ಮಾರಕ ಬೌನ್ಸರ್‌ಗಳ ಪೆಟ್ಟನ್ನೂ ತಿಂದಿದ್ದಾರೆ. ಒಟ್ಟಾರೆ ಈ ಬಾರಿ ಆಸೀಸ್‌ ಪ್ರವಾಸಕ್ಕೂ ಮೊದಲೇ ಭಾರತ ತಂಡ ಇಶಾಂತ್‌ ಶರ್ಮಾ, ಭುವನೇಶ್ವರ್‌ ಕುಮಾರ್‌ ಅವರಂತಹ ಅನುಭವಿ ವೇಗಿಗಳ ಸೇವೆ ಕಳೆದುಕೊಂಡರೆ, ಬಳಿಕ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್ ಮತ್ತು ಕೆಎಲ್‌ ರಾಹುಲ್‌ ಸೇವೆಯನ್ನೂ ಕಳೆದುಕೊಳ್ಳುವಂತ್ತಾಯಿತು. ಈಗ ಗಾಯಾಳುಗಳ ಪಟ್ಟಿಗೆ ಅಶ್ವಿನ್, ಜಡೇಜಾ ಮತ್ತು ವಿಹಾರಿ ಕೂಡ ಸೇರ್ಪಡೆಯಾಗಿದ್ದಾರೆ.
  Published by:Vinay Bhat
  First published: