India vs Australia: ನಾಳೆಯಿಂದ ಏಕದಿನ ಸರಣಿ; ಬದಲಾವಣೆ ಅಗತ್ಯ, ಹೇಗಿರಲಿದೆ ಭಾರತದ ಆಡುವ ಬಳಗ?

ನಾಳೆ ಏಕದಿನ ಪಂದ್ಯವಾಗಿದ್ದರಿಂದ ರೋಹಿತ್ ವಾಪಸ್ ತಂಡಕ್ಕೆ ಮರಳಲಿದ್ದಾರೆ. ಹೀಗಾಗಿ ಓಪನರ್​ಗಳಾಗಿ ರೋಹಿತ್-ಧವನ್ ಜೋಡಿ ಆಡಲಿದ್ದಾರೆ. ಹಾಗಂತ ಕೆ ಎಲ್ ರಾಹುಲ್​​ರನ್ನು ಕಡೆಗಣಿಸುವಂತಿಲ್ಲ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • News18
  • Last Updated :
  • Share this:
ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಸೋತು ಭಾರೀ ಮುಖಬಂಗ ಅನುಭವಿಸಿರುವ ಭಾರತ ಸದ್ಯ ಏಕದಿನ ಸರಣಿಗೆ ಸಜ್ಜಾಗಿದೆ. ನಾಳೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಗೆದ್ದು ಶುಭಾರಂಭದೊಂದಿಗೆ ಸರಣಿಯನ್ನು ವಶ ಪಡಿಸಿಕೊಳ್ಳುವ ಅಂದಾಜಿನಲ್ಲಿದೆ ಕೊಹ್ಲಿ ಪಡೆ.

ಟಿ-20 ಸರಣಿಯಲ್ಲಿ ಮಾಡಿದ ತಪ್ಪನ್ನು ಇಲ್ಲಿ ಮಾಡದೆ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಅಂತೆಯೆ ತಂಡದಲ್ಲಿ ಒಂದಿಷ್ಟಯ ಬದಲಾವಣೆ ಅತ್ಯಗತ್ಯ.

ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಆರಂಭಿಕರಾಗಿ ಶಿಖರ್ ಧವನ್ ಹಾಗೂ ಕೆ ಎಲ್ ರಾಹುಲ್ ಕಣಕ್ಕಿಳಿದಿದ್ದರು. ಆದರೆ, ನಾಳೆ ಏಕದಿನ ಪಂದ್ಯವಾಗಿದ್ದರಿಂದ ರೋಹಿತ್ ವಾಪಸ್ ತಂಡಕ್ಕೆ ಮರಳಲಿದ್ದಾರೆ. ಹೀಗಾಗಿ ಓಪನರ್​ಗಳಾಗಿ ರೋಹಿತ್-ಧವನ್ ಜೋಡಿ ಆಡಲಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಒಂದೇ ಪಂದ್ಯದಲ್ಲಿ 807 ರನ್, 46 ಸಿಕ್ಸರ್​​; ಗೇಲ್ ನಿವೃತ್ತಿ ಮುಂದಕ್ಕೆ?

ಹಾಗಂತ ಕೆ ಎಲ್ ರಾಹುಲ್​​ರನ್ನು ಕಡೆಗಣಿಸುವಂತಿಲ್ಲ. ಆಡಿದ ಎರಡೂ ಟಿ-20 ಪಂದ್ಯಗಳಲ್ಲಿ ರಾಹುಲ್ ಅದ್ಭುತ ಪ್ರದರ್ಶನ ತೋರಿದ್ದರು. ಹೀಗಾಗಿ ನಾಯಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದರೆ, 4ನೇ ಸ್ಥಾನದಲ್ಲಿ ರಾಹುಲ್ ಕಣಕ್ಕಿಳಿಯಲಿದ್ದಾರೆ. ಉಳಿಂದರೆ ಅಂಬಟಿ ರಾಯುಡು ಹಾಗೂ ಎಂ ಎಸ್ ಧೋನಿ ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿ ಆಡಲಿದ್ದಾರೆ.

ಇನ್ನು ಆಲ್ರೌಂಡರ್ ಜವಾಬ್ದಾರಿಯನ್ನು ವಿಜಯ್ ಶಂಕರ್ ವಹಿಸುವ ಅಂದಾಜಿದೆ. ಕಳೆದ ಕೆಲ ಪಂದ್ಯಗಳಿಂದ ಉತ್ತಮ ಆಟ ಪ್ರದರ್ಶಿಸುತ್ತಿದ್ದು, ವಿಶ್ವಕಪ್ ದೃಷ್ಟಿಯಿಂದ ಶಂಕರ್​ಗೆ ಅವಕಾಶ ಸಿಗುವ ಲೆಕ್ಕಾಚಾರ ಹೆಚ್ಚಿದೆ.

ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್​​ ಮೋಡಿ ಮಾಡಿದರೆ, ವೇಗಿಗಳ ಪೈಕಿ ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿಯುವುದು ಪಕ್ಕ.

First published: