Indian Cricket Team: ಭಾನುವಾರ ಒಂದಲ್ಲ ಎರಡಲ್ಲ 3 ಪಂದ್ಯಗಳಲ್ಲಿ ಗೆದ್ದು ಬೀಗಿದ ಭಾರತೀಯ ಕ್ರಿಕೆಟ್ ತಂಡ

Indian Cricket Team: ಭಾರತದ ಗೆಲುವಿನಲ್ಲಿ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಬೌಲರ್​ಗಳಾದ ಇಶಾನ್ ಪೊರೆಲ್ ಮತ್ತು ಕೃಣಾಲ್ ಪಾಂಡ್ಯ ಕಾರಣರಾದರು. ಶಾ ಕೇವಲ 100 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ ಸಿಡಿಸಿ 150 ರನ್ ಚಚ್ಚಿದರು.

Vinay Bhat | news18-kannada
Updated:January 20, 2020, 11:11 AM IST
Indian Cricket Team: ಭಾನುವಾರ ಒಂದಲ್ಲ ಎರಡಲ್ಲ 3 ಪಂದ್ಯಗಳಲ್ಲಿ ಗೆದ್ದು ಬೀಗಿದ ಭಾರತೀಯ ಕ್ರಿಕೆಟ್ ತಂಡ
ಭಾರತ ಕ್ರಿಕೆಟ್ ತಂಡ
  • Share this:
ಬೆಂಗಳೂರು (ಜ. 20): ಆದಿತ್ಯವಾರ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭದಿನ ಎಂದರೆ ತಪ್ಪಾಗಲಾರದು. ಯಾಕೆಂದರೆ, ನಿನ್ನೆ ಭಾರತ ಕ್ರಿಕೆಟ್ ತಂಡ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿತು.

ಮೊದಲನೆಯದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡರೆ, ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತೀಯ ಕಿರಿಯರು ಶ್ರೀಲಂಕಾ ವಿರುದ್ಧ ಜಯಿಸಿ ಶುಭಾರಂಭ ಮಾಡಿದರು.

India vs Australia: Rohit Sharma Ton and Kohli Knock Leads India to Series Win
ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಸರಣಿಯಲ್ಲಿ 2-1 ಅಂತರದ ಜಯ ಸಾಧಿಸಿದ ಟೀಂ ಇಂಡಿಯಾ ಟ್ರೋಫಿ ಜೊತೆ.


IND vs AUS: ಚಿನ್ನಸ್ವಾಮಿಯಲ್ಲಿ ಕೊಹ್ಲಿ-ರೋಹಿತ್ ದರ್ಬಾರ್; ಸರಣಿ ವಶಪಡಿಸಿಕೊಂಡು ಸೇಡು ತೀರಿಸಿಕೊಂಡ ಭಾರತ

ಇನ್ನು ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಎ ತಂಡ 12 ರನ್​ಗಳ ರೋಚಕ ಜಯದೊಂದಿಗೆ ಗೆದ್ದು ಬೀಗಿತು. ಹೀಗೆ ಒಂದೇ ದಿನ ಭಾರತ ಕ್ರಿಕೆಟ್ ತಂಡ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತು.

ಪೃಥ್ವಿ ಶಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ನ್ಯೂಜಿಲೆಂಡ್ ಪ್ರವಾಸದ ಎರಡನೇ ಅಭ್ಯಾಸ ಪಂದ್ಯವನ್ನೂ ಜಯಿಸಿತು. ಭಾರತ ಎ ತಂಡ ಗಳಿಸಿದ 372 ರನ್​ಗೆ ಪ್ರತಿಯಾಗಿ ನ್ಯೂಜಿಲೆಂಡ್ ಇಲವೆನ್ ತಂಡದ ಹೋರಾಟ 360 ರನ್​ಗೆ ಅಂತ್ಯಗೊಂಡು 12 ರನ್​ಗಳಿಂದ ಸೋಲಪ್ಪಿತು.

India vs Australia, India under 19 vs sri lanka U19 Indian cricket team has won the all 3 matches in a day
ಪೃಥ್ವಿ ಶಾ ಶತಕ ಸಿಡಿಸಿದ ವೇಳೆ ಸಂಭ್ರಮಿಸುತ್ತಿರುವುದು.
ಭಾರತದ ಗೆಲುವಿನಲ್ಲಿ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಬೌಲರ್​ಗಳಾದ ಇಶಾನ್ ಪೊರೆಲ್ ಮತ್ತು ಕೃಣಾಲ್ ಪಾಂಡ್ಯ ಕಾರಣರಾದರು. ಶಾ ಕೇವಲ 100 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ ಸಿಡಿಸಿ 150 ರನ್ ಚಚ್ಚಿದರು.

ಕಿರಿಯರ ವಿಶ್ವಕಪ್: ಭಾರತ ತಂಡ ಶುಭಾರಂಭ; ಸೌಥ್ ಆಫ್ರಿಕಾಗೆ ಶಾಕ್ ಕೊಟ್ಟ ಆಫ್ಘನ್ನರು

ಇನ್ನು ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತೀಯ ಕಿರಿಯರು ಶ್ರೀಲಂಕಾ ವಿರುದ್ಧ 90 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದರು. ಮೊದಲು ಬ್ಯಾಟ್ ಮಾಡಿದ ಭಾರತ ಅಂಡರ್-19 ತಂಡ 50 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 297 ರನ್ ಬಾರಿಸಿತು. ಯಶಸ್ವಿ ಜೈಸ್ವಾಲ್ 74 ಎಸೆತಗಳಲ್ಲಿ 59 ರನ್ ಗಳಿಸಿದರೆ, ನಾಯಕ ಪ್ರಿಯಾಂ ಗಾರ್ಗ್ 56 ಹಾಗೂ ಧೃವ್ ಜೂರೆಲ್ ಅಜೇಯ 52 ರನ್ ಬಾರಿಸಿದರು.

298 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಅಂಡರ್-19 ತಂಡ 45.2 ಓವರ್​ನಲ್ಲಿ 207 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಆಕಾಶ್ ಸಿಂಗ್, ಸಿದ್ದೇಶ್ ವೀರ್ ಹಾಗೂ ರವಿ ಬಿಶೋನಿ ತಲಾ 2 ವಿಕೆಟ್ ಪಡೆದರು.

India vs Australia, India under 19 vs sri lanka U19 Indian cricket team has won the all 3 matches in a day
ಶ್ರೀಲಂಕಾ ಅಂಡರ್-19 ವಿರುದ್ಧ ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತೀಯ ಕಿರಿಯರು ಗೆದ್ದು ಸಂಭ್ರಮಿಸುತ್ತಿರುವುದು.


IND vs AUS: ಧೋನಿಯ ವಿಶ್ವದಾಖಲೆ ಮುರಿದ ಕಿಂಗ್ ಕೊಹ್ಲಿ; ಕ್ಯಾಪ್ಟನ್ ಆಗಿ ನೂತನ ಸಾಧನೆ

ಬೆಂಗಳೂರಿನಲ್ಲಿ ನಡೆದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ನಿರ್ಣಾಯಕ ಏಕದಿನ ಪಂದ್ಯದಲ್ಲೂ ಕೊಹ್ಲಿ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಮೂರು ಏಕದಿನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿ ಸರಣೀ ವಶಪಡಿಸಿಕೊಂಡಿತು.

First published: January 20, 2020, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading