ಕೊಹ್ಲಿ ಶತಕ, ಕೊನೆಯ ಓವರ್​​ನಲ್ಲಿ ಮಿಂಚಿದ ಶಂಕರ್; ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ

ಕೊನೆಯ 6 ಎಸೆತದಲ್ಲಿ ಆಸೀಸ್​ಗೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಬೌಲಿಂಗ್ ಮಾಡಲು ಬಂದ ವಿಜಯ್ ಶಂಕರ್ ತನ್ನ ಮೊದಲ ಎಸೆತದಲ್ಲೇ ಸ್ಟಾಯಿನಿಸ್​ರನ್ನು ಎಲ್​​ಬಿ ಬಲೆಗೆ ಸಿಲುಕಿ ಹಾಕಿದರು. ಪರಿಣಾಮ ಜಯ ಭಾರತದ ಕಡೆವಾಲಿತು.

Vinay Bhat | news18
Updated:March 13, 2019, 5:14 PM IST
ಕೊಹ್ಲಿ ಶತಕ, ಕೊನೆಯ ಓವರ್​​ನಲ್ಲಿ ಮಿಂಚಿದ ಶಂಕರ್; ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ
ವಿಜಯ್ ಶಂಕರ್ (ಟೀಂ ಇಂಡಿಯಾ ಆಟಗಾರ)
Vinay Bhat | news18
Updated: March 13, 2019, 5:14 PM IST
ನಾಗ್ಪುರ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಬೌಲರ್​ಗಳ ಮಿಂಚಿನ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 8 ರನ್​ಗಳ ರೋಚಕ ಜಯ ಸಾಧಿಸಿದೆ. ಜೊತೆಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ 500 ಏಕದಿನ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ.

ಇಲ್ಲಿನ ವಿದರ್ಭ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಮತ್ತದೆ ಕಳಪೆ ಆರಂಭ ಪಡೆದುಕೊಂಡಿತು. ಮೊದಲ ಓವರ್​ನಲ್ಲೇ ರೋಹಿತ್ ಶರ್ಮಾ ಸೊನ್ನೆ ಸುತ್ತಿದರೆ, ಶಿಖರ್ ಧವನ್ 21 ರನ್​ಗೆ ನಿರ್ಗಮಿಸಿದರು. ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯುಡು ಇನ್ನಿಂಗ್ಸ್​ ಕಟ್ಟಲು ಮುಂದಾದರಾದರು, ರಾಯುಡು 18 ರನ್​ಗೆ ಔಟ್ ಆಗಿ ಆಘಾತ ನೀಡಿದರು.

ಈ ಸಂದರ್ಭ ಕೊಹ್ಲಿ ಜೊತೆಯಾದ ವಿಜಯ್ ಶಂಕರ್ ಭರ್ಜರಿ ಜೊತೆಯಾಟವಾಡಿದರು. 4ನೇ ವಿಕೆಟ್​​ಗೆ ಈ ಜೋಡಿ 86 ರನ್​​ಗಳ ಕಾಣಿಕೆ ನೀಡಿತು. ಅದ್ಭುತವಾಗಿ ರನ್ ಕಲೆಹಾಕುತ್ತಿದ್ದ ಶಂಕರ್ 46  ರನ್ ಗಳಿಸಿರುವಾಗ ದುರಾದೃಷ್ಟವಶಾತ್ ರನೌಟ್​ಗೆ ಬಲಿಯಾದರು. ಇದರ ಬೆನ್ನಲ್ಲೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೇದರ್ ಜಾಧ್(11) ಹಾಗೂ ಎಂ ಎಸ್ ಧೋನಿ(0) ಬಂದ ಬೆನ್ನಲ್ಲೆ ಬ್ಯಾಟ್ ಕೆಳಗಿಟ್ಟಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿತು.

India vs Australia, Live Cricket Score: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ಹೀಗೆ ಭಾರತ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಏಕಾಂಗಿಯಾಗಿ ರನ್ ಕಲೆಹಾಕುತ್ತಿದ್ದ ವಿರಾಟ್ ಏಕದಿನ ಕ್ರಿಕೆಟ್​​​ನಲ್ಲಿ 40ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇವರಿಗೆ ಜಡೇಜಾ(21) ಕೆಲಹೊತ್ತು ಸಾತ್ ನೀಡಿದರು. ಆದರೆ, ಶತಕ ಸಿಡಿಸಿದ ಬೆನ್ನಲ್ಲೆ ಕೊಹ್ಲಿ ನಿರ್ಗಮಿಸಿದ್ದು ತಂಡದ ಸ್ಕೋರ್ 250ಕ್ಕೆ ನಿಲ್ಲುವಂತಾಯಿತು. 120 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಕೊಹ್ಲಿ 116 ರನ್ ಚಚ್ಚಿ ಔಟ್ ಆದರು. ಈ ಮೂಲಕ ಭಾರತ 48.2 ಓವರ್​ಗಳಲ್ಲಿ 250 ರನ್​ಗೆ ಆಲೌಟ್ ಆಯಿತು. ಆಸೀಸ್ ಪರ ಪ್ಯಾಟ್ ಕಮಿನ್ಸ್​ 4 ವಿಕೆಟ್ ಕಿತ್ತರೆ, ಆ್ಯಡಂ ಜಂಪಾ 2 ವಿಕೆಟ್ ಪಡೆದರು.

ಇತ್ತ 251 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖ್ವಾಜಾ 83 ರನ್​ಗಳ ಜೊತೆಯಾಟವಾಡಿದರು. ಅಂತೆಯೆ ಫಿಂಚ್​ 37 ಹಾಗೂ ಖ್ವಾಜಾ 38 ರನ್​​ ಗಳಿಸಿರುವಾಗ ಕುಲ್ದೀಪ್ ಯಾದವ್ ಪೆವಿಲಿಯನ್​ಗೆ ಅಟ್ಟಿದರು. ಶಾನ್ ಮಾರ್ಶ್​​ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 16 ರನ್​ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಮ್ಯಾಕ್ಸ್​ವೆಲ್ ಅಬ್ಬರ ಕೇವಲ 4 ರನ್​ಗೆ ನಿಂತಿತು.
Loading...

ಈ ಸಂದರ್ಭ ಪೀಟರ್ ಹ್ಯಾಂಡ್ಸ್​ಕಾಂಬ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಜೊತೆಯಾಗಿ ತಂಡವನ್ನು ಗೆಲುವಿನತ್ತ ಕೊಂಡಯ್ಯಲು ನಿರ್ಧರಿಸಿದರು. ಅಂತೆಯೆ ಉತ್ತಮ ಆಟವನ್ನು ಆಡಿದರು. ಆದರೆ, ಹ್ಯಾಂಡ್ಸ್​ಕಾಂಬ್ 48 ರನ್ ಗಳಿಸಿರುವಾಗ ಜಡೇಜಾರ ಮಿಂಚಿನ ರನೌಟ್​ಗೆ ಬಲಿಯಾಗಿ ನಿರ್ಗಮಿಸಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಬಳಿಕ ಬಂದ ಅಲೆಕ್ಸ್​ ಕ್ಯಾರಿ(22) ಕುಲ್ದೀಪ್​​ ಸ್ಪಿನ್ ಮೋಡಿಗೆ ಬಲಿಯಾದರೆ, ನೇಥನ್ ಕಾಲ್ಟರ್​ ಬುಮ್ರಾ ಎಸೆತದಲ್ಲಿ ಬೌಲ್ಡ್​ ಆದರು.

ಹೀಗೆ ಆಸ್ಟ್ರೇಲಿಯಾ ಸತತವಾಗಿ ವಿಕೆಟ್ ಕಳೆದುಕೊಂಡು ಬಂತು. ಆದರೆ, ಇತ್ತ ಸ್ಟಾಯಿನಿಸ್ ಅರ್ಧಶತಕ ಸಿಡಿಸಿ, ಬ್ಯಾಟ್ ಬೀಸಿ ಪಂದ್ಯವನ್ನು ಕೊನೆಯ ಓವರ್ ವರೆಗೂ ತಂದಿಟ್ಟರು. ಕೊನೆಯ 6 ಎಸೆತದಲ್ಲಿ ಆಸೀಸ್​ಗೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಬೌಲಿಂಗ್ ಮಾಡಲು ಬಂದ ವಿಜಯ್ ಶಂಕರ್ ತನ್ನ ಮೊದಲ ಎಸೆತದಲ್ಲೇ ಸ್ಟಾಯಿನಿಸ್​ರನ್ನು ಎಲ್​​ಬಿ ಬಲೆಗೆ ಸಿಲುಕಿ ಹಾಕಿದರು. ಪರಿಣಾಮ ಜಯ ಭಾರತದ ಕಡೆವಾಲಿತು. ಶಂಕರ್​​ರ 3ನೇ ಎಸೆತದಲ್ಲಿ ಜಂಪಾ ಬೌಲ್ಡ್​ ಆಗುವ ಮೂಲಕ ಆಸ್ಟ್ರೇಲಿಯಾ 49.3 ಓವರ್​ಗಳಲ್ಲಿ 242 ರನ್​ಗಳಿಗೆ ಸರ್ವಪತನ ಕಂಡಿತು. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ ಹಾಗೂ ವಿಜಯ್ ಶಂಕರ್ ತಲಾ 2 ವಿಕೆಟ್ ಪಡೆದರು.

ಈ ಮೂಲಕ ಭಾರತ 8 ರನ್​ಗಳ ರೋಚಕ ಜಯದೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಮೂರನೇ ಏಕದಿನ ಪಂದ್ಯ ಮಾರ್ಚ್​ 8 ರಂದು ರಾಂಚಿಯಲ್ಲಿ ನಡೆಯಲಿದೆ.
First published:March 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626