India vs Australia: ಬಾಕ್ಸಿಂಗ್ ಡೇ ಟೆಸ್ಟ್​: ಪ್ರಮುಖ ಬದಲಾವಣೆಯೊಂದಿಗೆ ಭಾರತ ಕಣಕ್ಕೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್‌ XI

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಸಾಕಷ್ಟು ಸಮತೋಲನವುಳ್ಳ ತಂಡವನ್ನು ಆಯ್ಕೆ ಮಾಡುವುದು ಟೀಂ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಲಿದೆ. ಇತ್ತ ರಹಾನೆ ಮೇಲೆ ಕೂಡ ಸಾಕಷ್ಟು ಒತ್ತಡವಿದೆ.

Team India

Team India

 • Share this:
  ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲುಕಂಡಿದ್ದ ಭಾರತ ತಂಡ ಸದ್ಯ ಎರಡನೇ ಟೆಸ್ಟ್​ಗೆ ಸಜ್ಜಾಗುತ್ತಿದೆ. ಈಗಾಗಲೇ ಎಂಸಿಜೆಯಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದು, ಬಾಕ್ಸಿಂಗ್ ಡೇ ಟೆಸ್ಟ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ 0-1ರಲ್ಲಿ ಹಿನ್ನಡೆ ಅನುಭವಿಸಿರುವ ಭಾರತವನ್ನು ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿದ್ದಾರೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಎರಡನೇ ಟೆಸ್ಟ್​ ಆರಂಭವಾಗಲಿದೆ.

  ರಹಾನೆ ಮುಂದೆ ಬಹುದೊಡ್ಡ ಸವಾಲಿದ್ದು ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇದೆ. ಪ್ರಮುಖವಾಗಿ ಪೃಥ್ವಿ ಶಾ ಕಳಪೆ ಫಾರ್ಮ್​ನಿಂದಾಗಿ ಭಾರತ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿಗೆ. ಹೀಗಾಗಿ ಇವರ ಜಾಗಕ್ಕೆ ಶುಭ್ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ಜೊತೆ ಗಿಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

  IPL 2021: ಯಾವ ತಂಡದ ಪರ ಆಡಲಿದ್ದಾರೆ ಸುರೇಶ್ ರೈನಾ: ಸಿಎಸ್​ಕೆ ಫ್ರಾಂಚೈಸಿ ಹೇಳುವುದೇನು?

  ಮೂರನೇ ಕ್ರಮಾಂಕದಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಕಣಕ್ಕಿಳಿಯಲಿದ್ದಾರೆ. ಮೊದಲ ಟೆಸ್ಟ್​ನಲ್ಲಿ ವೈಫಲ್ಯ ಅನುಭವಿಸಿದ್ದ ಪೂಜಾರ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿ ಜಾಗದಲ್ಲಿ ಕೆ. ಎಲ್ ರಾಹುಲ್ ಆಡಲಿದ್ದಾರೆ. ರಾಹುಲ್ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದ್ದು ಆಸೀಸ್ ಬೌಲರ್​ಗಳನ್ನು ಯಾವರೀತಿ ಎದುರಿಸುತ್ತಾರೆ ಎಂಬುದು ಕಾದುನೋಡಬೇಕಿದೆ.

  ಅಜಿಂಕ್ಯಾ ರಹಾನೆ ನಾಯಕತ್ವದ ಜೊತೆ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಇದೆ. ಜೊತೆಗೆ ಫಾರ್ಮ್​ ಕಂಡುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಭಾರತದ ವಿಕೆಟ್ ಕೀಪರ್ ಸ್ಥಾನ ಇನ್ನೂ ಗೊಂದಲದಲ್ಲೇ ಇದೆ. ವೃದ್ದಿಮಾನ್ ಸಾಹ ಕೀಪಿಂಗ್ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ರಿಷಭ್ ಪಂತ್ ಆಡುವ ಸಾಧ್ಯತೆ ಹೆಚ್ಚಿದೆ.

  ಇನ್ನೂ ಇಂಜುರಿಗೆ ತುತ್ತಾಗಿದ್ದ ರವೀಂದ್ರ ಜಡೇಜಾ ಚೇತರಿಸಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ಜಡ್ಡು ಭರ್ಜರಿ ಅಭ್ಯಾಸ ನಡೆಸುತ್ತಿದ್ದು ಹನುಮಾ ವಿಹಾರಿ ಜಾಗದಲ್ಲಿ ಸ್ಥಾನ ಪಡೆದರೆ ಅಚ್ಚರಿಯಿಲ್ಲ. ರವಿಚಂದ್ರ ಅಶ್ವಿನ್ ಬೌಲಿಂಗ್​ನಲ್ಲಿ ಕಮಾಲ್ ಮಾಡುತ್ತಿದ್ದಾರೆ.

  Steve Smith: ಶಮಿ ಸ್ಥಾನ ತುಂಬಬಲ್ಲ ಇಬ್ಬರು ವೇಗಿಗಳನ್ನ ಹೆಸರಿಸಿದ ಸ್ಟೀವ್ ಸ್ಮಿತ್

  ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ನವ್​ದೀಪ್ ಸೈನಿ ಅಥವಾ ಮೊಹಮ್ಮದ್ ಸಿರಾಜ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಖಚಿತ. ಉಮೇಶ್ ಯಾದವ್ ಹಾಗೂ ಜಸ್​ಪ್ರೀತ್ ಬುಮ್ರಾ ಸೇವೆ ಭಾರತಕ್ಕಿರಲಿದೆ.

  ಒಟ್ಟಾರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಸಾಕಷ್ಟು ಸಮತೋಲನವುಳ್ಳ ತಂಡವನ್ನು ಆಯ್ಕೆ ಮಾಡುವುದು ಟೀಂ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಲಿದೆ. ಇತ್ತ ರಹಾನೆ ಮೇಲೆ ಕೂಡ ಸಾಕಷ್ಟು ಒತ್ತಡವಿದೆ.

  ಭಾರತ ಸಂಭಾವ್ಯ ಪ್ಲೇಯಿಂಗ್‌ XI: ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಕೆ. ಎಲ್ ರಾಹುಲ್, ಅಜಿಂಕ್ಯಾ ರಹಾನೆ (ನಾಯಕ), ರಿಷಭ್ ಪಂತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ.
  Published by:Vinay Bhat
  First published: