India vs Australia: ನಾಗ್ಪುರದಲ್ಲಿ ನಾಳೆ ಎರಡನೇ ಏಕದಿನ; ಗೆಲುವಿನ ಓಟ ಮುಂದುವರಿಸುತ್ತಾ ಕೊಹ್ಲಿ ಪಡೆ?

ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಕ್ಕಿದು ಕೊನೆಯ ಏಕದಿನ ಸರಣಿ. ಹೀಗಿರುವಾಗ, ಭಾರತಕ್ಕೆ ಓಪನಿಂಗ್ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಗಬ್ಬರ್ ಖ್ಯಾತಿಯ ಶಿಖರ್​ ಧವನ್​ ಅಬ್ಬರಿಸುವುದನ್ನು ಮರೆತು ಬಿಟ್ಟಿದ್ದಾರೆ.

Vinay Bhat | news18
Updated:March 13, 2019, 5:15 PM IST
India vs Australia: ನಾಗ್ಪುರದಲ್ಲಿ ನಾಳೆ ಎರಡನೇ ಏಕದಿನ; ಗೆಲುವಿನ ಓಟ ಮುಂದುವರಿಸುತ್ತಾ ಕೊಹ್ಲಿ ಪಡೆ?
ಭಾರತ vs ಆಸ್ಟ್ರೇಲಿಯಾ
Vinay Bhat | news18
Updated: March 13, 2019, 5:15 PM IST
ಸಾಗರ್​​ ಕನ್ನೆಮನೆ

ನಾಗ್ಪುರ: ಹೈದರಾಬಾದ್​​ನಲ್ಲಿ ಗೆಲುವು ಸಾಧಿಸಿ ನಾಗ್ಪುರಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ ನಾಳೆ ಸೋಲಿನ ಪೆಟ್ಟು ತಿಂದಿರುವ ಕಾಂಗರೂಗಳ ವಿರುದ್ಧ ಕಾದಾಟಕ್ಕೆ ಸಜ್ಜಾಗಿ ನಿಂತಿದೆ. ವಿದರ್ಭ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿದ್ದಾಜಿದ್ದಿನ ಫೈಟ್​​​​ ಉಭಯ ತಂಡಗಳಲ್ಲೂ ಗೆಲುವಿನ ಕಿಚ್ಚನ್ನ ಹಚ್ಚಿದ್ದು, ವಿರಾಟ್​ ಟೀಂ ಗೆಲುವಿನ ಹಾದಿಯಲ್ಲಿ ಮುಂದುವರಿಯುತ್ತಾ ಎಂಬ ಕುತೂಹಲ ಮೂಡಿಸಿದೆ.

ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಕ್ಕಿದು ಕೊನೆಯ ಏಕದಿನ ಸರಣಿ. ಹೀಗಿರುವಾಗ, ಭಾರತಕ್ಕೆ ಓಪನಿಂಗ್ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಗಬ್ಬರ್ ಖ್ಯಾತಿಯ ಶಿಖರ್​ ಧವನ್​ ಅಬ್ಬರಿಸುವುದನ್ನು ಮರೆತು ಬಿಟ್ಟಿದ್ದಾರೆ. ಹೀಗಾಗಿ ಧವನ್ ಬದಲು ಕೆ. ಎಲ್ ರಾಹುಲ್​ಗೆ ಅವಕಾಶ ಸಿಕ್ಕರೆ ಆಶ್ಚರ್ಯವಿಲ್ಲ.

ಇನ್ನು ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳು ವಿಫಲರಾದರೂ, ಕೆಳಕ್ರಮಾಂಕದ ಬ್ಯಾಟ್ಸ್​ಮನ್​ ಕೂಡ ತಂಡವನ್ನ ಗೆಲ್ಲಿಸಬಲ್ಲರೂ ಎಂದು ಧೋನಿ-ಕೇದಾರ್ ಜಾಧವ್ ಕಳೆದ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಬೌಲಿಂಗ್​ನಲ್ಲೂ ತಂಡ ಬಲಿಷ್ಠವಾಗಿದ್ದು, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಜೊತೆಗೆ ಕುಲ್​ದೀಪ್ ಹಾಗೂ ಜಡೇಜಾ ಮ್ಯಾಜಿಕ್ ಮಾಡಬಲ್ಲರು.

ಇದನ್ನೂ ಓದಿ: ಅಶ್ವಿನ್-ಜಡೇಜಾ ಸ್ಥಾನವನ್ನು ನಾವು ಕಿತ್ತುಕೊಂಡಿಲ್ಲ- ಕುಲ್ದೀಪ್ ಯಾದವ್

ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ನಾಯಕನೇ ಫಾರ್ಮ್ ವೈಫಲ್ಯ ಎದುರಿಸುತ್ತಿರುವುದು ಕಾಂಗರೂಗಳಿಗೆ ನುಂಗಲಾರದ ತುತ್ತಾಗಿದೆ. ಕಳೆದೊಂದು ವರ್ಷದಲ್ಲಿ ಆ್ಯರೋನ್ ಫಿಂಚ್​ ರನ್​ ಬರ ಅನುಭವಿಸುತ್ತಿದ್ದಾರೆ. ಹೀಗಾಗಿ ಉತ್ತಮ ಆರಂಭ ಅಸಾಧ್ಯವಾಗಿದೆ.
Loading...

ಗ್ಲೆನ್ ಮ್ಯಾಕ್ಸ್​ವೆಲ್​ ಉತ್ತಮ ಫಾರ್ಮ್​​​ನಲ್ಲಿದ್ದು ಬ್ಯಾಟಿಂಗ್​​ನಲ್ಲಿ ಬಡ್ತಿ ಸಿಗಬೇಕಿದೆ. ಟಿ-20ಯಲ್ಲಿ ಆಸೀಸ್ ಸರಣಿ ಗೆದ್ದಿದ್ದರೂ ಏಕದಿನ ಕ್ರಿಕೆಟ್​ನಲ್ಲಿ ಇನ್ನಷ್ಟು ಉತ್ತಮ ಸಂಘಟಿತ ಆಟವಾಡುವ ಅವಶ್ಯಕತೆ ಇದೆ.

ಇದನ್ನೂ ಓದಿ: ಅಬ್ಬರವನ್ನು ಮರೆತ ಗಬ್ಬರ್; 2ನೇ ಏಕದಿನದಲ್ಲಿ ಧವನ್ ಬದಲು ರಾಹುಲ್​ಗೆ ಅವಕಾಶ?

ಇನ್ನು ವಿದರ್ಭ ಸ್ಟೇಡಿಯಂನಲ್ಲಿ ನಡೆದಿರುವ ಕೊನೆಯ ಏಕದಿನ ಪಂದ್ಯದಲ್ಲೂ ಭಾರತ-ಆಸ್ಟ್ರೇಲಿಯಾ ತಂಡಗಳೇ ಮುಖಾಮುಖಿಯಾಗಿದ್ದವು. 2017ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಹಿಟ್​ಮ್ಯಾನ್​ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದರು. ಈ ಅಂಕಿ ಅಂಶಗಳು ರೋಹಿತ್ ಮೇಲಿನ ವಿಶ್ವಾಸ ಹೆಚ್ಚಿಸಿದೆ.

First published:March 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626