• Home
  • »
  • News
  • »
  • sports
  • »
  • India vs Australia: ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್​: ರಿಪೋರ್ಟ್​ನಲ್ಲಿ ಏನಿದೆ?

India vs Australia: ಟೀಂ ಇಂಡಿಯಾ ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್​: ರಿಪೋರ್ಟ್​ನಲ್ಲಿ ಏನಿದೆ?

Team India

Team India

ಟೀಂ ಇಂಡಿಯಾ ಆಟಗಾರರಿಂದ ಬಯೋ ಬಬಲ್ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಲಾಗಿತ್ತು. ಸದ್ಯ ನಿಯಮ ಉಲ್ಲಂಘಿಸಿದರೂ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ ಎಂದು ವರದಿಗಳು ಹೇಳಿವೆ.

  • Share this:

    ಭಾರತದ ಕ್ರಿಕೆಟಿಗರು ಭೋಜನಕ್ಕಾಗಿ ಮೆಲ್ಬೋರ್ನ್​ ಹೊಟೇಲ್‌ ಒಂದಕ್ಕೆ ತೆರಳಿ ಕೋವಿಡ್‌-19 ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂಬ ಆಸ್ಟ್ರೇಲಿಯ ಮಾಧ್ಯಮಗಳ ವರದಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹೀಗಾಗಿ ನಿಯಮದ ಪ್ರಕಾರ ರೋಹಿತ್‌ ಶರ್ಮಾ, ರಿಷಭ್ ಪಂತ್, ಪೃಥ್ವಿ ಶಾ, ಶುಭ್ಮನ್ ಗಿಲ್ ಮತ್ತು ನವದೀಪ್‌ ಸೈನಿ ಅವರನ್ನು ಐಸೊಲೇಶನ್‌ನಲ್ಲಿ ಇರಿಸಲಾಗಿತ್ತು. ಇದರಿಂದ ಜ. 7ರಿಂದ ಆರಂಭವಾಗಲಿರುವ ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ದೊಡ್ಡ ಕಂಟಕವೊಂದು ಎದುರಾಗಿತ್ತು. ಐಸೊಲೇಶನ್‌ ಅವಧಿ ವಿಸ್ತರಿಸಲ್ಪಟ್ಟರೆ ಆಗ ರೋಹಿತ್‌ ಶರ್ಮ, ರಿಷಭ್‌ ಪಂತ್‌, ಗಿಲ್‌ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ. ಆದರೆ, ಬಯೋಬಬಲ್​ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಐಸೋಲೇಟ್​ ಆಗಿರುವ 5 ಮಂದಿ ಆಟಗಾರರು 3ನೇ ಟೆಸ್ಟ್​ಗಾಗಿ ಸಿಡ್ನಿಗೆ ಚಾರ್ಟೆಡ್​ ಫ್ಲೈಟ್​ನಲ್ಲಿ ಸೋಮವಾರ ಪ್ರಯಾಣಿಸಲಿದ್ದಾರೆ ಎಂದು ​ತಿಳಿದು ಬಂದಿದೆ.


    ಇದರ ಜೊತೆಗೆ ಭಾರತದ ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್​ ನಡೆಸಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿದೆ.


    6ನೇ ಟೆಸ್ಟ್​ನಲ್ಲೇ 3 ಬಾರಿ 5 ವಿಕೆಟ್ ಸಾಧನೆ ಮಾಡಿದ ಯುವ ವೇಗಿ..!


    ಭಾರತ ತಂಡದ ಐವರು ಆಟಗಾರರು ಮೆಲ್ಬೋರ್ನ್‌ನ ರೆಸ್ಟೋರೆಂಟ್‌ ಒಂದಕ್ಕೆ ಶುಕ್ರವಾರ ಭೇಟಿ ನೀಡಿ ಭೋಜನ ಸೇವಿಸಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಅಭಿಮಾನಿಯೊಬ್ಬ ಭಾರತೀಯ ಆಟಗಾರರ ಟೇಬಲ್‌ನ ಬಿಲ್‌ ಪಾವತಿಸಿದ್ದು, ಅದರ ಫೋಟೊ ಮತ್ತು ವಿಡಿಯೋವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದರು.


    ಇದು ದೊಡ್ಡ ಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿ ಟೀಂ ಇಂಡಿಯಾ ಆಟಗಾರರಿಂದ ಬಯೋ ಬಬಲ್ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಲಾಗಿತ್ತು. ಸದ್ಯ ನಿಯಮ ಉಲ್ಲಂಘಿಸಿದರೂ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ ಎಂದು ವರದಿಗಳು ಹೇಳಿವೆ.


    "ನೀವು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿ. ಅದು ನಿಯಮ ಉಲ್ಲಂಘನೆ ಎಂದು ಎಂದಿಗೂ ಹೇಳಲಿಲ್ಲ. ಆದರೆ ಆಟಗಾರರಿಂದ ಉಲ್ಲಂಘನೆಯಾಗಿದೆಯೇ ಎಂದು ನಿರ್ಧರಿಸಲು ತನಿಖೆಯ ಮೂಲಕ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಆ ಐವರು ಆಟಗಾರರು ಸಿಡ್ನಿಗೆ ತೆರಳಲು ಯಾವುದೇ ನಿರ್ಬಂಧವಿಲ್ಲ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.


    “ಇದು ಆಸ್ಟ್ರೇಲಿಯದ ಒಂದು ವರ್ಗದ ಮಾಧ್ಯಮಗಳ ದುರುದ್ದೇಶಪೂರಿತ ಸುದ್ದಿ. ಮೆಲ್ಬರ್ನ್ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ ಈ ಮಾಧ್ಯಮಗಳು ಇಂಥ ಕೆಲಸಕ್ಕೆ ಇಳಿದಿವೆ. ಅವು ಆಸ್ಟ್ರೇಲಿಯ ತಂಡದ ಮುಂದುವರಿದ ಭಾಗದಂತೆ ಗೋಚರಿಸುತ್ತಿವೆ“ ಎಂದು ಹೆಸರು ಹೇಳಬಯಸದ ಬಿಸಿಸಿಐ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


    Arjun Tendulkar: ಸ್ಪರ್ಧಾತ್ಮಕ ಕ್ರಿಕೆಟ್​ಗೆ ಅರ್ಜುನ್ ತೆಂಡೂಲ್ಕರ್ ಎಂಟ್ರಿ..!


    “ಆಟಗಾರರು ಹೊಟೇಲಿನ ಹೊರಗಡೆ ನಿಂತಿದ್ದರು. ಆದರೆ ಮಳೆ ಬಂದ ಕಾರಣ ಒಳಗೆ ಹೋದರು. ಒಟ್ಟಾರೆ ಭಾರತ ತಂಡವನ್ನು ಮಾನಸಿಕವಾಗಿ ಕುಗ್ಗಿಸಿ ಇದರ ಲಾಭವೆತ್ತುವುದು ಅವರ ಯೋಜನೆ. ಇದು ಕ್ರಿಕೆಟ್‌ ಆಸ್ಟ್ರೇಲಿಯದ ಕೆಟ್ಟ ನಡೆ“ ಎಂದು ಅವರು ಕಿಡಿ ಕಾರಿದ್ದಾರೆ.

    Published by:Vinay Bhat
    First published: