HOME » NEWS » Sports » CRICKET INDIA VS AUSTRALIA HITMAN ROHIT SHARMA JOINS UPBEAT INDIAN TEAM IN MELBOURNE VB

Rohit Sharma: ಟೀಂ ಇಂಡಿಯಾ ಸೇರಿಕೊಂಡ ರೋಹಿತ್ ಶರ್ಮಾ: ಆದ್ರೆ, ಮೂರನೇ ಟೆಸ್ಟ್​ಗೆ ಅನುಮಾನ!

ಸದ್ಯ ಹಿಟ್​ಮ್ಯಾನ್ ರೋಹಿತ್ ಶರ್ಮಾ ಭಾರತ ತಂಡ ಸೇರಿಕೊಂಡಿದ್ದಾರೆ. ಆದರೆ, ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ.

news18-kannada
Updated:December 31, 2020, 8:44 AM IST
Rohit Sharma: ಟೀಂ ಇಂಡಿಯಾ ಸೇರಿಕೊಂಡ ರೋಹಿತ್ ಶರ್ಮಾ: ಆದ್ರೆ, ಮೂರನೇ ಟೆಸ್ಟ್​ಗೆ ಅನುಮಾನ!
Rohit sharma
  • Share this:
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಸದ್ಯ ಮೂರನೇ ಟೆಸ್ಟ್​ ಮೇಲೆ ಕಣ್ಣಿಟ್ಟಿದೆ. ಇದಕ್ಕೂ ಮೊದಲು ಭಾರತ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಎರಡು ವಾರಗಳ ಕಾಲ ಕ್ವಾರಂಟೈನ್​ನಲ್ಲಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. ಮೆಲ್ಬೋರ್ನ್​ನಲ್ಲಿ ರೋಹಿತ್ ಅವರು ಭಾರತೀಯ ಆಟಗಾರರಿರುವ ಹೋಟೆಲ್​ಗೆ ಆಗಮಿಸಿ, ಆಟಗಾರರನ್ನು ಭೇಟಿ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್​ ಮಾಡಿದೆ. "ಮೆಲ್ಬೋರ್ನ್​ನಲ್ಲಿ ಯಾರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ ನೋಡಿ, ರೋಹಿತ್ ಶರ್ಮಾ ಭಾರತ ತಂಡವನ್ನು ಸೇರಿಕೊಂಡಿದ್ದು, ಅವರಿಗೆ ಆತ್ಮೀಯ ಸ್ವಾಗತ." ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ನಗ್ನ ಫೋಟೋ ಮಾರಿ ಆದಾಯ ಗಳಿಸುತ್ತಿರುವ 19 ವರ್ಷದ ಟೆನ್ನಿಸ್ ಆಟಗಾರ್ತಿ!

13ನೇ ಆವೃತ್ತಿಯ ಐಪಿಎಲ್ ವೇಳೆ ರೋಹಿತ್ ಶರ್ಮಾ ಹ್ಯಾಮ್​ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಯಿಂದ ಹೊರಗುಳಿದಿದ್ದರು. ನಂತರ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್​ನೆಸ್​ ಪರೀಕ್ಷೆ ಎದುರಿಸಿ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದರು. ಆದರೆ ಕೋವಿಡ್ ಪ್ರೋಟೋಕಾಲ್​ಗಳ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದರಿಂದ ಅವರು ಮೊದಲೆರಡು ಟೆಸ್ಟ್​ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.ಸದ್ಯ ಹಿಟ್​ಮ್ಯಾನ್ ಭಾರತ ತಂಡ ಸೇರಿಕೊಂಡಿದ್ದಾರೆ. ಆದರೆ, ಮೂರನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ. ಹೌದು, "ಕಳೆದ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಹಿತ್‌ ಶರ್ಮಾಗೆ ಅಭ್ಯಾಸ ಮಾಡುವ ಅವಕಾಶ ಲಭ್ಯವಾಗಿಲ್ಲ. ದೈಹಿಕಕ್ಷಮತೆ ಯಾವ ಸ್ಥಿತಿಯಲ್ಲಿದೆ ಎನ್ನುವುದರ ಮೇಲೆ ಎಲ್ಲ ನಿರ್ಧಾರವಾಗುತ್ತದೆ. ಹೀಗಾಗಿ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಅವರನ್ನು ಆಡಿಸುವುದೇ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ತೀಮಾನ ಕೈಗೊಳ್ಳಲಾಗುವುದು" ಎಂದು ಕೋಚ್‌ ರವಿ ಶಾಸ್ತ್ರಿ ಹೇಳಿದ್ದರು.

ಟೀಂ ಇಂಡಿಯಾದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಕಾರು ಅಪಘಾತ!

ಇತ್ತ ತೊಡೆಸಂದು ನೋವಿನಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಇವರು ಸಿಡ್ನಿ ಟೆಸ್ಟ್​ನಲ್ಲಿ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಸೀಸ್‌ ನಾಯಕ ಟಿಮ್‌ ಪೇನ್‌, ಡೇವಿಡ್‌ ವಾರ್ನರ್‌ ಅಭ್ಯಾಸ ಆರಂಭಿಸಿದ್ದಾರೆ. ಅವರು ವಿಕೆಟ್‌ ನಡುವೆ ಓಡುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಉತ್ತಮವಾಗಿ ಕಾಣುತ್ತಿದೆ. ಅವರು ಮರಳಿದರೆ ತಂಡಕ್ಕೆ ಬಹಳ ಸಹಾಯವಾಗಲಿದೆ ಎಂದಿದ್ದಾರೆ.
Published by: Vinay Bhat
First published: December 31, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories