ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ನ ಪದಾರ್ಪಣೆ ಪಂದ್ಯದಲ್ಲೇ ಭಾರತ ತಂಡಕ್ಕೆ ಆಸರೆಯಾಗಿ ಮಾನ ಕಾಪಾಡಿದ ಆಟಗಾರ ವಾಷಿಂಗ್ಟನ್ ಸುಂದರ್. 186 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಶಾರ್ದೂಲ್ ಠಾಕೂರ್ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಹೀಗೆ ತನ್ನ ಚೊಚ್ಚಲ ಪಂದ್ಯದಲ್ಲೇ ವಿಶ್ವ ಶ್ರೇಷ್ಠ ಬೌಲರ್ಗಳ ದಾಳಿಯನ್ನು ಎದುರಿಸಿ ಆಕರ್ಷಕ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಆದರೆ, ಸುಂದರ್ರ ಈ ಅಮೋಘ ಆಟ ಅವರ ತಂದೆಗೆ ತೃಪ್ತಿ ತಂದಿಲ್ಲವಂತೆ. ಈ ಬಗ್ಗೆ ಅಸಾಮಾಧಾನ ವ್ಯಕ್ತ ಪಡಿಸಿದ್ದಾರೆ.
ಆಸ್ಟ್ರೇಲಿಯಾವನ್ನು 369 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 200 ರನ್ಗೂ ಮೊದಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ 123 ರನ್ಗಳ ಜೊತೆಯಾಟ ಆಡಿದರು. ಸುಂದರ್ 144 ಎಸೆತಗಳನ್ನು ಎದುರಿಸಿ 62 ರನ್ ಬಾರಿಸಿದರು.
India vs Australia: ವಾಷಿಂಗ್ಟನ್ ಸುಂದರ ಆಟಕ್ಕೆ 110 ವರ್ಷಗಳ ಹಿಂದಿನ ದಾಖಲೆ ಧೂಳೀಪಟ..!
ಸದ್ಯ ತನ್ನ ಮಗನ ಪ್ರದರ್ಶನದ ಬಗ್ಗೆ ಮಾತನಾಡಿರುವ ವಾಷಿಂಗ್ಟನ್ ಸುಂದರ್ ತಂದೆ, ವಾಷಿಂಗ್ಟನ್ 100 ರನ್ ಗಳಿಸದೆ ಔಟ್ ಆಗಿದ್ದು ನನಗೆ ಬೇಸರ ಮೂಡಿತು ಎಂದಿದ್ದಾರೆ. "ಮೊಹಮ್ಮದ್ ಸಿರಾಜ್ ಕ್ರೀಸ್ಗೆ ಬಂದಾಗ ಸುಂದರ್ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದರು. ಅವನಿಗೆ ಆ ಸಾಮರ್ಥ್ಯ ಇದೆ. ದೊಡ್ಡ ಹೊಡೆತಗಳನ್ನು ಹೊಡೆಯುವ ಶಕ್ತಿ ಅವನಲ್ಲಿದೆ. ಆಸ್ಟ್ರೇಲಿಯಾ ಸಾಧಿಸಿದ ಮೊತ್ತದತ್ತ ನಮ್ಮ ತಂಡವನ್ನು ಕೊಂಡೊಯ್ಯಬೇಕು ಎಂಬುದು ಅವನ ಗುರಿಯಾಗಿತ್ತು" ಎಂದು ಸುಂದರ್ ತಂದೆ ಎಂ. ಸುಂದರ್ ಹೇಳಿದ್ದಾರೆ.
"ವಾಷಿಂಗ್ಟನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ನಂತರ ಅವನ ಬಳಿ ನಾನು ಪ್ರತಿದಿನ ಮಾತನಾಡುತ್ತಿದ್ದೇನೆ. ಅವನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಅವಕಾಶ ಸಿಕ್ಕ ದಿನ ಕೂಡ ಫೋನ್ ಮಾಡಿ ಉತ್ತಮ ರನ್ ಕಲೆಹಾಕು ಎಂದು ಹೇಳಿದ್ದೆ. ಅವನು ಕೂಡ ಖಂಡಿತ ಎಂದಿದ್ದ. ವಾಷಿಂಗ್ಟನ್ ಒಬ್ಬ ಆರಂಭಿಕ ಬ್ಯಾಟ್ಸ್ಮನ್. ಅವನು 14 ವರ್ಷ ಇರುವಾಗಲೇ ಸೆಂಚುರಿ ಬಾರಿಸಿ ಪರಾಕ್ರಮ ಮೆರೆದಿದ್ದ" ಎಂದು ಹೇಳಿದರು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸುಂದರ್ ಆಡಿದ್ದು ಕೇವಲ 12 ಪಂದ್ಯಗಳನ್ನಷ್ಟೆ. ಆದರೆ, ಇವರು ಕಣಕ್ಕಿಳಿದ ಎಲ್ಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 2016-17ರ ರಣಜಿ ಟ್ರೋಫಿ ಸೀಸನ್ನಲ್ಲಿ ತಮಿಳುನಾಡು ಪರ ಸುಂದರ್ ಮಿಂಚಿನ ಆಟವಾಡಿದ್ದರು. ಆರಂಭಿಕ ಬ್ಯಾಟ್ಸ್ಮನ್ ಆಗಿ ಒಂದು ಇನ್ನಿಂಗ್ಸ್ನಲ್ಲಿ 156 ರನ್ ಬಾರಿಸಿದ್ದರು. ಆದರೆ, ನಂತರದಲ್ಲಿ ಅವರಿಗೆ ಅವಕಾಶವೇ ನೀಡಲಿಲ್ಲ ಎಂಬುದು ಬೇಸರದ ಸಂಗತಿ.
Video: ವಿಶ್ವ ದಾಖಲೆ ನಿರ್ಮಿಸಿದರೂ ಸಂಭ್ರಮಿಸಲಿಲ್ಲ: ಆಟಗಾರ್ತಿಯ ಕಾಳಜಿಗೆ ನೆಟ್ಟಿಗರು ಫಿದಾ..!
ಅಂತಿಮ ನಾಲ್ಕನೇ ಟೆಸ್ಟ್ನಲ್ಲಿ ವಾಷಿಂಗ್ಟನ್ ಸುಂದರ್ (62) ಮತ್ತು ಶಾರ್ದೂಲ್ ಠಾಕೂರ್ (67) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 336 ರನ್ ಗಳಿಸಿತು. ಆಸ್ಟ್ರೇಲಿಯಾದ 369 ರನ್ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ 33 ರನ್ಗಳ ಹಿನ್ನಡೆ ಅನುಭವಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ