Virat Kohli: 350+ ಟಾರ್ಗೆಟ್ ಇದ್ದರೆ ಕೊಹ್ಲಿಯಿಂದ ಗೆಲ್ಲಲು ಸಾಧ್ಯವೇ ಇಲ್ಲ ಎಂದವರಿಗೆ ಹರ್ಭಜನ್ ಹೇಳಿದ್ದೇನು ನೋಡಿ

ಆಸ್ಟ್ರೇಲಿಯಾ ವಿರುದ್ಧ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ಸೋಲುಂಡಿದೆ. ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಚೇಸಿಂಗ್ ಮಾಡುವಲ್ಲಿ ಎಡವಿತು.

Virat Kohli

Virat Kohli

 • Share this:
  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಸೋತ ಪರಿಣಾಮ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. 350+ ಟಾರ್ಗೆಟ್ ಇದ್ದರೆ ಕೊಹ್ಲಿ ಟೀಂಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಕಮೆಂಟ್ ಬೀಳುತ್ತಿದೆ. ಆಸೀಸ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ಒಂದುಕಡೆ ಬೌಲರ್​ಗಳು ವಿಫಲವಾದರೆ, ಚೇಸಿಂಗ್ ಮಾಡುವಲ್ಲಿ ಭಾರತೀಯ ಬ್ಯಾಟ್ಸ್​ಮನ್ಸ್ ಯಶಸ್ವಿಯಾಗಲಿಲ್ಲ. ಪರಿಣಾಮ ಆಸ್ಟ್ರೇಲಿಯಾ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

  ಇದೇ ಕಾರಣಕ್ಕೆ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದಿದೆ. ಸದ್ಯ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕೊಹ್ಲಿ ಪರ ಬ್ಯಾಟ್ ಬೀಸಿದ್ದು ಒಬ್ಬ ಆಟಗಾರನಿಂದ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  IND vs AUS: ಗುರಿ ಮುಟ್ಟಲು ಮತ್ತೆ ವಿಫಲವಾದ ಭಾರತ: ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?

  ಕೊಹ್ಲಿ ನಾಯಕತ್ವದಿಂದ ಸುಸ್ತಾಗಿದ್ದಾರೆಂದು ನನಗೆ ಅನಿಸುತ್ತಿಲ್ಲ. ಅದು ಅವರಿಗೆ ಹೊರೆಯೇನಲ್ಲ. ಕೊಹ್ಲಿ ಎಲ್ಲವನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಅವರೊಬ್ಬ ಲೀಡರ್. ಪಂದ್ಯ ಸೋತ ಮಾತ್ರಕ್ಕೆ ಅದು ನಾಯಕನ ವೈಫಲ್ಯ ಎಂದು ಒಬ್ಬ ಆಟಗಾರನನ್ನು ದೂರುವುದು ಸರಿಯಲ್ಲ ಎಂದು ಹರ್ಭಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇನ್ನೂ ಕೆ. ಎಲ್ ರಾಹುಲ್ ಬಗ್ಗೆ ಮಾತನಾಡಿರುವ ಹರ್ಭಜನ್, ರಾಹುಲ್ ಉತ್ತಮ ಲಯದಲ್ಲಿ ಬ್ಯಾಟ್ ಬೀಸುವುದನ್ನು ನೋಡಲು ಖುಷಿಯಾಗುತ್ತಿದೆ. ಇದರಿಂದ ಕೊಹ್ಲಿಯೂ ಸ್ವಲ್ಪ ನೆಮ್ಮದಿಯಲ್ಲಿದ್ದಾರೆ. ತಂಡಕ್ಕೆ ಏನು ಬೇಕೋ ಆ ಕೊಡುಗೆ ನೀಡಲು ರಾಹುಲ್ ಸಿದ್ಧವಿರುತ್ತಾರೆ ಎಂದಿದ್ದಾರೆ.

  ಸದ್ಯ ಆಸ್ಟ್ರೇಲಿಯಾ ವಿರುದ್ಧ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ಸೋಲುಂಡಿದೆ. ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಚೇಸಿಂಗ್ ಮಾಡುವಲ್ಲಿ ಎಡವಿತು.

  ಆಸ್ಟ್ರೇಲಿಯಾ ನೀಡಿದ್ದ 390 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಧವನ್ 30 ರನ್ ಗಳಿಸಿದ್ದಾಗ ಔಟ್ ಆದರೆ, ಇದರ ಬೆನ್ನಲ್ಲೆ 28 ರನ್ ಗಳಿಸಿದ್ದ ಮಯಾಂಕ್ ಕೂಡ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

  India vs Australia: ಭಾರತ - ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದ ಕೆಲವು ರೋಚಕ ಕ್ಷಣಗಳು

  ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಆದರೆ, ಈ ಜೋಡಿ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಯ್ಯರ್(36 ಎಸೆತ, 38 ರನ್) ಅನಗತ್ಯ ಹೊಡೆತಕ್ಕೆ ಮಾರುಹೋದರು. ಕೊಹ್ಲಿ 87 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ 89 ರನ್​ಗೆ ಬ್ಯಾಟ್ ಕೆಳಗಿಟ್ಟರು.

  ಕೆ. ಎಲ್ ರಾಹುಲ್ ಗೆಲುವಿಗೆ ಹೋರಾಟ ನಡೆಸಿದರಾದರೂ ಫಲಿಸಲಿಲ್ಲ. 66 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ನೊಂದಿಗೆ 76 ರನ್​ಗೆ ಸುಸ್ತಾದರು. ಹಾರ್ದಿಕ್ ಪಾಂಡ್ಯ ಆಟ 28 ರನ್​ಗೆ ಅಂತ್ಯವಾಯಿತು. ಅಂತಿಮವಾಗಿ ಭಾರತ 50 ಓವರ್​ಗೆ 338 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು.
  Published by:Vinay Bhat
  First published: