ಅಡಿಲೇಡ್ (ಡಿ. 17): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಡೇ-ನೈಟ್ ಟೆಸ್ಟ್ನೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೆ ಚಾಲನೆ ಸಿಕ್ಕಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
ಭಾರತ ಇನ್ನಿಂಗ್ಸ್ ಆರಂಭಿಸಿದ ಮೊದಲ ಓವರ್ನಲ್ಲೇ ವಿಕೆಟ್ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಪೃಥ್ವಿ ಶಾ(0) ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಬಳಿಕ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಇನ್ನಿಂಗ್ಸ್ ಕಟ್ಟಲು ಹೊರಟರೂ ಸಾಧ್ಯವಾಗಲಿಲ್ಲ.
ಮಯಾಂಕ್ 40 ಎಸೆತಗಳಲ್ಲಿ 17 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಈ ಸಂದರ್ಭ ಪೂಜಾರ ಜೊತೆಯಾಟ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡದರು. ಆದರೆ, ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತಷ್ಟೆ. 160 ಎಸೆತಗಳಲ್ಲಿ 43 ರನ್ ಗಳಿಸಿ ಪೂಜಾರ ಬ್ಯಾಟ್ ಕೆಳಗಿಟ್ಟರು.
ಸದ್ಯ ಕೊಹ್ಲಿ ಜೊತೆಯಾಗಿರುವ ಉಪ ನಾಯಕ ಅಜಿಂಕ್ಯಾ ರಹಾನೆ ಕ್ರೀಸ್ನಲ್ಲಿದ್ದಾರೆ. ನಾಯಕ ಕೊಹ್ಲಿ 123 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಅರ್ಧಶತಕ ಬಾರಿಸಿದ್ದಾರೆ.
ಹೈವೋಲ್ಟೇಜ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಬಲಿಷ್ಠ 11ರ ಬಳಗವನ್ನೇ ಕಣಕ್ಕಿಳಸಿದೆ. ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಿದರೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನ ಹಾಗೂ ನಂತರದಲ್ಲಿ ಉಪ ನಾಐಕ ಅಜಿಂಕ್ಯಾ ರಹಾನೆ ಬ್ಯಾಟ್ ಬೀಸಲಿದ್ದಾರೆ.
AUS vs IND: ಭಾರತ-ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಆಟಗಾರರ ಮುಂದಿದೆ 5 ದಾಖಲೆಗಳು
ಬಳಿಕ ಹನುಮಾ ವಿಹಾರಿ, ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಸ್ಥಾನ ಪಡೆದುಕೊಂಡಿದ್ದಾರೆ. ಏಕೈಕ ಸ್ಪಿನ್ ಬೌಲರ್ ಇದ್ದು ರವಿಚಂದ್ರ ಅಶ್ವನ್ ಮೋಡಿ ಮಾಡಬೇಕಿದೆ. ವೇಗಿಗಳ ಪೈಕಿ ಉಮೇಶ್ ಯಾದವ್, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನೂ ಕರ್ನಾಟಕದ ಅನುಭವಿ ಬ್ಯಾಟ್ಸ್ಮನ್ ಕೆ. ಎಲ್ ರಾಹುಲ್ ಸೇರಿದಂತೆ ರಿಷಭ್ ಪಂತ್, ಶುಭ್ಮನ್ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯಾ ತಂಡ: ಆಸ್ಟ್ರೇಲಿಯಾ ತಂಡದ ಪರ ಕ್ಯಾಮರಾನ್ ಗ್ರೀನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ಟಿಮ್ ಪೈನ್ (ನಾಯಕ, ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಷೆಲ್ ಸ್ಟಾರ್ಕ್, ನಥನ್ ಲ್ಯಾನ್, ಜೋಷ್ ಹ್ಯಾಜ್ಲೆವುಡ್.
ಈ ಸರಣಿಯಲ್ಲಿ ಕೇವಲ ಒಂದೇ ಟೆಸ್ಟ್ ಆಡಲಿರುವ ವಿರಾಟ್ ಕೊಹ್ಲಿಗೆ ಇಲ್ಲಿ ಗೆಲುವು ಒಲಿದರೆ ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ. ಆಗ ಅವರು ಆಸ್ಟ್ರೇಲಿಯದಲ್ಲಿ ಅತ್ಯಧಿಕ 3 ಟೆಸ್ಟ್ ಪಂದ್ಯಗಳನ್ನು ಗೆದ್ದ ಏಶ್ಯದ ನಾಯಕನಾಗಿ ಮೂಡಿಬರಲಿದ್ದಾರೆ.
ಈ ವರೆಗೆ ಭಾರತದ ಬಿಷನ್ ಸಿಂಗ್ ಬೇಡಿ, ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ ಅವರೊಂದಿಗೆ ಕೊಹ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಮೂವರೂ ಆಸ್ಟ್ರೇಲಿಯದಲ್ಲಿ ತಲಾ 2 ಟೆಸ್ಟ್ ಗೆದ್ದಿದ್ದಾರೆ.
ವಿಶ್ವ ದಾಖಲೆಯತ್ತ ಕಿಂಗ್ ಕೊಹ್ಲಿ:
ಹೌದು, ನಾಯಕ ವಿರಾಟ್ ಕೊಹ್ಲಿ ನೂತನ ವಿಶ್ವ ದಾಖಲೆಯ ಸನಿಹದಲ್ಲಿದ್ದಾರೆ. ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಮೂಡಿಬಂದರೆ ನಾಯಕನಾಗಿ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಪಂಟರ್ ಪಾಂಟಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಯಕನಾಗಿ 41 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ ಸಹ 41 ಶತಕಗಳನ್ನು ಸಿಡಿಸಿದ್ದಾರೆ.