IND vs AUS Live Score, 1st Test: 9 ವಿಕೆಟ್ ಕಳೆದುಕೊಂಡ ಭಾರತ

India vs Australia Live Score, First Test, Day 3: ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಪೃಥ್ವಿ ಶಾ ಕೇವಲ 4 ರನ್​ಗೆ ಕ್ಲೀನ್ ಬೌಲ್ಡ್​ ಆದರು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 9 ರನ್​ಗೆ 1 ವಿಕೆಟ್ ಕಳೆದುಕೊಂಡಿತ್ತು.

IND vs AUS 1st Test Live Score Updates:

IND vs AUS 1st Test Live Score Updates:

 • Share this:
  ಅಡಿಲೇಡ್ (ಡಿ. 19): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವನ ಮೊದಲ ಡೇ ನೈಟ್ ಟೆಸ್ಟ್​ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 191 ರನ್​ಗೆ ಆಲೌಟ್ ಮಾಡಿರುವ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 9 ರನ್ ಗಳಿಸಿತ್ತು. ಸದ್ಯ ಇಂದು ಮೂರನೇ ದಿನದಾಟ ಆರಂಭಿಸಿದ್ದು ತರಗೆಲೆಯಂತೆ ವಿಕೆಟ್ ಉರುಳುತ್ತಿದೆ.

  ಜಸ್​ಪ್ರೀತ್ ಬುಮ್ರಾ ಕೇವಲ 2 ರನ್​ಗಳಿಸಿ ಪೆವಿಲಿಯನ್ ಹಾದಿ ಹಿಡಿದರೆ, ಬಂದ ಬೆನ್ನಲ್ಲೇ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಸೊನ್ನೆ ಸುತ್ತಿದರು. ಮಯಾಂಕ್ ಅಗರ್ವಾಲ್ 9 ರನ್​ಗೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ ಆಟ ಕೇವಲ 4 ರನ್​ಗೆ ಅಂತ್ಯವಾಯಿತು.

  ಸದ್ಯ ಕ್ರೀಸ್​ನಲ್ಲಿ ಹನುಮಾ ವಿ ಹಾರಿ ಹಾಗೂ ವೃದ್ದಿಮಾನ್ ಸಾಹ ಇದ್ದಾರೆ. 20 ರನ್​ಗೂ ಮೊದಲೇ 6 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿದೆ. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್​ 4 ಹಾಗೂ ಜೋಚ್ ಹ್ಯಾಜ್ಲೆವುಡ್ 2 ವಿಕೆಟ್ ಪಡೆದಿದ್ದಾರೆ.

  ಮೊದಲ ದಿನದಾಟದ ಅಂತ್ಯಕ್ಕೆ6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದ ಕೊಹ್ಲಿ ಪಡೆ ನಿನ್ನೆ 11 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ 244 ರನ್​ಗೆ ಸರ್ವಪತನ ಕಂಡಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು.

  India vs Australia: ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್​ನ ಎರಡನೇ ದಿನದಾಟದ ಕೆಲ ರೋಚಕ ಕ್ಷಣಗಳು

  ಟಿಮ್ ಪೈನ್ 99 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಆಸ್ಟ್ರೇಲಿಯಾ 72.1 ಓವರ್​ಗಳಲ್ಲಿ 191 ರನ್​ಗೆ ಆಲೌಟ್ ಆಯಿತು. ಭಾರತ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ 3 ಹಾಗೂ ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

  ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಪೃಥ್ವಿ ಶಾ ಕೇವಲ 4 ರನ್​ಗೆ ಕ್ಲೀನ್ ಬೌಲ್ಡ್​ ಆದರು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 9 ರನ್​ಗೆ 1 ವಿಕೆಟ್ ಕಳೆದುಕೊಂಡಿತ್ತು. ಮಯಾಂಕ್ ಅಗರ್ವಾಲ್ 5 ಹಾಗೂ ಜಸ್​ಪ್ರೀತ್ ಬುಮ್ರಾ ಖಾತೆ ತೆರೆಯದೆ ಇಂದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
  Published by:Vinay Bhat
  First published: