HOME » NEWS » Sports » CRICKET INDIA VS AUSTRALIA FIRST TEST LIVE SCORE UPDATES DAY 2 ONLINE LIVE STREAMING AUSTRALIA ALL OUT FOR 191 VB

IND vs AUS Live Score, 1st Test: ಭಾರತೀಯ ಬೌಲರ್​ಗಳ ಬೆಂಕಿ-ಬಿರುಗಾಳಿ: ಆಸ್ಟ್ರೇಲಿಯಾ 191 ರನ್​ಗೆ ಆಲೌಟ್

India vs Australia Live Score, First Test, Day 2: ಮಾರ್ನಸ್ ಲ್ಯಾಬುಶೇನ್ ಜೊತೆ ಇನ್ನಿಂಗ್ಸ್​ ಕಟ್ಟಲು ಹೊರಟ ಅಪಾಯಕಾರಿ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು. ಟ್ರಾವಿಸ್ ಹೆಡ್ 7 ಹಾಗೂ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕಾಮರೆನ್ ಗ್ರೀನ್ 11 ರನ್​ಗೆ ಸುಸ್ತಾದರು.

news18-kannada
Updated:December 18, 2020, 4:36 PM IST
IND vs AUS Live Score, 1st Test: ಭಾರತೀಯ ಬೌಲರ್​ಗಳ ಬೆಂಕಿ-ಬಿರುಗಾಳಿ: ಆಸ್ಟ್ರೇಲಿಯಾ 191 ರನ್​ಗೆ ಆಲೌಟ್
India vs Australia
  • Share this:
ಅಡಿಲೇಡ್ (ಡಿ. 18): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಡೇ- ನೈಟ್ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತವನ್ನು 244 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ 191 ರನ್​ಗೆ ಸರ್ವಪತನ ಕಂಡಿದೆ. ಭಾರತೀಯ ಬೌಲರ್​ಗಳ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಆಸೀಸ್ ಬ್ಯಾಟ್ಸ್​ಮನ್​ಗಳು 53 ರನ್​ಗಳ ಹಿನ್ನಡೆ ಅನುಭವಿಸಿದೆ. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದ ಕೊಹ್ಲಿ ಪಡೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ 244 ರನ್​ಗೆ ಸರ್ವಪತನ ಕಂಡಿತು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ಓಪನರ್​​ಗಳಾದ ಮ್ಯಾಥ್ಯೂ ವೇಡ್(8) ಹಾಗೂ ಜೋ ಬರ್ಸ್​​(8) ಬುಮ್ರಾ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.

India vs Australia: 16 ರನ್ ಗಳಿಸಿದ್ದಾಗಲೇ ಔಟ್ ಆಗಿದ್ದ ವಿರಾಟ್ ಕೊಹ್ಲಿ: ಇಲ್ಲಿದೆ ನೀವು ಗಮನಿಸದ ವಿಡಿಯೋ

ಮಾರ್ನಸ್ ಲ್ಯಾಬುಶೇನ್ ಜೊತೆ ಇನ್ನಿಂಗ್ಸ್​ ಕಟ್ಟಲು ಹೊರಟ ಅಪಾಯಕಾರಿ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು. ಟ್ರಾವಿಸ್ ಹೆಡ್ 7 ಹಾಗೂ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕಾಮರೆನ್ ಗ್ರೀನ್ 11 ರನ್​ಗೆ ಸುಸ್ತಾದರು. ಇತ್ತ ಕ್ರೀಸ್ ಕಚ್ಚಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶೇನ್ ಕೂಡ 119 ಎಸೆತಗಳಲ್ಲಿ 47 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಔಟ್ ಆದರು.

ಪ್ಯಾಟ್ ಕಮಿನ್ಸ್​ ಶೂನ್ಯಕ್ಕೆ ಬ್ಯಾಟ್ ಕೆಳಗಿಟ್ಟರೆ, ಮಿಚೆಲ್ ಸ್ಟಾರ್ಕ್​ 15 ರನ್ ಗಳಿಸಿ ರನೌಟ್​ಗೆ ಬಲಿಯಾದರು. ನೇಥನ್ ಲ್ಯಾನ್(10) ಹಾಗೂ ಜೋಷ್ ಹ್ಯಾಜ್ಲೆವುಡ್(8) ಕೂಡ ನಾಯಕ ಪೈನ್​ಗೆ ಸಾತ್ ನೀಡಲಿಲ್ಲ.

ಅಂತಿಮವಾಗಿ ಆಸ್ಟ್ರೇಲಿಯಾ 72.1 ಓವರ್​ಗಳಲ್ಲಿ 191 ರನ್​ಗೆ ಆಲೌಟ್ ಆಯಿತು. ಟಿಮ್ ಪೈನ್ 99 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಭಾರತ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ 3 ಹಾಗೂ ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

Russia: ಮುಂದಿನ ಒಲಿಂಪಿಕ್ಸ್​ನಲ್ಲಿ ರಷ್ಯಾ ನಿಷೇಧ..!

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ ಅವರ 74 ರನ್, ಚೇತೇಶ್ವರ್ ಪೂಜಾರ 43 ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆaವರ 42 ರನ್​ಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು.

300 ರನ್​ಗಳ ಗುರಿ ಇಟ್ಟು ಎರಡನೇ ದಿನದಾಟ ಆರಂಭಿಸಿದ ಭಾರತ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. 2ನೇ ದಿನದಾಟದ ಮೊದಲ ಓವರ್​ನಲ್ಲೇ ಭಾರತ ಆಘಾತ ಅನುಭವಿಸಿತು. 15 ರನ್ ಗಳಿಸಿದ್ದ ಆರ್. ಅಶ್ವಿನ್ ಆರಂಭದಲ್ಲೇ ಔಟ್ ಆದರೆ, ವೃದ್ದಿಮಾನ್ ಸಾಹ ಕೂಡ 9 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಉಮೇಶ್ ಯಾದವ್ 6 ಹಾಗೂ ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ 244 ರನ್​ಗೆ ಸರ್ವಪತನ ಕಂಡಿತು.
Published by: Vinay Bhat
First published: December 18, 2020, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories