HOME » NEWS » Sports » CRICKET INDIA VS AUSTRALIA FIRST TEST LIVE SCORE UPDATES DAY 2 ONLINE LIVE STREAMING AUS LOST 8 WICKETS VB

IND vs AUS Live Score, 1st Test: ಆಸೀಸ್ 8 ವಿಕೆಟ್ ಪತನ: ಆಲೌಟ್ ಭೀತಿಯಲ್ಲಿ ಕಾಂಗರೂ ಪಡೆ

India vs Australia Live Score, First Test, Day 2: ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ದಿನದ ಆಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು.

news18-kannada
Updated:December 18, 2020, 3:39 PM IST
IND vs AUS Live Score, 1st Test: ಆಸೀಸ್ 8 ವಿಕೆಟ್ ಪತನ: ಆಲೌಟ್ ಭೀತಿಯಲ್ಲಿ ಕಾಂಗರೂ ಪಡೆ
Border-GavaskarTrophy
  • Share this:
ಅಡಿಲೇಡ್ (ಡಿ. 18): ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ 244 ರನ್​ಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿದೆ. 150 ರನ್ ಆಗುವ ಹೊತ್ತಗೆನೆ 8 ವಿಕೆಟ್ ಕಳೆದುಕೊಂಡು ಆಲೌಟ್ ಆಭೀತಿಯಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದ ಕೊಹ್ಲಿ ಪಡೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ 244 ರನ್​ಗೆ ಸರ್ವಪತನ ಕಂಡಿತು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ಓಪನರ್​​ಗಳಾದ ಮ್ಯಾಥ್ಯೂ ವೇಡ್(8) ಹಾಗೂ ಜೋ ಬರ್ಸ್​​(8) ಬುಮ್ರಾ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.

ಮಾರ್ನಸ್ ಲ್ಯಾಬುಶೇನ್ ಜೊತೆ ಇನ್ನಿಂಗ್ಸ್​ ಕಟ್ಟಲು ಹೊರಡ ಅಪಾಯಕಾರಿ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು. ಟ್ರಾವಿಸ್ ಹೆಡ್ 7 ಹಾಗೂ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಕಾಮರೆನ್ ಗ್ರೀನ್ 11 ರನ್​ಗೆ ಸುಸ್ತಾದರು. ಇತ್ತ ಕ್ರೀಸ್ ಕಚ್ಚಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶೇನ್ ಕೂಡ 119 ಎಸೆತಗಳಲ್ಲಿ 47 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಔಟ್ ಆದರು.

ಪ್ಯಾಟ್ ಕಮಿನ್ಸ್​ ಶೂನ್ಯಕ್ಕೆ ಬ್ಯಾಟ್ ಕೆಳಗಿಟ್ಟರೆ, ಮಿಚೆಲ್ ಸ್ಟಾರ್ಕ್​ 15 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಸದ್ಯ ಕ್ರೀಸ್​ನಲ್ಲಿ ನಾಯಕ ಪೈನ್ ಜೊತೆ ನೇಥನ್ ಲ್ಯಾನ್ ಇದ್ದಾರೆ.Team talk☑️
Fast bowlers group☑️
Let's do this. 💪 pic.twitter.com/FT45w8G1sf


ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಓವರ್​ನಲ್ಲೇ ಪೃಥ್ವಿ ಶಾ(0) ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ 17 ರನ್ ಗಳಿಸಿ ಔಟ್ ಆದರು. ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ 68 ರನ್​ಗಳ ಜೊತೆಯಾಟ ಆಡಿದರು.

India vs Australia: ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್​ನ ಮೊದಲ ದಿನದಾಟದ ರೋಚಕ ಕ್ಷಣಗಳು

ನಂತರ ಅಜಿಂಕ್ಯಾ ರಹಾನೆ ಜೊತೆಯಾದ ಕೊಹ್ಲಿ ಮತ್ತೊಂದು ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಈ ಜೋಡಿ 88 ರನ್​ಗಳ ಕಾಣಿಕೆ ನೀಡಿತು. ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 22ನೇ ಅರ್ಧಶತಕವನ್ನೂ ಪೂರೈಸಿದರು. ಆದರೆ, ಶತಕ ಗಳಿಸುವ ಅಂದಾಜಿನಲ್ಲಿದ್ದ ಕೊಹ್ಲಿ ಅನಿರೀಕ್ಷಿತ ರನೌಟ್​ಗೆ ಬಲಿಯಾಗಬೇಕಾಯಿತು. 180 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 74 ರನ್ ಗಳಿಸಿ ಕೊಹ್ಲಿ ಔಟ್ ಆದರು. ಇದರ ಬೆನ್ನಲ್ಲೇ ರಹಾನೆ ಕೂಡ 92 ಎಸೆತಗಳಲ್ಲಿ 42 ರನ್ ಬಾರಿಸಿ ನಿರ್ಗಮಿಸಿದರು.

ಹನುಮಾ ವಿಹಾರಿ ಆಟ 16 ರನ್​ಗೆ ಅಂತ್ಯವಾಯಿತು. ವೃದ್ದಿಮಾನ್ ಸಾಹ(9) ಹಾಗೂ ರವಿಚ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 22ನೇ ಅರ್ಧಶತಕವನ್ನೂ ಪೂರೈಸಿದರು. ಆದರೆ, ಶತಕ ಗಳಿಸುವ ಅಂದಾಜಿನಲ್ಲಿದ್ದ ಕೊಹ್ಲಿ ಅನಿರೀಕ್ಷಿತ ರನೌಟ್​ಗೆ ಬಲಿಯಾಗಬೇಕಾಯಿತು. 180 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 74 ರನ್ ಗಳಿಸಿ ಕೊಹ್ಲಿ ಔಟ್ ಆದರು. ಇದರ ಬೆನ್ನಲ್ಲೇ ರಹಾನೆ ಕೂಡ 92 ಎಸೆತಗಳಲ್ಲಿ 42 ರನ್ ಬಾರಿಸಿ ಔಟ್ ಆದರು.

ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವೃದ್ದಿಮಾನ್ ಸಾಹ(9) ಹಾಗೂ ರವಿಚಂದ್ರನ್ ಅಶ್ವಿನ್(15) ಇಂದು ಒಂದೇ ಒಂದು ರನ್ ಗಳಿಸಲಿಲ್ಲ. ಉಮೇಶ್ ಯಾದವ್ 6 ಹಾಗೂ ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ 244 ರನ್​ಗೆ ಸರ್ವಪತನ ಕಂಡಿತು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ಕಿತ್ತರೆ, ಪ್ಯಾಟ್ ಕಮಿನ್ಸ್ 3 ನಥನ್ ಲ್ಯಾನ್ ಹಾಗೂ ಜೋಷ್ ಹ್ಯಾಜ್ಲೆವುಡ್ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: December 18, 2020, 9:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories