'ನಾನು ಉತ್ತಮ ಪ್ರದರ್ಶನ ನೀಡಲು ಧೋನಿ ಕಾರಣ'; ಕೇದರ್ ಜಾಧವ್

ಕೇದರ್ ಜಾಧವ್ ಹಾಗೂ ಎಂ ಎಸ್ ಧೋನಿ

ಕೇದರ್ ಜಾಧವ್ ಹಾಗೂ ಎಂ ಎಸ್ ಧೋನಿ

ಕೇದರ್ ಜಾಧವ್ ಹಾಗೂ ಎಂಎಸ್ ಧೋನಿ ಅವರ ಸಮಯೋಚಿತ ಆಟದ ನೆರವಿನಿಂದ ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

  • News18
  • 2-MIN READ
  • Last Updated :
  • Share this:

ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಸಜ್ಜಾಗಿರುವ ಭಾರತ ಅಂದುಕೊಂಡಂತೆ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದೆ.

ಕೇದರ್ ಜಾಧವ್ ಹಾಗೂ ಎಂಎಸ್ ಧೋನಿ ಅವರ ಸಮಯೋಚಿತ ಆಟದ ನೆರವಿನಿಂದ ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜಾಧವ್ 87 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ ಅಜೇಯ 81 ರನ್ ಸಿಡಿಸಿದರೆ, ಧೋನಿ 72 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸ್​ ಜೊತೆ ಅಜೇಯ 59 ರನ್ ಗಳಿಸಿದರು.

ಸದ್ಯ ಈ ಬಗ್ಗೆ ಮಾತನಾಡಿರುವ ಜಾಧವ್, ನಾನು ಉತ್ತಮ ಪ್ರದರ್ಶನ ನೀಡಲು ಧೋನಿ ಕಾರಣ ಎಂದಿದ್ದಾರೆ. ಧೋನಿ ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ ನಾನು ತುಂಬಾ ವಿಚಾರಗಳನ್ನು ಕಲಿತಿರುವೆ. ಧೋನಿಯನ್ನು ನೋಡಿದಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಕಾರಣವಾಯಿತು ಎಂದಿದ್ದಾರೆ.

ಇದನ್ನೂ ಓದಿ: ಕೊಹ್ಲಿಗೆ ಆಘಾತ, ವಿಶ್ವಕಪ್​ನಲ್ಲಿ ಧೋನಿ ಕ್ಯಾಪ್ಟನ್ ಆಗಲಿ ಎಂದ ಮಾಜಿ ಸ್ಟಾರ್ ಕ್ರಿಕೆಟಿಗ

ಕಳೆದ ಕೆಲ ವರ್ಷಗಳಿಂದ ನಾನು 5 ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿಯುತ್ತಿದ್ದೇನೆ. ಮ್ಯಾನೇಜ್​ಮೆಂಟ್​ ನನ್ನನ್ನು ಒಬ್ಬ ಫಿನಿಶರ್ ಆಗಿ ನೋಡುತ್ತಿದ್ದು, ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಖಾಯಂ ಬೌಲರ್ ಅಲ್ಲ. ಆದರು ಬೌಲಿಂಗ್ ಮಾಡಲು ಕೊಟ್ಟಾಗ ಸಾಧ್ಯವದಷ್ಟು ಡಾಟ್ ಬಾಲ್ ಎಸೆಯುವುದು ನನ್ನ ಗುರಿ. ಒತ್ತಡವಿಲ್ಲದೆ ಬೌಲಿಂಗ್ ಮಾಡುತ್ತೇನೆ. ಈ ಸಂದರ್ಭ ವಿಕೆಟ್ ಸಿಕ್ಕರೆ ಉತ್ತಮ ಎಂದು ಜಾಧವ್ ಹೇಳಿದ್ದಾರೆ.

 First published: