India vs Australia: ಕಾಂಗರೂಗಳ ನಾಡಿನಲ್ಲಿ ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಇಲ್ಲಿದೆ ವಿಡಿಯೋ

ರವಿಚಂದ್ರನ್ ಅಶ್ವಿನ್, 'ಕಾಂಗರೂಗಳ ನಾಡಿನಲ್ಲಿ' ಎಂದು ಅಡಿಬರಹ ನೀಡಿ ಅಜಿಂಕ್ಯಾ ರಹಾನೆ ಜೊತೆ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

India vs Australia

India vs Australia

 • Share this:
  ಭಾರತ ಕ್ರಿಕೆಟ್ ತಂಡದ ಆಟಗಾರರು ಸುಮಾರು ಎಂಟು ತಿಂಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಸಜ್ಜಾಗಿದ್ದು ಈಗಾಗಲೇ ಕಾಂಗರೂಗಳ ನಾಡಿಗೆ ಪ್ರಯಾಣ ಬೆಳೆಸಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದೇ ನವೆಂಬರ್‌ 27 ರಿಂದ ಭಾರತದ ಆಸ್ಟ್ರೇಲಿಯಾ ಪೂರ್ಣ ಪ್ರವಾಸ ಆರಂಭವಾಗಲಿದೆ.

  ಉಭಯ ತಂಡಗಳೆರಡು ಅತ್ಯಂತ ಬಲಿಷ್ಠವಾಗಿರುವುದರಿಂದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಮೂರು ದಿನಗಳ ಹಿಂದಷ್ಟೇ ಸಿಡ್ನಿಗೆ ಬಂದಿಳಿದ ಭಾರತ ಕ್ರಿಕೆಟ್‌ ತಂಡದ ಸದಸ್ಯರು ಕ್ವಾರಂಟೈನ್‌ ಅವಧಿಯ ನಡುವೆಯೇ ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ಎಲ್ಲ ಆಟಗಾರರ ಕೋವಿಡ್‌-19 ಫ‌ಲಿತಾಂಶ ನೆಗೆಟಿವ್‌ ಬಂದಿದೆ.

  AUS vs IND: ODI, T-20 ಸರಣಿಗೆ ರೋಹಿತ್ ಜಾಗಕ್ಕೆ ಯಾವ ಆಟಗಾರ: ಮೂವರ ನಡುವೆ ಶುರುವಾಗಿದೆ ಪೈಪೋಟಿ

  ಸಿಡ್ನಿಯ ಒಲಂಪಿಕ್ ಪಾರ್ಕ್ ಹೊಟೇಲ್​ನಲ್ಲಿ ಟೀಂ ಇಂಡಿಯಾದ ಆಟಗಾರರು ಕ್ವಾರಂಟೀನ್​ನಲ್ಲಿದ್ದು, ದಿ ನ್ಯೂ ಸೌತ್ ವೆಲ್ಷ್ ಸರ್ಕಾರ ಕ್ವಾರಂಟಿನ್ ಅವಧಿಯಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ. ಕೆಲ ಆಟಗಾರರು ಜಿಮ್​ನಲ್ಲಿ ಬೆವರು ಹರಿಸಿದರೆ, ಇನ್ನೂ ಕೆಲವರು ಬ್ಲ್ಯಾಕ್‌ಟೌನ್‌ ಇಂಟರ್‌ನ್ಯಾಶನಲ್‌ ನ್ಪೋರ್ಟ್ಸ್ ಪಾರ್ಕ್​​ನಲ್ಲಿ ಅಭ್ಯಾಸ ನಡೆಸಿದರು.

  ರವಿಚಂದ್ರನ್ ಅಶ್ವಿನ್, 'ಕಾಂಗರೂಗಳ ನಾಡಿನಲ್ಲಿ' ಎಂದು ಅಡಿಬರಹ ನೀಡಿ ಅಜಿಂಕ್ಯಾ ರಹಾನೆ ಜೊತೆ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಹಾನೆಗೆ ಅಶ್ವಿನ್ ಜೊತೆ ಜಡೇಜಾ ಕೂಡ ಬೌಲಿಂಗ್ ಮಾಡುತ್ತಿದ್ದಾರೆ. ರಹಾನೆ ಹಾಗೂ ಅಶ್ವಿನ್ ಭಾರತ ಟೆಸ್ಟ್​ ತಂಡಕ್ಕೆ ಆಯ್ಕೆಯಾಗಿದ್ದರೆ, ಜಡೇಜಾ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  ಈ ತಂಡ ಇಟ್ಟುಕೊಂಡು ಆರ್​​ಸಿಬಿ ನಾಲ್ಕನೇ ಸ್ಥಾನಕ್ಕೇರಿದೆ ಎಂದರೆ ಅದು ವಿರಾಟ್​ ಕೊಹ್ಲಿ ಸಾಧನೆ!


  View this post on Instagram


  A post shared by Ashwin (@rashwin99)


  ಭಾರತ vs ಆಸ್ಟ್ರೇಲಿಯಾ ಪಂದ್ಯಗಳು ನವೆಂಬರ್ 27ರಿಂದ ಆರಂಭಗೊಳ್ಳಲಿದೆ. ಪ್ರವಾಸವು ಮೂರು ಏಕದಿನ ಪಂದ್ಯಗಳು, ಮೂರು ಟಿ-20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಇನ್ನೂ ಟೆಸ್ಟ್‌ ಸರಣಿಗೂ ಮುನ್ನ ಭಾರತ 2 ತ್ರಿದಿನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಎರಡೂ ಸಿಡ್ನಿಯಲ್ಲೇ ನಡೆಯಲಿವೆ.
  Published by:Vinay Bhat
  First published: