HOME » NEWS » Sports » CRICKET INDIA VS AUSTRALIA ADAM GILCHRIST APOLOGISES AFTER OFFERING CONDOLENCES TO NAVDEEP SAINI MOHAMMAD SIRAJ VB

India vs Australia: ಇಂಡೋ-ಆಸೀಸ್ ಪಂದ್ಯದ ನಡುವೆ ನವ್​ದೀಪ್ ಸೈನಿ ಬಳಿ ಕ್ಷಮೆ ಕೇಳಿದ ಗಿಲ್ ಕ್ರಿಸ್ಟ್​: ಯಾಕೆ ಗೊತ್ತಾ?

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೊತು. ಈ ಸಂದರ್ಭ ಕಾಮೆಂಟರಿ ಹೇಳುತ್ತಿದ್ದ ಗಿಲ್ ಕ್ರಿಸ್ಟ್​ ತಾವು ಮಾಡಿದ ಪ್ರಮಾದವೊಂದಕ್ಕೆ  ಕ್ಷಮೆ ಯಾಚಿಸಿದರು.

news18-kannada
Updated:November 27, 2020, 2:49 PM IST
India vs Australia: ಇಂಡೋ-ಆಸೀಸ್ ಪಂದ್ಯದ ನಡುವೆ ನವ್​ದೀಪ್ ಸೈನಿ ಬಳಿ ಕ್ಷಮೆ ಕೇಳಿದ ಗಿಲ್ ಕ್ರಿಸ್ಟ್​: ಯಾಕೆ ಗೊತ್ತಾ?
ನವ್​ದೀಪ್ ಸೈನಿ - ಆ್ಯಡಂ ಗಿಲ್​ಕ್ರಿಸ್ಟ್.
  • Share this:
ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈಗಾಗಲೇ ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಅವರ ಅಮೋಘ ಶತಕ, ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ 50 ಓವರ್​ಗಳಲ್ಲಿ ಬರೋಬ್ಬರಿ 374 ರನ್ ಚಚ್ಚಿದೆ.

ಈ ನಡುವೆ ಪಂದ್ಯ ನಡೆಯುತ್ತಿರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಕಾಮೆಂಟೇಟರ್ ಆ್ಯಡಂ ಗಿಲ್ ಕ್ರಿಸ್ಟ್ ಅವರು ಟೀಂ ಇಂಡಿಯಾ ಯುವ ವೇಗಿ ನವದೀಪ್ ಸೈನಿ ಬಳಿ ಕ್ಷಮೆ ಕೇಳಿದ್ದಾರೆ.

India vs Australia 1st ODI Live

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೊತು. ಈ ಸಂದರ್ಭ ಕಾಮೆಂಟರಿ ಹೇಳುತ್ತಿದ್ದ ಗಿಲ್ ಕ್ರಿಸ್ಟ್​ ತಾವು ಮಾಡಿದ ಪ್ರಮಾದವೊಂದಕ್ಕೆ  ಕ್ಷಮೆ ಯಾಚಿಸಿದರು. ಕಾಮೆಂಟರಿ ನಡುವೆ ಗಿಲ್ ಕ್ರಿಸ್ಟ್ ಅವರು ನವದೀಪ್ ಸೈನಿ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡರೂ ತಂಡಕ್ಕಾಗಿ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಿಬಿಟ್ಟರು.

ಆದರೆ, ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದು ನವ್​ದೀಪ್ ಸೈನಿ ಅಲ್ಲ, ಮೊಹಮ್ಮದ್ ಸಿರಾಜ್. ಸಿರಾಜ್ ಹೆಸರು ಹೇಳುವ ಬದಲು ತಪ್ಪಾಗಿ ನವದೀಪ್ ಸೈನಿ ಹೇಳಿದ್ದರು ಗಿಲ್​ ಕ್ರಿಸ್ಟ್. ಈ ವಿಚಾರ ಮನವರಿಕೆ ಆಗುತ್ತಿದ್ದಂತೆ ಗಿಲ್ ಕ್ರಿಸ್ಟ್ ಸೈನಿ ಬಳಿ ಕ್ಷಮೆ ಯಾಚಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿದೆ. ವಾರ್ನರ್ 76 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 69 ರನ್ ಗಳಿಸಿದರು. ಫಿಂಚ್ 124 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 114 ರನ್ ಬಾರಿಸಿದರು.

India vs Australia 1st ODI: ಫಿಂಚ್-ಸ್ಮಿತ್ ಆರ್ಭಟಕ್ಕೆ ಸುಸ್ತಾದ ಭಾರತ: ಕೊಹ್ಲಿ ಪಡೆಗೆ 375 ರನ್ಸ್ ಟಾರ್ಗೆಟ್ಅಂತಿಮ ಹಂತದಲ್ಲಿ ಸ್ಮಿತ್ ಜೊತೆಯಾದ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ 45 ರನ್ ಬಾರಿಸಿದರೆ, ಸ್ಮಿತ್ ಕೇವಲ 66 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಬಾರಿಸಿ 105 ರನ್ ಸಿಡಿಸಿದರು.

ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತು. ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: November 27, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories