IND vs AUS: ಟೀಂ ಇಂಡಿಯಾ ಮಿಂಚಿನ ಫೀಲ್ಡಿಂಗ್​ಗೆ ಫಿಂಚ್ ರನೌಟ್; ಇಲ್ಲಿದೆ ರೋಚಕ ವಿಡಿಯೋ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಾಂಗರೂ ಪಡೆ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಕೇನ್ ರಿಚರ್ಡಸನ್ ಬದಲು ಜೋಚ್ ಹ್ಯಾಜ್ಲೆವುಡ್ ಕಣಕ್ಕಿಳಿಯುತ್ತಿದ್ದಾರೆ.

Vinay Bhat | news18-kannada
Updated:January 19, 2020, 3:42 PM IST
IND vs AUS: ಟೀಂ ಇಂಡಿಯಾ ಮಿಂಚಿನ ಫೀಲ್ಡಿಂಗ್​ಗೆ ಫಿಂಚ್ ರನೌಟ್; ಇಲ್ಲಿದೆ ರೋಚಕ ವಿಡಿಯೋ
ಆ್ಯರೋನ್ ಫಿಂಚ್ ರನೌಟ್ ಆದ ಕ್ಷಣ
  • Share this:
ಬೆಂಗಳೂರು (ಜ. 19): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಒಂದುಕಡೆ ಟೀಂ ಇಂಡಿಯಾ ಚುರುಕಿನ ಫೀಲ್ಡಿಂಗ್ ನಿರ್ವಹಿಸುತ್ತಿದ್ದರೆ, ಬೌಲರ್​​ಗಳು ಕೂಡ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.

ಟೀಂ ಇಂಡಿಯಾ ಆಸ್ಟ್ರೇಲಿಯಾದ ಓಪನರ್​ಗಳಿಬ್ಬರನ್ನು ಆರಂಭದಲ್ಲೇ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ವಾರ್ನರ್(3) ಅವರು ಕೀಪರ್ ಕೆ ಎಲ್ ರಾಹುಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

India vs Australia: Aaron Finch departs after massive mix-up with Steve Smith during Bengaluru ODI versus India
ಆ್ಯರೋನ್ ಫಿಂಚ್ ರನೌಟ್ ಆದ ಕ್ಷಣ


India vs Australia Live: 2 ವಿಕೆಟ್ ಕಳೆದುಕೊಂಡ ಆಸೀಸ್​ಗೆ ಸ್ಮಿತ್-ಮಾರ್ನಸ್ ಆಸರೆ

ಬಳಿಕ ಸ್ಟೀವ್ ಸ್ಮಿತ್ ಜೊತೆಯಾದ ನಾಯಕ ಆ್ಯರೋನ್ ಫಿಂಚ್ ಇನ್ನಿಂಗ್ಸ್​ ಕಟ್ಟಲು ಹೊರಟರಾದರು, ಭಾರತೀಯರ ಮಿಂಚಿನ ಫೀಲ್ಡಿಂಗ್​ಗೆ ಬಲಿಯಾದರು. 9ನೇ ಓವರ್​ನ ಶಮಿ ಅವರ ಬೌಲಿಂಗ್​ನಲ್ಲಿ ಸ್ಮಿತ್ ಮಿಡ್ ಆಫ್​ ನತ್ತ ಚೆಂಡು ಅಟ್ಟಿದರು. ಆದರೆ, ಭಾರತೀಯ ಫೀಲ್ಡರ್​ಗಳು ಅಲ್ಲೆ ಇದ್ದ ಕಾರಣ ಸ್ಮಿತ್ ರನ್​ಗಾಗಿ ಸ್ವಲ್ಪ ಮುಂದೆ ಬಂದರಾದರು ಬಳಿಕ ನಾನ್ ಸ್ಟ್ರೈಕರ್​​ನಲ್ಲಿದ್ದ ಫಿಂಚ್​ಗೆ ನೋ ಎಂಬ ಕಾಲ್ ನೀಡಿದರು.

ಆದರೆ, ಅಷ್ಟೊತ್ತಿಗಾಗಲೇ ಫಿಂಚ್​ ಸಿಂಗಲ್​ ರನ್​ಗೆಂದು ಕ್ರೀಸ್ ಬಿಟ್ಟು ತೆರಳಿದ್ದರು. ಬಳಿಕ ರನೌಟ್​ನಿಂದ ತಪ್ಪಿಸಿಕೊಳ್ಳಲು ನಾನ್ ಸ್ಟ್ರೈಕರ್​ ಎಂಡ್​ ಕಡೆಗೆ ಓಡಲು ಆರಂಭಿಸುವ ಹೊತ್ತಿಗೆ ಶ್ರೇಯಸ್ ಐಯರ್ ಅವರು ಬೌಲರ್ ಶಮಿಗೆ ಬಾಲ್ ನೀಡಿ ರನೌಟ್​ ಮಾಡುವಲ್ಲಿ ಯಶಸ್ವಿಯಾಗಿದ್ದರು.

IND vs AUS: ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು ಗೊತ್ತಾ..?

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಾಂಗರೂ ಪಡೆ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಕೇನ್ ರಿಚರ್ಡಸನ್ ಬದಲು ಜೋಚ್ ಹ್ಯಾಜ್ಲೆವುಡ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಭಾರತ ತಂಡ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡದಲ್ಲಿದ್ದ ಆಟಗಾರರೇ ಇಂದು ಕೂಡ ಆಡುತ್ತಿದ್ದಾರೆ.

 





First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ