IND vs AUS A: ಡ್ರಾನಲ್ಲಿ ಅಂತ್ಯಕಂಡ ಭಾರತ – ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ: ಇಲ್ಲಿದೆ ಸ್ಕೋರ್ ವಿವರ

473 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಎ 25 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ವಿಕೆಟ್ ಕೈತಪ್ಪದಂತೆ ನೋಡಿಕೊಂಡಿತು.

ಭಾರತ ಸಂಭಾವ್ಯ XI: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ.

ಭಾರತ ಸಂಭಾವ್ಯ XI: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ.

 • Share this:
  ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಈ ಮೂಲಕ ಆಡಿದ ಎರಡೂ ಅಭ್ಯಾಸ ಪಂದ್ಯವು ಡ್ರಾ ಕಂಡಿದ್ದು, ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಮಂಕಾಗಿರುವುದು ಎದ್ದು ಕಾಣುತ್ತಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ 48.3 ಓವರ್​ನಲ್ಲಿ ಕೇವಲ 194 ರನ್​ಗೆ ಆಲೌಟ್ ಆಗಿತ್ತು. ಶುಭ್ಮನ್ ಗಿಲ್ 43 ಹಾಗೂ ಜಸ್​ಪ್ರೀತ್ ಬುಮ್ರಾ ಅಜೇಯ 55 ರನ್​ಗಳಿಸಿದ್ದರು. ಇತ್ತ ಆಸ್ಟ್ರೇಲಿಯಾ ಎ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 108 ರನ್​ಗೆ ಸರ್ವಪತನ ಕಂಡಿತು.

  ಹೀಗೆ 86 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭದಲ್ಲೇ ಪೃಥ್ವಿ ಶಾ(3) ವಿಕೆಟ್ ಕಳೆದುಕೊಂಡಿತಾದರೂ, ಎರಡನೇ ವಿಕೆಟ್​ಗೆ ಶುಭ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಈ ಜೋಡಿ ಶತಕದ(104) ಜೊತೆಯಾಟ ಆಡಿತು.

  ಭಾರತ -ಆಸ್ಟ್ರೇಲಿಯಾ ಅಭ್ಯಾಸ ಪಂದ್ಯದಲ್ಲಿ ಮೋಸದಾಟ?: ಗಿಲ್ ಔಟಾದ ವಿಡಿಯೋ ನೋಡಿ

  ಗಿಲ್ 78 ಎಸೆತಗಳಲ್ಲಿ 65 ರನ್ ಬಾರಿಸಿದರೆ, ಅಗರ್ವಾಲ್ 120 ಎಸೆತಗಳಲ್ಲಿ 61 ರನ್ ಸಿಡಿಸಿದರು. ಬಳಿಕ ಹನುಮ ವಿಹಾರಿ ಜೊತೆಗೂಡಿ ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸೀಸ್ ಬೌಲರ್​ಗಳ ಬೆವರಿಳಿಸಿದರು.  ಪಂತ್ ಕೇವಲ 73 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 103 ರನ್ ಚಚ್ಚಿದರೆ, ವಿಹಾರಿ 194 ಎಸೆತಗಳಲ್ಲಿ 104 ರನ್ ಗಳಿಸಿದರು. ಭಾರತ 90 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

  2020ಯಲ್ಲಿ ಟೀಮ್ ಇಂಡಿಯಾ ಪರ ವೈಯುಕ್ತಿಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ

  473 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಎ 25 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತಾದರೂ ಬಳಿಕ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ವಿಕೆಟ್ ಕೈತಪ್ಪದಂತೆ ನೋಡಿಕೊಂಡಿತು. ಮಾರ್ಕಸ್ ಹ್ಯಾರಿಸ್(5), ಜೋ ಬರ್ನ್ಸ್(1), ನಿಕ್ ಮ್ಯಾಡಿನ್​ಸನ್(14) ಬೇಗನೆ ಔಟ್ ಆದರು.

  ಈ ಸಂದರ್ಭ ನಾಯಕ ಅಲೆಕ್ಸ್ ಕ್ಯಾರಿ(58) ಹಾಗೂ ಬೆನ್ ಮೆಕ್​ಡೆರ್ಮಟ್ ಶತಕದ ಜೊತೆಯಾಟ ಆಡಿದರು. ಕ್ಯಾರಿ ನಿರ್ಗಮನದ ಬಳಿಕ ಜ್ಯಾಕ್ ವಿಲ್ಡರ್​ಮತ್ ಜೊತೆಯಾದ ಬೆನ್ ಭಾರತೀಯ ಬೌಲರ್​ಗಳ ಬೆವರಿಳಿಸಿದರು.142 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಮೊತ್ತವನ್ನು ಈ ಜೋಡಿ 300ರ ಗಡಿ ದಾಟಿಸಿತು. ಇಬ್ಬರೂ ಶತಕ ಸಿಡಿಸಿ ಮಿಂಚಿದರು.

  ಆದರೆ, 75 ಓವರ್​ಗೆ 4 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿರುವಾಗ ಪಂದ್ಯವನ್ನು ಡ್ರಾ ಎಂದು ತೀರ್ಮಾನಿಸಲಾಯಿತು. ಬೆನ್ 167 ಎಸೆತಗಳಲ್ಲಿ ಅಜೇಯ 107 ರನ್ ಗಳಿಸಿದರೆ, ಜ್ಯಾಕ್ 119 ಎಸೆತಗಳಲ್ಲಿ ಅಜೇಯ 111 ರನ್ ಬಾರಿಸಿದರು. ಭಾರತ ಪರ ಶಮಿ 2, ಸಿರಾಜ್ ಹಾಗೂ ವಿಹಾರಿ ತಲಾ 1 ವಿಕೆಟ್ ಪಡೆದರು.
  Published by:Vinay Bhat
  First published: