ಆಸ್ಟ್ರೇಲಿಯಾ ಎ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದ ರಹಾನೆ ಪಡೆ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿತು. ರಿಷಭ್ ಪಂತ್ ಹಾಗೂ ಹನುಮಾ ವಿಹಾರಿ ಶತಕದ ಜೊತೆ ಶುಭ್ಮನ್ ಗಿಲ್, ಅಗರ್ವಾಲ್ ಅರ್ಧಶತಕದ ನೆರವಿನಿಂದ ಆಸೀಸ್ಗೆ ಗೆಲ್ಲಲು ಟೀಂ ಇಂಡಿಯಾ 473 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಎ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಈ ನಡುವೆ ಎರಡನೇ ಇನ್ನಿಂಗ್ಸ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಶುಭ್ಮನ್ ಗಿಲ್ ಔಟ್ ಆದ ರೀತಿ ಚರ್ಚೆಗೆ ಗ್ರಾಸವಾಗಿದೆ. ಅನುಮಾನಾಸ್ಪದ ತೀರ್ಪಿಗೆ ಬ್ಯಾಟ್ ಕೆಳಗಿಟ್ಟು ಗಿನ್ ನಿರ್ಗಮಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ.
India vs Australia A: ಬೌಂಡರಿ-ಸಿಕ್ಸರ್ ಚಚ್ಚಿ ಆಸೀಸ್ ಬೌಲರ್ಗಳ ಬೆಂಡೆತ್ತಿದ ರಿಷಭ್ ಪಂತ್: ಸ್ಫೋಟಕ ಶತಕದ ವಿಡಿಯೋ ಇಲ್ಲಿದೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಮಯಾಂಕ್ ಜೊತೆ ಓಪನರ್ ಆಗಿ ಕಣಕ್ಕಿಳಿಯಲು ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎರಡನೇ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಗಿಲ್ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆದರೆ, 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು.
ಈ ಸಂದರ್ಭ 65 ರನ್ ಗಳಿಸಿರುವಾಗ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪೋಸ್ನ್ ಬೌಲಿಂಗ್ನಲ್ಲಿ ಗಿಲ್ ಔಟ್ ಆದರು. ಆದರೆ, ಗಿಲ್ ಹೇಗೆ ಔಟ್ ಆದರು ಎಂಬುವುದೆ ಕುತೂಹಲ. ಚೆಂಡು ಗಿಲ್ ಅವರ ಪ್ಯಾಡ್ಗೆ ತಗುಲಿ ಸ್ಲಿಪ್ನಲ್ಲಿದ್ದ ಸಿಯಾನ್ ಅಬಾಟ್ ಕೈ ಸೇರಿತು. ಚೆಂಡು ಅಬಾಟ್ ಕೈ ಸೇರುವ ಮುನ್ನ ಎಲ್ಬಿಗೆ ಮನವಿ ಮಾಡಿದರು. ಚೆಂಡು ವಿಕೆಟ್ಗಿಂತ ಸಾಕಷ್ಟು ಮೇಲಿದ್ದ ಕಾರಣ ಅಂಪೈರ್ ಔಟ್ ಕೊಡಲಿಲ್ಲ. ಇದರ ಬೆನ್ನಲ್ಲೆ ಕ್ಯಾಚ್ ಹಿಡಿದ ಕಾರಣ ಔಟ್ ಎಂದು ತೀರ್ಮಾನಿಸಿ ಆಸೀಸ್ ಆಟಗಾರರು ಸಂಭ್ರಮದಲ್ಲಿ ತೊಡಗಿದರು.
ಇಲ್ಲಿ ಕ್ಯಾಚ್ ಹಿಡಿದಿದ್ದು ನಿಜವಾದರು ಚೆಂಡು ಬ್ಯಾಟ್ಗೆ ತಗುಲಿದೆ ಎಂಬುದಕ್ಕೆ ಎಲ್ಲಿಯೂ ಸಾಕ್ಷ್ಯಾ ಇಲ್ಲ. ಇದನ್ನೇ ಆಕಾಶ್ ಚೋಪ್ರಾ ಕೂಡ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಟ್ವಿಟ್ಟರ್ನಲ್ಲಿ ಇದು ಮೋಸದಾಟ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದು ಅಭ್ಯಾಸ ಪಂದ್ಯವಾಗಿರುವುದರಿಂದ ಡಿಆರ್ಎಸ್ ಅವಕಾಶ ಇಲ್ಲ. ರಿಪ್ಲೇ ನಲ್ಲೂ ಚೆಂಡು ಬ್ಯಾಟ್ಗೆ ತಗುಲಿರುವುದು ಕಂಡುಬಂದಿಲ್ಲ.
Rohit Sharma: ಫಿಟ್ನೆಸ್ ಟೆಸ್ಟ್ನಲ್ಲಿ ಪಾಸ್, ಆದ್ರೆ ರೋಹಿತ್ ಶರ್ಮಾಗೆ ಎದುರಾಯಿತು ಮತ್ತೊಂದು ಸಂಕಷ್ಟ
ಎರಡನೇ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಶುಭ್ಮನ್ ಗಿಲ್ ಅವರ 43 ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅಜೇಯ 55 ರನ್ಗಳ ನೆರವಿನಿಂದ 194 ರನ್ ಗಳಿಸಿತ್ತು. ಇತ್ತ ಆಸ್ಟ್ರೇಲಿಯಾ ಎ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 108 ರನ್ಗೆ ಸರ್ವಪತನ ಕಂಡಿತು.
ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಹನುಮಾ ವಿಹಾರಿ(ಅಜೇಯ 104), ರಿಷಭ್ ಪಂತ್(ಅಜೇಯ 103), ಶುಭ್ಮನ್ ಗಿಲ್(65) ಹಾಗೂ ಮಯಾಂಕ್ ಅಗರ್ವಾಲ್(61) ಆಟದ ನೆರವಿನಿಂಧ ಭಾರತ 386 ರನ್ಗೆ ಡಿಕ್ಲೇರ್ ಘೋಷಿಸಿ ಆಸ್ಟ್ರೇಲಿಯಾ ಎ ತಂಡಕ್ಕೆ ಗೆಲ್ಲಲು 473 ರನ್ಗಳ ಟಾರ್ಗೆಟ್ ನೀಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ