India vs Australia A: ಬೌಂಡರಿ-ಸಿಕ್ಸರ್ ಚಚ್ಚಿ ಆಸೀಸ್ ಬೌಲರ್​ಗಳ ಬೆಂಡೆತ್ತಿದ ರಿಷಭ್ ಪಂತ್: ಸ್ಫೋಟಕ ಶತಕದ ವಿಡಿಯೋ ಇಲ್ಲಿದೆ

ಬಳಿಕ ಶುರುವಾಗಿದ್ದು ರಿಷಭ್ ಪಂತ್ ಆಟ. ಹನುಮ ವಿಹಾರಿ ಜೊತೆಗೂಡಿ ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸೀಸ್ ಬೌಲರ್​ಗಳ ಬೆವರಿಳಿಸಿದರು.

Rishabh Pant

Rishabh Pant

  • Share this:
    ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರಹಾನೆ ಪಡೆ 2ನೇ ಇನ್ನಿಂಗ್ಸ್​ನಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದ್ದು, ರಿಷಭ್ ಪಂತ್ ಹಾಗೂ ಹನುಮಾ ವಿಹಾರಿ ಅವರ ಶತಕದ ನೆರವಿನಿಂದ ಬರೋಬ್ಬರಿ 472 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿದ್ದು ಶತಕ ಸಿಡಿಸಿರುವ ಪಂತ್ ಹಾಗೂ ವಿಹಾರಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಶುಭ್ಮನ್ ಗಿಲ್ ಅವರ 43 ಹಾಗೂ ಜಸ್​ಪ್ರೀತ್ ಬುಮ್ರಾ ಅವರ ಅಜೇಯ 55 ರನ್​ಗಳ ನೆರವಿನಿಂದ 194 ರನ್​ ಗಳಿಸಿತ್ತು. ಇತ್ತ ಆಸ್ಟ್ರೇಲಿಯಾ ಎ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 108 ರನ್​ಗೆ ಸರ್ವಪತನ ಕಂಡಿತು.

    Team India: 2020ರಲ್ಲಿ ಅತ್ಯಂತ ದುಬಾರಿ ಎನಿಸಿದ ಟೀಮ್ ಇಂಡಿಯಾ ಬೌಲರ್ ಇವರೇ..!





    ಹೀಗೆ 86 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಆರಂಭದಲ್ಲೇ ಪೃಥ್ವಿ ಶಾ(3) ವಿಕೆಟ್ ಕಳೆದುಕೊಂಡಿತಾದರೂ, ಎರಡನೇ ವಿಕೆಟ್​ಗೆ ಶುಭ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಈ ಜೋಡಿ ಶತಕದ(104) ಜೊತೆಯಾಟ ಆಡಿತು.

    ಗಿಲ್ 78 ಎಸೆತಗಳಲ್ಲಿ 65 ರನ್ ಬಾರಿಸಿದ ಅಗರ್ವಾಲ್ 120 ಎಸೆತಗಳಲ್ಲಿ 61 ರನ್ ಸಿಡಿಸಿದರು. ನಾಯಕ ಅಜಿಂಕ್ಯಾ ರಹಾನೆ 38 ರನ್​ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಶುರುವಾಗಿದ್ದು ರಿಷಭ್ ಪಂತ್ ಆಟ. ಹನುಮ ವಿಹಾರಿ ಜೊತೆಗೂಡಿ ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸೀಸ್ ಬೌಲರ್​ಗಳ ಬೆವರಿಳಿಸಿದರು. ಚೆಂಡನ್ನು ಬೌಂಡರಿ-ಸಿಕ್ಸರ್​ಗೆ ಅಟ್ಟಿದರು. ಅದರಲ್ಲೂ ಪಂತ್ ದಿನದಾಟದ ಕೊನೆಯ ಓವರ್​ನಲ್ಲಿ 22 ರನ್ ಸಿಡಿಸಿದರು.

    Andre Russell: IPL ವೈಫಲ್ಯಕ್ಕೆ ಕಾರಣ ತಿಳಿಸಿದ ಆ್ಯಂಡ್ರೆ ರಸೆಲ್..!



    ವಿಹಾರಿ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇಬ್ಬರೂ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಪಂತ್ ಕೇವಲ 73 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 103 ರನ್ ಚಚ್ಚಿದರೆ, ವಿಹಾರಿ 194 ಎಸೆತಗಳಲ್ಲಿ 104 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 90 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ 472 ರನ್​ಗಳ ಬೃಹತ್ ಮುನ್ನಡೆಯಲ್ಲಿದೆ.
    Published by:Vinay Bhat
    First published: