India vs Australia A: ಆಸೀಸ್ ಬೌಲರ್​ಗಳ ಬೆವರಿಳಿಸಿದ ಗಿಲ್: ಉತ್ತಮ ಮುನ್ನಡೆಯತ್ತ ಭಾರತ

86 ರನ್​ಗಳ ಮುನ್ನಡೆಯೊಂದಿಗೆ ಇಂದು ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಆರಂಭದಲ್ಲೇ ಪೃಥ್ವಿ ಶಾ(3) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಶುಭ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು.

Gill

Gill

 • Share this:
  ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಕಾಂಗರೂ ಪಡೆಯನ್ನು 108 ರನ್​ಗೆ ಆಲೌಟ್ ಮಾಡಿದ ರಹಾನೆ ಪಡೆ 86 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ. ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ, ಮಯಾಂಕ್ ಅಗರ್ವಾಲ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ತಂಡದ ಮೊತ್ತ 100ರ ಗಡಿ ದಾಟಿದೆ.

  ನಿನ್ನೆ ಮೊದಲ ದಿನದಾಟ ಆರಂಭಿಸಿದ್ದ ಭಾರತ ಆಸ್ಟ್ರೇಲಿಯಾ ಎ ಬೌಲರ್​ಗಳ ದಾಳಿಗೆ ಕುಸಿದು ಹೋಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ಮಯಾಂಕ್ ಅಗರ್ವಾಲ್(2) ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ(40) ಹಾಗೂ ಶುಭ್ಮನ್ ಗಿಲ್(43) 63 ರನ್​ಗಳ ಕಾಣಿಕೆ ನೀಡಿದರು.

  India vs Australia: ಬ್ಯಾಟಿಂಗ್​ನಲ್ಲಿ ಬುಮ್ರಾ ಬೂಂ: ಅರ್ಧಶತಕ ಸಿಡಿಸಿ ಟೀಂ ಇಂಡಿಯಾ ಮಾನ ಕಾಪಾಡಿದ ಜಸ್​ಪ್ರೀತ್

  ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಭಾರತ 123 ರನ್​ಗೆ 9 ವಿಕೆಟ್ ಕಳೆದುಕೊಂಡಿತು. ಆದರೆ, ಈ ಸಂದರ್ಭ ಒಂದಾದ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬುಮ್ರಾ 57 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 55 ರನ್ ಗಳಿಸಿದರೆ, ಸಿರಾಜ್ 34 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು. ಈ ಮೂಲಕ ಬಾರತ 48.3 ಓವರ್​ನಲ್ಲಿ 194 ರನ್​ಗೆ ಆಲೌಟ್ ಆಯಿತು.

  ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಎ ಮೊಹಮ್ಮದ್ ಶಮಿ ಹಾಗೂ ನವ್​ದೀಪ್ ಸೈನಿ ಬೆಂಕಿಯ ಚೆಂಡಿಗೆ ನಲುಗಿತು. 32.2 ಓವರ್​ನಲ್ಲಿ ಕೇವಲ 108 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ನಾಯಕ ಅಲೆಕ್ಸ್ ಕ್ಯಾರಿ 32 ರನ್ ಗಳಿಸಿದ್ದೇ ಹೆಚ್ಚು. ಶಮಿ ಹಾಗೂ ಸೈನಿ ತಲಾ 3 ವಿಕೆಟ್ ಕಿತ್ತರೆ, ಬುಮ್ರಾ 2 ವಿಕೆಟ್ ಪಡೆದರು.

  86 ರನ್​ಗಳ ಮುನ್ನಡೆಯೊಂದಿಗೆ ಇಂದು ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಆರಂಭದಲ್ಲೇ ಪೃಥ್ವಿ ಶಾ(3) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಶುಭ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಈ ಜೋಡಿ ಶತಕದ(104) ಜೊತೆಯಾಟ ಆಡಿತು.

  Happy Birthday Yuvraj Singh: 39ನೇ ವಸಂತಕ್ಕೆ ಕಾಲಿಟ್ಟ ಯುವರಾಜ; ಸಿಕ್ಸರ್ ಕಿಂಗ್​ನ ಅಪರೂಪದ ಚಿತ್ರಪಟಗಳು ಇಲ್ಲಿದೆ!

  ಗಿಲ್ 78 ಎಸೆತಗಳಲ್ಲಿ 65 ರನ್ ಬಾರಿಸಿದರು. ಸದ್ಯ ಭಾರತ 2 ವಿಕೆಟ್ ಕಳೆದುಕೊಂಡಿದ್ದು ಅಗರ್ವಾಲ್ ಜೊತೆ ಹನುಮಾ ವಿಹಾರಿ ಕ್ರೀಸ್​ನಲ್ಲಿದ್ದಾರೆ.
  Published by:Vinay Bhat
  First published: